Headlines

ಬೆಳಗಿನಜಾವ ಬಸ್ ಹತ್ತಿದ ಮಹಿಳೆ – ಸ್ವಲ್ಪ ದೂರ ತೆರಳಿದಾಗ ಕಾದಿತ್ತು ಆಘಾತ

ಬೆಳಗಿನಜಾವ ಬಸ್ ಹತ್ತಿದ ಮಹಿಳೆ – ಸ್ವಲ್ಪ ದೂರ ತೆರಳಿದಾಗ ಕಾದಿತ್ತು ಆಘಾತ Woman boards early morning bus – shock awaits her after walking a short Woman boards early morning bus – shock awaits her after walking a short distance ಶಿವಮೊಗ್ಗ: ಬೆಳಗಿನ ಜಾವ ಬಸ್‌ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಬಂಗಾರದ ನೆಕ್ಲೇಸ್‌  ಇದ್ದ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೃತ್ಯ…

Read More

RIPPONPETE | ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ

ರಿಪ್ಪನ್ ಪೇಟೆಯಲ್ಲಿ ಋಗ್ ಉಪಾಕರ್ಮ – ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ ರಿಪ್ಪನ್ ಪೇಟೆ : ಪಟ್ಟಣದ ವಿಶ್ವಕರ್ಮ ಸಮಾಜದವರಿಂದ, ವಿರಾಟ್ ವಿಶ್ವಕರ್ಮ ಸಂಘದ ಸಹಭಾಗಿತ್ವದಲ್ಲಿ ಋಗ್ ಉಪಾಕರ್ಮದ ಪ್ರಯುಕ್ತ ಭವ್ಯವಾದ ಜನಿವಾರ ಧಾರಣೆ ಹಾಗೂ ವಿಶ್ವಕರ್ಮ ದೇವರ ಯಜ್ಞ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮವು ಸಮಾಜ ಬಾಂಧವರ ಸಕ್ರಿಯ ಸಹಭಾಗಿತ್ವದಲ್ಲಿ, ಕುಲಾಪುರೋಹಿತರಾದ ಚೇತನ್ ಪುರೋಹಿತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಮಂಜುನಾಥ್ ಆಚಾರ್ಯ (ಗ್ಯಾರೇಜ್),…

Read More

ಪ್ರೀತಿಸಿದ ಹುಡುಗಿಯ ಮನೆ ಮುಂದೆ ವಿಷ ಕುಡಿದು ಆಸ್ಪತ್ರೆಗೆ ಸೇರಿದ ಪಾಗಲ್ ಪ್ರೇಮಿ.!! ಪ್ರೇಮ್ ಕಹಾನಿ ಮೆ ಪಾಯಿಸನ್ ಸ್ಟೋರಿ !!!

ಹೊಸನಗರ : ಎಂಟು ವರ್ಷದ ಪ್ರೀತಿಯನ್ನು ಪ್ರಿಯತಮೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಯ‌ ಮುಂದೆಯೇ ಯುವಕನೋರ್ವ ವಿಷ ಸೇವಿಸಿ‌ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದೆ. ಯುವಕನ ವರ್ತನೆಗೆ ರೋಸತ್ತು,ಬೇಸರವಾಗಿ ಯುವತಿಯ ತಾಯಿ ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ 8 ವರ್ಷದ ಹಿಂದೆ ಜಯನಗರ ಯುವತಿಯೊಂದಿಗೆ ಪ್ರೀತಿ ಹುಟ್ಟಿದೆ. ಆರಂಭದಲ್ಲಿ ಇಬ್ವರಿಗೂ ಚೆನ್ನಾಗಿದ್ದ ಪ್ರೀತಿ ಕಾಲಕ್ರಮೇಣ ಯುವತಿಗೆ ಬೇಸರವೆನಿಸಿದೆ. ಯುವಕನ ವಿಪರೀತಿ ಕುಡಿತ ಹಾಗೂ ಆತನ ಇತರೆ ಚಟುವಟಿಕೆಗಳಿಗೆ ಯವತಿ ರೋಸತ್ತಿ…

Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ:

     ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಗಾಜಿನಗೋಡು ಗ್ರಾಮದ ನಿವಾಸಿ, ಹೊಸನಗರ ತಾಲೂಕು ಗಂಗಾಮತಸ್ಥ ಸಂಘದ ಮಾಜಿ ನಿರ್ದೇಶಕ ಕೊಲ್ಲಪ್ಪ ಇವರು ಕೂಲಿ ಕೆಲಸಕ್ಕೆಂದು ಮೂರು ದಿನಗಳ ಹಿಂದೆ ಹೋದವರು ಇಂದು ಗಾಜಿನಗೋಡು ಸಮೀಪ ಕುಮದ್ವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಕಳೆದ ಮೂರು ನಾಲ್ಕು ದಿನದಿಂದ ಬರುತ್ತಿರುವ ಅತಿಯಾದ ಮಳೆಗೆ ಕುಮದ್ವತಿ ನದಿ ಹರಿಯುತ್ತಿದ್ದು ಕಾಲುಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಗಾಜಿನ ಗೋಡು ಮತ್ತು  ಹಾರಂಬಳ್ಳಿ ಮಧ್ಯೆ ಹರಿಯುತ್ತಿರುವ ನದಿ ಇದಾಗಿದ್ದು ಕೂಲಿಯೂ ಸೇರಿದಂತೆ ಬೇರೆ…

Read More

ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ | ಅತ್ತೆ , ನಾದಿನಿ ಪರಾರಿ

ಕೌಟುಂಬಿಕ ಕಲಹ ಹಿನ್ನಲೆ ವಿಷ ಸೇವಿಸಿ ಗೃಹಿಣಿ ಸಾವು – ಪತಿ , ಮಾವನ ಬಂಧನ , ಅತ್ತೆ , ನಾದಿನಿ ಪರಾರಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತಳನ್ನು ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪನವರ ಮಗಳು ಪೂಜಾ (30) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ಪೂಜಾಳ ವಿವಾಹವಾಗಿತ್ತು….

Read More

ಆನೆ ದಾಳಿಗೆ ಬೆಳೆ ಹಾನಿ : ಸೂಕ್ತ ಪರಿಹಾರಕ್ಕಾಗಿ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ರೈತರ ಪ್ರತಿಭಟನೆ

ಆನೆಯಿಂದ, ಬೆಳೆ ಹಾನಿ: ಸೂಕ್ತ ಪರಿಹಾರಕ್ಕಾಗಿ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ರೈತರ ಪ್ರತಿಭಟನೆ ಶಿವಮೊಗ್ಗ : ರೈತರ ಬೆಳೆ ನಾಶ ಮಾಡುತ್ತಿರುವ ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಲೆನಾಡು ಪ್ರದೇಶದ ರೈತರು ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದೆ….

Read More

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು ಬಿರಿಯಾನಿ ತಿನ್ನಲು ಹೊಟೇಲ್ ಗೆ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಮಚ್ಚು ಮತ್ತು ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರಿನ ಕನಸಿನಕಟ್ಟೆ ರಸ್ತೆಯ ಬಾರ್ ನಲ್ಲಿ ನಡೆದಿದೆ. ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ, ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಳೆಹೊನ್ನೂರಿನ ಉಪ್ಪಾರರ ಬೀದಿಯ ರವಿ ಹಲ್ಲೆಗೊಳಗಾದವರು. ಕನಸಿನಕಟ್ಟೆ ರಸ್ತೆಯಲ್ಲಿರುವ ಬಾರ್‌ನಲ್ಲಿ ಘಟನೆ ಸಂಭವಿಸಿದೆ. ರವಿ…

Read More

ಮೆಗ್ಗಾನ್ ಆವರಣದಲ್ಲಿ ಮೃತ ಮಗುವನ್ನು ಎಳೆದು ತಂದ ನಾಯಿ|Shivamogga news

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಗಾಗ ನಂಬಲಾಗದಂತಹ ಘಟನೆಗಳು ನಡೆಯುತ್ತಿರುತ್ತವೆ. ಬೆನ್ನಲ್ಲೆ ಮುಚ್ಚಿಹಾಕುವಂತಹ ಘಟನೆಗಳು ನಡೆಯುತ್ತಿರುತ್ತವೆ. ಸದ್ಯ ನಡೆದ ಘಟನೆಯೊಂದು ದೊಡ್ಡಪೇಟೆ ಪೊಲೀಸರು ಕೇಸ್​ ದಾಖಲಿಸಿದ್ದರಿಂದ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್​ 31 ರಂದು ಬೆಳಗಿನ ಜಾವ, ನಾಯಿಯೊಂದು ಎಳೆಮಗುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್​ನ ಬಳಿಯಲ್ಲಿ ಓಡಾಡಿದೆ. ಇದನ್ನ ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.  ಭದ್ರತಾ ಸಿಬ್ಬಂದಿಯು ನಾಯಿಯನ್ನು ಹೆದರಿಸಿ ಓಡಿಸಿ, ಮಗುವನ್ನ ಹೆರಿಗೆ ವಾರ್ಡ್​ಗೆ ತಂದು ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಮಗು…

Read More

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ನೀಡಿ ಯುವ ಸಮಾಜಕ್ಕೆ ಪ್ರೇರಣೆಯಾದ ಕಾಲೇಜಿನ ಯುವತಿ :

ರಿಪ್ಪನ್‌ಪೇಟೆ : ದಾನ ಮಾಡುವವರಿಗೆ ಇಂತಹದೇ ಎಂಬ ನಿಯಮವೇನು ಇಲ್ಲ ಯಾವುದಾದರೇನು ಕೊಡುವ ಮನಸ್ಸು ಇದ್ದರೆ ಏನು ಬೇಕಾದರೂ ಕೊಡಬಹುದು ಎಂಬುದಕ್ಕೆ ಇಲ್ಲಿನ ಶಬರೀಶ್ ನಗರದ ನಿವಾಸಿ ಕುಮಾರಿ ಚಂದನ ಜಿ.ನಾಯಕ್ ಮಾದರಿಯಾಗಿದ್ದಾಳೆ. ಕಣ್ಣು-ರಕ್ತ – ವಸ್ತ-ಅನ್ನದಾನ-ವಿದ್ಯಾದಾನ ಗೋ ದಾನ, ಧನ ದಾನ ಹೀಗೆ ಹತ್ತು ಹಲವು ವಿಧದಲ್ಲಿ ದಾನ ಮಾಡುವುದನ್ನು ನಾವು  ಕೇಳಿರುತ್ತೇವೆ ಅದರೆ ಇಲ್ಲಿನ ಯುವತಿಯೊಬ್ಬಳು ತನ್ನ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗೆ ಮಾರಕ ರೋಗದ…

Read More

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – KTM ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ ನಗರದ ನವುಲೆಯ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತವಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.  ಜೆಎನ್ ಸಿಸಿ ಇಂಜಿನಿಯರಿಂಗ್ ಕಾಲೇಜ್‌ನ ವಿದ್ಯಾರ್ಥಿ,ಕಾಶಿಪುರದ ನಿವಾಸಿ ಪುನೀತ್( 20) ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಕೆಟಿಎಂ ಬೈಕ್ ಹಾಗೂ ಹೀರೋ ಹೋಂಡಾ ಪ್ಯಾಶನ್ ಪ್ರೊ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಂತರದಲ್ಲಿ ಕೆಟಿಎಮ್ ಬೈಕ್ ಎದುರಿನಲ್ಲಿದ್ದ KMF ಹಾಲಿನ ವಾಹನಕ್ಕೆ ಡಿಕ್ಕಿಯಾಗಿದೆ‌.ಈ ಅಪಘಾತದ ರಭಸಕ್ಕೆ ಕೆಟಿಎಮ್ ಬೈಕ್ ಸವಾರ ಪುನೀತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು , ಇನ್ನೊಂದು…

Read More