Headlines

ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಕಾರ್ಯವೈಖರಿಗೆ ಪೊಲೀಸ್ ಇಲಾಖೆಯಿಂದ ಪ್ರಶಂಸನಾ ಪತ್ರ | PSI

ರಿಪ್ಪನ್‌ಪೇಟೆ : ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ರವರ ಕಾರ್ಯವೈಖರಿ ಹಾಗೂ ಶೀಘ್ರ ಕಡತ ವಿಲೇವಾರಿಯನ್ನು ಮೆಚ್ಚಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸನಾ ಪತ್ರ ವಿತರಿಸಲಾಗಿದೆ. ಶುಕ್ರವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಇಲಾಖಾ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಆರ್ ಹಿತೇಂದ್ರ IPS  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಅವರು ಪ್ರಶಂಸನಾ ಪತ್ರ ವಿತರಿಸಿದರು. ರಿಪ್ಪನ್‌ಪೇಟೆ ಪಿಎಸ್‌ಐ…

Read More

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದುರ್ಮರಣ

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದುರ್ಮರಣ A government school headmaster died in a head-on motorcycle collision near Nedaravalli on Tuesday evening while returning home after school duties. A case has been registered at Anandapuram Police Station. ಆನಂದಪುರಂ: ಶಾಲೆಯ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಬೈಕ್‌ಗಳ ಮುಖಾಮುಖಿ…

Read More

ಡಿನೋಟಿಫಿಕೇಷನ್ ರದ್ದುಗೊಳಿಸಿದ ರಾಜ್ಯ ಸರ್ಕಾರ : ಅತಂತ್ರಗೊಂಡ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು|Sharavathi

ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಮತ್ತೆ ಕಮರಿ‌ ಹೋಗಿದೆ.ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ. ಈ ಮೂಲಕ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಮತ್ತೊಮ್ಮೆ ಅನಾಥರನ್ನಾಗಿಸಿದೆ. ಹೌದು, ವಿದ್ಯುತ್ ಉತ್ಪಾದನೆ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಶಿವಮೊಗ್ಗದ ಸಾಗರ, ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಂದಿನ‌ ರಾಜ್ಯ ಸರ್ಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನ…

Read More

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 352ನೇ ಆರಾಧನ ಮಹೋತ್ಸವ

ಅದ್ದೂರಿಯಾಗಿ ಜರುಗಿದ ಗುರುಸಾರ್ವಭೌಮರ 352ನೇ ಆರಾಧನ ಮಹೋತ್ಸವ  ರಿಪ್ಪನ್‌ಪೇಟೆ: ಸಮೀಪದ ಬೈರಾಪುರ ಗ್ರಾಮದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಯಿಂದ 352ನೇ ಗುರುಸಾರ್ವಭೌಮರ ಆರಾಧನಾ ಮಹೋತ್ಸವವು ಸಂಭ್ರಮದೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಗುರುರಾಯರಿಗೆ ಪಂಚಾಮೃತ ಅಭಿಷೇಕ, ಪವಮಾನ ಪೂಜೆ ಹೋಮ ಹವನಗಳು ನಂತರ ರಾಯರಿಗೆ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಆರಾಧನ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರ ದಂಡು ಹರಿದು ಬಂದಿತು.

Read More

ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ

ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ತೀರ್ಥಹಳ್ಳಿ : ಹೆಲ್ಮೆಟ್ ಧರಿಸದೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದ ಅಪ್ರಾಪ್ತ ಯುವಕನ ಪ್ರಕರಣದಲ್ಲಿ ನ್ಯಾಯಾಲಯ ಬೈಕ್ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದೆ. 17 ವರ್ಷದ ಯುವಕ ಹೆಲ್ಮೆಟ್ ಧರಿಸದೆ, ಲೈಸೆನ್ಸ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ. ತೀರ್ಥಹಳ್ಳಿ ಪೊಲೀಸರು ಸೋಮವಾರ ತಪಾಸಣೆ ಮಾಡುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಸಂಚಾರ ನಿಯಮ ಉಲ್ಲಂಘನೆ, ಅಪ್ರಾಪ್ತ ಯುವಕನಿಗೆ ಬೈಕ್ ನೀಡಿದ…

Read More

ನರಿಯನ್ನು ಭೇಟೆಯಾಡಿದ ಭಾರಿ ಗಾತ್ರದ ಹೆಬ್ಬಾವು|python

ನರಿಯನ್ನು ಹಿಡಿದ ಹೆಬ್ಬಾವು…!  ಸಾಗರ: ಹೆಬ್ಬಾವೊಂದು ನರಿಯನ್ನು ಹಿಡಿದ ಘಟನೆ ಐ. ಟಿ. ಐ ಕಾಲೇಜ್ ಹತ್ತಿರ ನಡೆದಿದ್ದು, ಹೆಬ್ಬಾವು ನರಿಯನ್ನು ಹಿಡಿದಿರುವ ದೃಶ್ಯ ವೈರಲಾಗಿದೆ. ತಾಲೂಕಿನ ರಾಮನಗರದ ಸಮೀಪದ ಐ. ಟಿ. ಐ ಕಾಲೇಜ್ ಸಮೀಪ ಹೆಬ್ಬಾವು ನರಿಯನ್ನು ಹಿಡಿದು ತನ್ನ ದೇಹದಿಂದ ಸುತ್ತಿಕೊಂಡು ಸಾಯಿಸಿದೆ. ಇದನ್ನು ಸ್ಥಳೀಯರು ನೋಡಿ ಸ್ನೇಕ್ ಅನುಪ ಅವರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಅರಣ್ಯ ಅಧಿಕಾರಿಗಳ ಜೊತೆಗೆ ಆಗಮಿಸಿ ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ. ನಂತರ ಹೆಬ್ಬಾವನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.

Read More

ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಏ.5ರಿಂದ ಪಾದಯಾತ್ರೆ; ಏ.6ರಂದು ರಿಪ್ಪನ್‌ಪೇಟೆಯಲ್ಲಿ ಬೃಹತ್ ಸಮಾವೇಶ

ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಏ.5ರಿಂದ ಪಾದಯಾತ್ರೆ; ಏ.6ರಂದು ರಿಪ್ಪನ್‌ಪೇಟೆಯಲ್ಲಿ ಬೃಹತ್ ಸಮಾವೇಶ ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಏಪ್ರಿಲ್ 5ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್ 6ರಂದು ರಿಪ್ಪನ್‌ಪೇಟೆಯ ಸಾಗರ ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮೂಲೆಗದ್ದೆ ಸದಾನಂದಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಎಂದರು. ಈ ಕುರಿತು ರಿಪ್ಪನ್‌ಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುವಕರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪದೊಂದಿಗೆ ‘ಬದಲಾಗೋರು ತಮ್ಮ ಬದಲಾಗಿರಿ. ಬದಲಾಗುವ ಮುನ್ನ…

Read More

ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿನಿಂದ ದಿನದ 24 ಗಂಟೆಯೂ ವೈದ್ಯರ ಸೇವೆ ಲಭ್ಯ

ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿನಿಂದ ದಿನದ 24 ಗಂಟೆಯೂ ವೈದ್ಯರ ಸೇವೆ ಲಭ್ಯ ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕಳೆದ ಕೆಲವು ವರ್ಷಗಳಿಂದ ಹಿಡಿದಿರುವ ಗ್ರಹಣ ಬಿಡುವ ಲಕ್ಷಣಗಳು ಗೋಚರಿಸುತ್ತಿದೆ. ಹೌದು ಹೊಸನಗರ-ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೈಗಾರಿಕಾ ಅರಣ್ಯ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರ ದಿಟ್ಟ ನಿರ್ಧಾರದಿಂದ ಸರ್ಕಾರಿ ಆಸ್ಪತ್ರೆಗೆ ಅಂಟಿದ ಗ್ರಹಣ ಕೊನೆಗೂ ಬಿಟ್ಟಿದೆ. ಇಂದಿನಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವೈದ್ಯರು ಕಾರ್ಯ ನಿರ್ವಹಿಸಲಿದ್ದು ದಿನದ 24 ಗಂಟೆಯೂ…

Read More

ಶಿವಮೊಗ್ಗ : ನೌಕರಿ ಖಾಯಂಗೊಳಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ :

ಶಿವಮೊಗ್ಗ : ದೀರ್ಘಕಾಲದ  ಸೇವೆಯನ್ನು ಬಳಸಿಕೊಂಡ ಇಲಾಖೆಯು ಸೇವಾ ವಿಲೀನಗೊಳಿಸಿ ಕಾಯಂಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಲೇಖ ಪತ್ರ 1ಮತ್ತು 2 ಅನುಸಾರ ದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆ ಮಾಡುವ ಬಗ್ಗೆ ಪರಿಶೀಲಿಸಿ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2021ರ ಅವಧಿಯ ವರೆಗೆ ನಿಯಮಾನುಸಾರವಾಗಿ ಆಯ್ಕೆಗೊಂಡ 14.564 ಅತಿಥಿ…

Read More

Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!!

Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!! ವ್ಯಕ್ತಿಯೊಬ್ಬರ ಮೃತ ದೇಹವೊಂದು ಗದ್ದೆಯಲ್ಲಿ ದೊರೆಕಿರುವ ಘಟನೆ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರ ಹರಿಗೆಯ ನಿವಾಸಿ ವಾಸು ಎಂದು ಗುರುತಿಸಲಾಗಿದೆ. ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟೊಯೋಟಾ ಶೋ ರೂಂ ಹಿಂಭಾಗದ ಗರುಡ ಲೇಔಟ್ ಬಳಿಯ ಗದ್ದೆಯಲ್ಲಿ ಗುತ್ತಿಗೆದಾರನ ಮೃತ ದೇಹ ಪತ್ತೆಯಾಗಿದ್ದು ಇದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.‌…

Read More