Headlines

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್ ರಿಪ್ಪನ್ ಪೇಟೆ : ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ನೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಂತಾಗಬೇಕು. ಕ್ರೀಡೆ ಸಹೋದರತ್ವವನ್ನು ಬೆಳಸುತ್ತದೆ. ದ್ವೇಷ ಅಸೂಯೆಯನ್ನು ದೂರ ಮಾಡುವ ಮೂಲಕ ಸಾಮರಸ್ಯವನ್ನು ಬೆಳಸುವಲ್ಲಿ ಕ್ರೀಡೆ ಉತ್ತಮ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿಯ ಪಿ.ಎಂ.ಘೋಷಣ್ ಸಹಾಯಕ ನಿರ್ದೇಶಕ ಜಿ.ಶೇಷಾಚಲ ನಾಯಕ್ ತಿಳಿಸಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ…

Read More

ANANDAPURA | ಸಾಲಬಾಧೆಗೆ ಬೇಸತ್ತು ಯುವಕ ನೇ*ಣಿಗೆ ಶರಣು

ANANDAPURA | ಸಾಲಬಾಧೆಗೆ ಬೇಸತ್ತು ಯುವಕ ನೇ*ಣಿಗೆ ಶರಣು ಸಾಲಬಾಧೆ ಮತ್ತು ಬೆಳೆ ನಷ್ಟದಿಂದ ಮನನೊಂದಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಮಂಜುನಾಥ್ ( 36 ) ಎಂದು ಗುರುತಿಸಲಾಗಿದೆ. ಮಂಜುನಾಥ್ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳಿಂದ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅವರ ಮೆಕ್ಕೆಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಕೃಷಿ ನಷ್ಟದಿಂದ ಆರ್ಥಿಕ…

Read More

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ

ಗಣೇಶೋತ್ಸವ , ಈದ್ ಮಿಲಾದ್ ಶಾಂತಿ ಸಭೆ | ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ – ಅಡಿಷನಲ್ ಎಸ್ ಪಿ ಕಾರ್ಯಪ್ಪ ಎ ಜಿ ರಿಪ್ಪನ್ ಪೇಟೆ : ಗಣೇಶೋತ್ಸವ ಈದ್‌ಮಿಲಾದ್ ಹಬ್ಬಕ್ಕೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು  ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ ತಿಳಿಸಿದರು. ರಿಪ್ಪನ್‌ಪೇಟೆ ಪೊಲೀಸ್ ಇಲಾಖೆಯವರು ಶಿವಮಂದಿರದಲ್ಲಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳು ಶಾಂತಿ…

Read More

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸಿ – ಜಿಲ್ಲಾಧಿಕಾರಿ ಕರೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸಿ – ಜಿಲ್ಲಾಧಿಕಾರಿ ಕರೆ ಶಿವಮೊಗ್ಗ : ಆಗಸ್ಟ್ 21 :  :  ಆಗಸ್ಟ್‌ರಂದು ನಡೆಯಲಿರುವ ಗಣೇಶ ಚತುರ್ಥಿ ಮತ್ತು ಸೆಪ್ಟಂಬರ್‌ಅಚರಿಸಲಿರುವ ಈದ್‌ಮಿಲಾದ್‌ಹಬ್ಬಗಳನ್ನು ಸರ್ವ ಧರ್ಮಗಳ ಬಂಧುಗಳು ಸೌಹಾರ್ಧಯುತವಾಗಿ ಸಡಗರ ಸಂಭ್ರಮಗಳಿಂದ ಆಚರಿಸಲು ಅಗತ್ಯವಿರುವ ಸಿದ್ಧತೆಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತದ ವತಿಯಿಂದ ಮಾಡಿಕೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ…

Read More

ಶಾರ್ಟ್ ಸರ್ಕ್ಯೂಟ್‌ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ

ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ ಹೊಸನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಹೊತ್ತಿ ಉರಿದಿರುವ ಘಟನೆ ಹೊಸನಗರ ತಾಲೂಕಿನ ಗೊರಗೋಡು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ಲಕ್ಷಣ್ ಅವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ದಂಪತಿಗಳು ವಾಸಿಸುತ್ತಿದ್ದರು. ದಂಪತಿಗಳು ಹೊರಗೆ ಹೋದ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿ ಬೆಂಕಿ…

Read More

ಧರ್ಮಸ್ಥಳಕ್ಕೆ ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಸಮಿತಿ ಭೇಟಿ

ಧರ್ಮಸ್ಥಳಕ್ಕೆ ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಸಮಿತಿ ಭೇಟಿ ರಿಪ್ಪನ್ ಪೇಟೆ: ಪಟ್ಟಣದ ಹಿಂದೂ ಮಹಾಸಭಾ ಸಮಿತಿಯ ಸದಸ್ಯರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಭೇಟಿಯ ವೇಳೆ ಸಮಿತಿ ಸದಸ್ಯರು “ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕರಿಗೆ ಮಂಜುನಾಥನೇ ಶಿಕ್ಷಿಸಲಿ” ಹಾಗೂ “ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂಬ ಸಂದೇಶವಿರುವ ಪ್ಲೇಕಾರ್ಡ್‌ಗಳನ್ನು ಹಿಡಿದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಮಿತಿಯವರು “ಧರ್ಮಸ್ಥಳದ ಪಾವಿತ್ರ್ಯವನ್ನು ಹಾಳುಮಾಡುವ…

Read More

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆ ರಿಪ್ಪನ್ ಪೇಟೆಯಲ್ಲಿ ಶಾಂತಿಸಭೆ – ಎಸ್ ಪಿ ಮಿಥುನ್ ಕುಮಾರ್ ಭಾಗಿ ರಿಪ್ಪನ್ ಪೇಟೆ : ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಾಳೆ (ಆ.21) ಬೆಳಗ್ಗೆ 10:30ಕ್ಕೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಶಿವಮಂದಿರದಲ್ಲಿ ಶಿವಮೊಗ್ಗ ಎಸ್.ಪಿ. ಮಿಥುನ್ ಕುಮಾರ್ ನೇತೃತ್ವದಲ್ಲಿ ಶಾಂತಿಸಭೆ ಏರ್ಪಡಿಸಲಾಗಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಈ ಸಭೆಗೆ ಠಾಣಾ ವ್ಯಾಪ್ತಿಯ ಎಲ್ಲಾ…

Read More

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್ ಶಿವಮೊಗ್ಗ: ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಾಗುತ್ತಿದೆ.ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಹಾಗೂ ಕುಂಸಿ ರೈಲು ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲ್ಲುತ್ತದೆ. ರೈಲು ಸಂಖ್ಯೆ…

Read More

ತೀರ್ಥಹಳ್ಳಿಯಲ್ಲಿ ಲಾರಿ ಮಾಲೀಕ ನೇಣು ಬಿಗಿದುಕೊಂಡು ಸಾವು!

ತೀರ್ಥಹಳ್ಳಿಯಲ್ಲಿ ಮತ್ತೊಬ್ಬ ಲಾರಿ ಮಾಲೀಕ ನೇ*ಣಿಗೆ ಶರಣು! ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಲಾರಿ ಮಾಲೀಕರೊಬ್ಬರು ಮಂಗಳವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಲಾರಿ ಮಾಲೀಕರದ ಮೇಗರವಳ್ಳಿಯ ಮಂಜುನಾಥ್ (42 ) ಸಾಲಬಾದೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಇವರು ಅವಿವಾಹಿತರಾಗಿದ್ದು ಎನ್ನಲಾಗಿದ್ದು ಸಾವಿಗೆ ನಿಖರವಾದ ಮಾಹಿತಿ ಪೊಲೀಸ್ ಮಹಜರಿನ ನಂತರ ತಿಳಿದು ಬರ ಬೇಕಿದೆ. ಇತ್ತೀಚಿಗೆ ಮೇಲಿನಕುರುವಳ್ಳಿಯಲ್ಲೂ ಇದೆ ರೀತಿ ಪ್ರಕರಣ ನಡೆದಿತ್ತು. ಒಂದೇ ತಿಂಗಳಲ್ಲಿ ಇದು ಎರಡನೇ ಪ್ರಕರಣ…

Read More

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳ ದುರ್ಮರಣ ಶಿವಮೊಗ್ಗ: ನಗರದ ಸರ್ಕ್ಯೂಟ್‌ ಹೌಸ್‌ ಸರ್ಕಲ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಹಾಗೂ ನಂದಿನಿ ಹಾಲಿನ ವಾಹನ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಮೃತರನ್ನು ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಇಬ್ಬರೂ ತೀವ್ರವಾಗಿ ರಸ್ತೆ ಮೇಲೆ ಬಿದ್ದು…

Read More