ಜಿಲ್ಲಾ ಸುದ್ದಿ:
ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ : ಸದನದಲ್ಲಿ ಗುಡುಗಿದ ಶಾಸಕ ಹರತಾಳು ಹಾಲಪ್ಪ|halappa
ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸಲು ಹೊರಟರೆ ರಕ್ತ ಕ್ರಾಂತಿಯಾಗುತ್ತದೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಸದನದಲ್ಲಿ ಗುಡುಗಿದ್ದಾರೆ. ಅಧಿವೇಶನದಲ್ಲಿ ಮಾತನಾಡುತ್ತಾ ಶರಾವತಿ ಮುಳುಗಡೆ ಸಂತ್ರಸ್ಥರನ್ನು ತೆರವುಗೊಳಿಸಲು ಹೊರಟರೆ ರಕ್ತಕ್ರಾಂತಿಯೊಂದಿಗೆ ಸಾಮೂಹಿಕ ಆತ್ಮಹತ್ಯೆ ನಡೆಯುತ್ತದೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು. ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲು ಸರ್ಕಾರ ಸುಮಾರು 8 ಸಾವಿರ ಕುಟುಂಬಗಳನ್ನು ರಾತ್ರೋರಾತ್ರಿ ಎಬ್ಬಿಸಿ, ಬೇರೆ ಬೇರೆ ಕಡೆಗಳಲ್ಲಿ ತಂದು ಬಿಟ್ಟಿತು. ಈಗಲೂ ಇವರ ಹೆಸರಿಗೆ…
ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿ ಸಮೀಪದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಪರವಾನಗಿ ನೀಡದಂತೆ ಮನವಿ|Ripponpet
ರಿಪ್ಪನ್‌ಪೇಟೆ : ಇಲ್ಲಿ ಹೊಸನಗರ ರಸ್ತೆಯ ಮಸೀದಿ ಸಮೀಪದ ಮದ್ಯದಂಗಡಿ ತೆರೆಯಲು ಹುನ್ನಾರ ನಡೆಯುತಿದ್ದು ಅದಕ್ಕೆ ಅನುಮತಿ ನೀಡಬಾರದು ಎಂದು ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಹಾಗೂ ಪ್ರಗತಿಪರ ಚಿಂತಕರಿಂದ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಸಮೀಪದ ಖಾಸಗಿ ವಾಣಿಜ್ಯ ಕಟ್ಟಡವೊಂದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಹುನ್ನಾರ ನಡೆಯುತಿದ್ದು ಇದರಿಂದ ಪ್ರಾರ್ಥನಾ ಮಂದಿರಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ಸನಿಹದಲ್ಲೇ ಇರುವ ಅರೆಬಿಕ್ ಮದರಸದಲ್ಲಿ…
ಚಿರತೆ ನೋಡಿ ಕಂಗೆಟ್ಟ ರೈತರು – ಹೆಜ್ಜೆ ಗುರುತು ಅಲ್ಲಗೆಳೆದ ಪ್ರಾಣಿ ತಜ್ಞರು – ಜಮೀನಿಗೆ ಹೋಗಲು ಭಯ ಪಡುವ ಸ್ಥಿತಿಯಲ್ಲಿ ರೈತ ಸಮೂಹ|leopard
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ವಲಯ ವ್ಯಾಪ್ತಿಯ ಮಸರೂರು ಮನ್ನಾ ಜಂಗಲಿಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಂಡಿದ್ದು ಇಂದು ಅಡಿಕೆ ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ರೈತನು ಚಿರತೆ ಕಂಡು ಗಾಬರಿಯಿಂದ ಮನೆಗೆ ಓಡಿ ಬಂದ ಘಟನೆ ನಡೆದಿದೆ. ಅರಣ್ಯ ಇಲಾಖೆಯವರು ಅಲುವಳ್ಳಿ ಗ್ರಾಮದ ಗಾಳಿಬೈಲು ಬಳಿಯಲ್ಲಿ ಬೋನ್ ಇಡುವುದರೊಂದಿಗೆ ಚಿರತೆ ಹಿಡಿಯಲು ಮುಂಜಾಗ್ರತಾ ಕ್ರಮ ವಹಿಸಿದ್ದು ನಂತರ ಮಸರೂರು ತೋಟವೊಂದರಲ್ಲಿ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯನ್ನಾದರಿಸಿ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇಂದು ಮುಂಜಾನೆ…
ಕೊರೊನಾ ನಾಲ್ಕನೇ ಅಲೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಲ್ಲ, ಆತಂಕ ಬೇಡ : ಕೋಡಿ ಮಠದ ಶ್ರೀಗಳು|kodimaTT
ಕೊರೊನಾ ನಾಲ್ಕನೇ ಅಲೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ.ಕೊರೊನಾ ಬಂದು ಹೋಗುತ್ತದೆ. ಈ ಬಾರಿಯ ಕೊರೊನಾ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಈ ಬಾರಿ ಕೊರೊನಾದಿಂದ ಯಾವುದೇ ಸಾವು-ನೋವುಗಳು ಸಂಭವಿಸುವುದಿಲ್ಲ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾರು ಕೂಡ ಆತಂಕ ಪಡುವ ಅವಶ್ಯಕೆತಯಿಲ್ಲ.ಈ ವರ್ಷ ಕಾರ್ತಿಕ ಮಾಸದಿಂದ ಜನವರಿವರೆಗೆ ಲೋಕ ಕಂಟಕವಿದೆ, ದೇಹ ಅಶಕ್ತಿಯಿಂದ ಬಿದ್ದು ಸಾಯುತ್ತವೆ. ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ…
ತೀರ್ಥಹಳ್ಳಿಯಲ್ಲಿ ರೋಹಿತ್ ಚಕ್ರತೀರ್ಥ ವಿರುದ್ದ ಗೋಬ್ಯಾಕ್ ಪ್ರತಿಭಟನೆ – ಪ್ರತಿಭಟನಾಕಾರರ ಪೊಲೀಸ್ ವಶಕ್ಕೆ|thirthahalli
ರೋಹಿತ್ ಚಕ್ರತೀರ್ಥ ವಿರುದ್ದ ಭಾರಿ ಪ್ರತಿಭಟನೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಡೆಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಅವರು ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ವಿಷಯ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.ಇದು ಕುವೆಂಪು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಕುವೆಂಪು ಅವರನ್ನು ಅವಮಾನಿಸುವ ಮೂಲಕ ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ದಾರೆ. ಇವರಿಗೆ ಕುವೆಂಪು ಅವರ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂದಿನಿಂದಲೇ ಪ್ರತಿಭಟನೆ ವ್ಯಕ್ತವಾಗಿತ್ತು. ಗೋ ಬ್ಯಾಕ್ ಪ್ರತಿಭಟನೆಯೂ…
ರಿಪ್ಪನ್‌ಪೇಟೆ : ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ|volleyball
ರಿಪ್ಪನ್‌ಪೇಟೆ : ಬೆಂಗಳೂರಿನಲ್ಲಿ ನಡೆದ 14 ವರ್ಷದ ಒಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್ ಮತ್ತು ಗಣೇಶ್ ಕೆ ಎನ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ನಾಗಸಂದ್ರದಲ್ಲಿ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಭೀಮರಾಜ್ ಮತ್ತು ರೇಣುಕಾ ದಂಪತಿಗಳ…
ರೋಹಿತ್ ಚಕ್ರತೀರ್ಥ ಕುವೆಂಪು ಜನ್ಮಸ್ಥಳಕ್ಕೆ ಕಾಲಿಡಬಾರದು – ನೆಂಪೆ ದೇವರಾಜ್ : ಚಕ್ರತೀರ್ಥ ವಿರುದ್ದ ಪ್ರಗತಿಪರ ಚಿಂತಕರಿಂದ ಗೋಬ್ಯಾಕ್ ಅಭಿಯಾನ|go back rohith
ತೀರ್ಥಹಳ್ಳಿ : ರಾಷ್ಟ್ರ ಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ಪಠ್ಯ ಪುಸ್ತಕ ವಿಚಾರದಲ್ಲಿ ಪ್ರತಿಭಟನೆಯಾಗುವಂತೆ ಮಾಡಿದ ಮತಾಂಧ ಅಂದರು ತಪ್ಪಿಲ್ಲ ಅಂತಹ ಕೆಲಸ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಇದೊಂದು ಬಿಜೆಪಿ ಪ್ರಯೋಜಿತ ಕಾರ್ಯಕ್ರಮ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ಹೆಗ್ಡೆ ಹೇಳಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಡಿ.28 ಕ್ಕೆ ರೋಹಿತ್ ಚಕ್ರತೀರ್ಥ…
ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್|positive
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ತಿಂಗಳ ನಂತರ ಪ್ರಥಮ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕಳೆದ 4 ದಿನಗಳ ಹಿಂದೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು, ಹೋಮ್ ಐಸೋಲೇಷನ್ಗೆ ಒಳಪಡಿಸಲಾಗಿದೆ. ಶಿವಮೊಗ್ಗ ಮೂಲದ ವ್ಯಕ್ತಿ ವಿದೇಶದಿಂದ ಬಂದಾಗ ಬೆಂಗಳೂರು ಏರ್ಪೋರ್ಟ್ನಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಜಿಲ್ಲೆ ತಲುಪಿದ ನಂತರ ಪಾಸಿಟಿವ್ ಎಂದು ವರದಿ ಬಂದಿದ್ದು, ಸೋಂಕಿತನ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಉಳಿದಂತೆ ಜಿಲ್ಲೆಯಲ್ಲಿ 34 ಜನರನ್ನು ಪರೀಕ್ಷಿಸಿದಾಗ ಇಬ್ಬರಲ್ಲಿ ಸೋಂಕಿನ…
ತುಂಗಾ ನದಿಯ ತೀರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ – ಸಡಗರದ ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಜನ|thirthahalli
ತೀರ್ಥಹಳ್ಳಿ: ತುಂಗಾ ನದಿಯ ದಂಡೆಯ ಮೇಲಿನಿಂದ ಸಿಡಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಮರಳು ದಿಬ್ಬದ ಮೇಲೆ ಹಾತೊರೆದು ಕುಳಿತಿದ್ದ ಜನತೆ ಕೇಕೆ ಹಾಕಿದರು. ಶ್ರೀ ರಾಮೇಶ್ವರ ಎಳ್ಳಾಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಯಿತು. ತೆಪ್ಪೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ತಿರುಗಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…
ಹೊಸ ವರ್ಷದ ಹೊಸ್ತಿಲಲ್ಲಿ ಯುವಕರು ಹಾಗೂ ವಾಹನ ಚಾಲಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ :|accident awareness
ಯುವಕರಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಕಳಕಳಿ : ಹೊಸ ವರ್ಷದ ಸಮಯದಲ್ಲಿ ವಾಹನ ಚಾಲನೆಯಲ್ಲಿ ಆತುರ ಬೇಡ ಯುವಕರೇ….. ನಮ್ಮ ಮಲೆನಾಡಿನಲ್ಲಿ ಕಳೆದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳಿಂದ ಸಾಕಷ್ಟು ಯುವಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲಿ ಅತಿ ವೇಗವಾಗಿ ವಾಹನ ಚಲಾಯಿಸಿ ಕೆಲವರು ಮೃತಪಟ್ಟರೆ ಇನ್ನು ಕೆಲವರು ಮದ್ಯಪಾನ ಮಾಡಿ ಅಪಘಾತವೆಸಗಿ ತಾವು ಬಲಿಯಾಗುವುದಲ್ಲದೆ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈಗಿನ ಸಮಯದಲ್ಲಿ ಗಾಂಜಾ ಎಂಬ ಅಮಲು ಪದಾರ್ಥ ಯುವಕರ ಮನಸ್ಥಿತಿ ಹಾಗೂ ಮನೆ ಸ್ಥಿತಿಯನ್ನು…