ರಿಪ್ಪನ್ ಪೇಟೆ : ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ : ರಾಷ್ಟ್ರೀಯ ಯುವ ದಿನದ ಇತಿಹಾಸ

ರಿಪ್ಪನ್ ಪೇಟೆ : ರಾಷ್ಟ್ರೋತ್ಥಾನ ಬಳಗದ ವತಿಯಿಂದ ಇಲ್ಲಿಯ ರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರೆಸ್ಸೆಸ್ ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ ಮಾತನಾಡಿ  ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. 18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ ಅವರ 159ನೇ ಜನ್ಮಜಯಂತಿ ದಿನವನ್ನು ಇಂದು ನಾವು ರಾಷ್ಟ್ರೀಯ…

Read More

ರಿಪ್ಪನ್‌ಪೇಟೆ : ಕ್ಷತ್ರಿಯ ಮರಾಠ ಯುವ ವೇದಿಕೆಗೆ ಜಾಗ ಮಂಜೂರಾತಿಗೆ ಸಂಪುಟ ಸಭೆ ಅನುಮೋದನೆ – ಶಾಸಕರಿಗೆ ಅಭಿನಂದನೆ ಸಲ್ಲಿಕೆ|Ripponpet

ರಿಪ್ಪನ್ ಪೇಟೆ : ಪಟ್ಟಣದ ಕ್ಷತ್ರೀಯ ಮರಾಠ ಯುವ ವೇದಿಕೆಯ ಬಹುವರ್ಷಗಳ ಬೇಡಿಕೆಯನ್ನು ಹರತಾಳು ಹಾಲಪ್ಪ ರವರ ವಿಶೇಷ ಪ್ರಯತ್ನದಿಂದ ಈಡೇರಿದ್ದು ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಾಗರ -ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರ ವಿಶೇಷ ಪ್ರಯತ್ನದಿಂದ ಹೊಸನಗರ ತಾಲೂಕಿನ ರಿಪ್ಪನಪೇಟೆಯ “ಕ್ಷತ್ರಿಯ ಮರಾಠ ಯುವ ವೇದಿಕೆ” ಯ ಬಹು ವರ್ಷಗಳ ಬೇಡಿಕೆಯಾಗಿದ್ದ, ಬಡ ಮಕ್ಕಳ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣ ಉದ್ದೇಶಕ್ಕೆ ಕೆರೆಹಳ್ಳಿ ಗ್ರಾಮದ ಸ.ನಂ 37 ರಲ್ಲಿ, 2…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಬರಹಗಾರರ ಸಂಘ ಉದ್ಘಾಟನೆ ಹಾಗೂ ಅನ್ನದಾತ ಕವಿಗೋಷ್ಠಿ:’

ಶಿವಮೊಗ್ಗ: ನೂತನವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಜಿಲ್ಲಾ ಸಂಘವು ದಿನಾಂಕ:-04-07-2021 ನೇ ಭಾನುವಾರ ದಂದು  ಉದ್ಘಾಟನೆಯಾಯಿತು.ಈ ಸಂದರ್ಭದಲ್ಲಿ ಶ್ರೀ ಮಧುನಾಯ್ಕ ಲಂಬಾಣಿ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಈ ಜಿಲ್ಲಾ ಸಂಘವನ್ನು ಉದ್ಘಾಟಿಸಿ.ಹಸಿರ ಮಡಿಲಲಿ ಹಸನವಾದ ಸಾಹಿತ್ಯ ಸಂಗಮ ಕ್ಷೇತ್ರದಲ್ಲಿ ನೂತನ ಬರಹಗಾರರ ಸಂಘ ಪ್ರಸ್ತುತ ದಿನಗಳಲ್ಲಿ ಉದಯಿಸಿದ್ದು ಈ ಸಂಘವು ಮುಂದಿನ ದಿನಗಳಲ್ಲಿ ಅನೇಕ ಯುವ ಬರಹಗಾರರಿಗೆ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ…

Read More

Ripponpete | ವಿಕಲಚೇತನ ಯುವತಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದ ಪಿಎಸ್ಐ ಪ್ರವೀಣ್

Ripponpete | ವಿಕಲ ಚೇತನ ಯುವತಿಗೆ  ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದ ಪಿಎಸ್ಐ ಪ್ರವೀಣ್ ರಿಪ್ಪನ್ ಪೇಟೆ : ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋ ಕೊಪ್ಪ ಗ್ರಾಮದ ಬಡ ಕುಟುಂಬದ ವಿಕಲಚೇತನ ಯುವತಿ  ಉಷಾ(24) ರವರಿಗೆ ಧೈರ್ಯ ತುಂಬಿ ಆರ್ಥಿಕ ನೆರವು ನೀಡುವುದರ ಮೂಲಕ ಪಿಎಸ್ಐ ಪ್ರವೀಣ್ ಎಸ್ ಪಿ  ಸಾರ್ವಜನಿಕ ಪ್ರಶಂಸೆಗೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಬಳಗಕ್ಕೆ ಹಾರಂಬಳ್ಳಿ ವಾಸು ಎಂಬುವರು ಹಾರೋಗೊಪ್ಪ ವಿಕಲ…

Read More

ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ |Yellow alert

ರಾಜ್ಯದ ಶಿವಮೊಗ್ಗ , ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ,ಮತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಳಲ್ಲಿ ಭಾರೀ ಮಳೆಯಾಗಲಿದ್ದು, ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.  ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿಯೂ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್…

Read More

ಸೋರುತಿದೆ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ

ಸೋರುತಿದೆ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಅವರು ಓದಿದ ಶಾಲೆ ಈಗ ನಿರ್ವಹಣೆ ಇಲ್ಲದೆ ಸೋರುತ್ತಿದೆ. ಶತಮಾನದ ಇತಿಹಾಸ ಇದ್ದಂತಹ ಶಾಲೆಯಲ್ಲಿ ಈಗ ಸಂಪೂರ್ಣ ನೀರಿನ ಹೊಳೆ ಹರಿಯುತ್ತಿದೆ. ಸರ್ಕಾರಿ ಶಾಲೆಗೆ ಇದೆಂತಹ ಅವಸ್ಥೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಅಂಚೆ ಕಛೇರಿ ಪಕ್ಕದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿದ, ಅದರಲ್ಲೂ ರಾಷ್ಟ್ರ ಕವಿ ಕುವೆಂಪು ಅವರು ಓದಿದ್ದ ಶಾಲೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಸೋರುತ್ತಿದೆ. ಶಾಲೆಯಲ್ಲಿ…

Read More

Ripponpete | ಕೇಂದ್ರ ಸರ್ಕಾರದ ಯೋಜನೆ ಜನಸಾಮಾನ್ಯರಿಗೂ ತಲುಪಲಿ – ಬಿ ವೈ ಆರ್

ಕೇಂದ್ರ ಸರ್ಕಾರದ ಯೋಜನೆ ಜನಸಾಮಾನ್ಯರಿಗೂ ತಲುಪಲಿ – ಬಿ ವೈ ಆರ್ ರಿಪ್ಪನ್ ಪೇಟೆ:  ಸ್ವಾತಂತ್ರ್ಯ ಬಂದು ಆರು ದಶಕದಲ್ಲಿ ಕಾಣದ ಅಭಿವೃದ್ಧಿ, ಕೇವಲ 09 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿರುವುದು ಕೇಂದ್ರದ ಮೋದಿಜಿ ಸರ್ಕಾರದ ಸಾಧನೆಯಾಗಿದೆ ಎಂದು  ಶಿವಮೊಗ್ಗ ಲೋಕಸಭಾ ಕ್ಷೇತ್ರದ  ಸಂಸದ  ಬಿ ವೈ ರಾಘವೇಂದ್ರ  ಹೇಳಿದರು. ಪಟ್ಟಣದ ಭೂಪಾಳ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಕೇಂದ್ರದ ವಿಕಸಿತ ಸಂಕಲ್ಪ ಯಾತ್ರೆ ಗೆ ಚಾಲನೆ ನೀಡಿ ಅವರು ಮಾತನಾಡಿ ಅಭಿವೃದ್ಧಿಯನ್ನು ಹೊಂದಿದ,…

Read More

ಹೊಸನಗರ ತಾಲೂಕ್ ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ಆಯ್ಕೆ :

ಹೊಸನಗರ : ತಾಲ್ಲೂಕು ವೀರಶೈವ-ಲಿಂಗಾಯತ ಪರಿಷತ್ ನ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ರವರು ಆಯ್ಕೆಯಾಗಿದ್ದಾರೆ.  ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ದೇವರಸಲಕಿ,ದೇವು ಹುಳಿಗದ್ದೆ,ಲೋಕೇಶ್ ಶುಂಠಿಕೊಪ್ಪ,ಖಜಾಂಚಿಯಾಗಿ ಚಂದ್ರಶೇಖರ್ ಹಾಲುಗುಡ್ಡೆ,ಉಪಾದ್ಯಕ್ಷರುಗಳಾಗಿ ಜಗದೀಶ್ ಕುಕ್ಕಳಲೆ,ದಯಾಕರ್,ವಿಶ್ವನಾಥ್ ಹೊನ್ನೆಬೈಲು,ಪ್ರವೀಣ್ ಎಂ.ಗುಡ್ಡೆಕೊಪ್ಪ,ಕಮಲಾಕರ್ ಕಮದೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಸಚಿನ್ ಗೌಡ ಗರ್ತಿಕೆರೆ,ನಿರಂಜನ್ ರಿಪ್ಪನ್ ಪೇಟೆ,ಟಿ.ಎಲ್ ಷಣ್ಮುಖ,ಶಿವಮೂರ್ತಿ ಹರತಾಳು,ಸುದಾಕರ್ ಬೆನವಳ್ಳಿ.ಹಾಗೂ 26 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಹಾಗೂ ವೀರಶೈವ-ಲಿಂಗಾಯತ ಕಾವಲು ಪರಿಷತ್ತು,ಕಾನೂನು‌‌ ಪರಿಷತ್ತು,ಪ್ರಚಾರ ಪರಿಷತ್ತು ಗಳನ್ನು…

Read More

ಮನೆಯೊಳಗೆ ಮಹಿಳೆ ಮತ್ತು ಸಾಕು ನಾಯಿಯ ಕೊಳೆತ ಶವ ಪತ್ತೆ; ದುರ್ವಾಸನೆಯಿಂದ ಘಟನೆ ಬೆಳಕಿಗೆ

ಮನೆಯೊಳಗೆ ಮಹಿಳೆ ಮತ್ತು ಸಾಕು ನಾಯಿಯ ಕೊಳೆತ ಶವ ಪತ್ತೆ; ದುರ್ವಾಸನೆಯಿಂದ ಘಟನೆ ಬೆಳಕಿಗೆ A 57-year-old woman and her pet dog were found dead in a decomposed state inside a house in Ravindra Nagar, Shivamogga. The incident came to light after neighbors noticed a foul smell and alerted the police. ಶಿವಮೊಗ್ಗ, ಜೂನ್ 13: ನಗರದ ರವೀಂದ್ರನಗರದಲ್ಲಿ ವೃದ್ಧೆಯೊಬ್ಬರು ಹಾಗೂ ಅವರ…

Read More

ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಸರ ಅಪಹರಣ

ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಸರ ಅಪಹರಣ ಶಿವಮೊಗ್ಗ:   ಸ್ವಾಮಿ ವಿವೇಕಾನಂದ ಬಡವಾಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಎದುರು ಮಹಿಳೆಯೊಬ್ಬರು ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕಳ್ಳರು ಮಹಿಳೆಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಈ ಹಿನ್ನೆಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವೇಕಾನಂದ ಬಡಾವಣೆಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಎದುರು ರಸ್ತೆಯಲ್ಲಿ  ಮಹಿಳೆ ಶಾಪಿಂಗ್ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ, ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈ…

Read More