ಜಿಲ್ಲಾ ಸುದ್ದಿ:
ಫೆ.24 ರ ಶುಕ್ರವಾರ ಶ್ರೀಕ್ಷೇತ್ರ ಹೊಂಬುಜಾಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ – ಹುಂಚದಕಟ್ಟೆಯಲ್ಲಿ ಗ್ರಾಮ ವಾಸ್ತವ್ಯ|JDS
ತೀರ್ಥಹಳ್ಳಿ : ಫೆ 23 ಮತ್ತು 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು ಫೆ.24 ರ ಶುಕ್ರವಾರ ಶ್ರೀ ಕ್ಷೇತ್ರ ಹೊಂಬುಜಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಫೆ.23 ರಂದು ಹುಂಚದಕಟ್ಟೆ ಗ್ರಾಮದಲ್ಲಿ ರಾತ್ರಿ ಗ್ರಾಮ ವಾಸ್ತವ್ಯ ಹೂಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ನಿಟ್ಟೂರು ನಾರಾಯಣ ಗುರು ಮಠಕ್ಕೆ ಭೇಟಿ ನೀಡಿ ನಂತರ ಹೊಂಬುಜಾ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಸಾಗುವುದು…
ಶಿವ ನಾಮ ಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು|shivarathri
ಶಿವ ನಾಮಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು ರಿಪ್ಪನ್‌ಪೇಟೆ : ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಶಿವರಾತ್ರಿಯ ದಿನ ಮಾತ್ರ ಶಿವನಾಮಸ್ಮರಣೆ ಮಾಡಿದರೆ ಸಾಲದು ನಿತ್ಯ ಶಿವಮಂತ್ರ ಪಠಿಸುವುದರಿಂದ ಸಂಕಷ್ಟ ಹರಿಹಾರವಾಗುವುದು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡಯ ಇತಿಹಾಸ ಪ್ರಸಿದ್ದ ಹಾಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿಯ ಅಂಗವಾಗಿ ಹಾಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಧರ್ಮಸಭೆಯ…
ಕಾಂಬೋಡಿಯಾದಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆ|software engineer
ತೀರ್ಥಹಳ್ಳಿ : ಸಾಫ್ಟ್‌ವೇರ್(software) ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಟೆಕ್ಕಿಯೊಬ್ಬರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ವಿಷಯ ಕೇಂದ್ರ ಸರಕಾರದ ಅಂಗಳಕ್ಕೆ ತಲುಪಿದೆ. ತೀರ್ಥಹಳ್ಳಿಯ ಕಿರಣ್ ಶೆಟ್ಟಿ ಅವರಿಗೆ ಥಾಯ್ಲ್ಯಾಂಡ್(thayland) ಕಂಪೆನಿಯಲ್ಲಿ ಉದ್ಯೋಗ ಹಾಗೂ ಒಳ್ಳೆಯ ಸಂಬಳದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಕಿರಣ್ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಬಳಿಕ ಅವರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಿರಣ್ ಶೆಟ್ಟಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಚಿಕ್ಕ ಮಗು ಕೂಡ ಇದೆ. ಈಗ…
ರಿಪ್ಪನ್‌ಪೇಟೆ : ಸಡಗರ, ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಜರುಗಿದ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮ|shivarathri
ರಿಪ್ಪನ್‌ಪೇಟೆ : ಮಹಾಶಿವರಾತ್ರಿಯ ಅಂಗವಾಗಿ ಪಟ್ಟಣದ ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ದೇವಸ್ಥಾನ,ಬರುವೆ ಈಶ್ವರ ದೇವಸ್ಥಾನ, ಮುಡುಬ ಈಶ್ವರ ದೇವಸ್ಥಾನ,ಗವಟೂರು ರಾಮೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿದವು.ಮುಂಜಾನೆಯಿಂದಲೇ ಭಕ್ತರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜಾ ಸೇವೆಯನ್ನು ನೆರವೇರಿಸಿದರು. ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕಂತೆ ಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ ಪೂಜೆಗೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು,ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೂ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಹಾಗೂ ಕೆಪಿಸಿಸಿ…
ರಿಪ್ಪನ್‌ಪೇಟೆ : 396 ನೇ ಶಿವಾಜಿ ಜಯಂತಿ ಆಚರಣೆ
ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಮರಾಠ ಸಮಾಜದ ಅಧ್ಯಕ್ಷ ನಾಗೇಶ್ ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್ ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ…
ಜಮೀನು ಮಂಜೂರು ವಿಚಾರದಲ್ಲಿ ಯಾರಿಗೂ ನಯಾ ಪೈಸೆ ಹಣ ಕೊಡಬೇಡಿ – ಗೃಹ ಸಚಿವ ಆರಗ ಜ್ಞಾನೇಂದ್ರ|94c
94ಸಿ ಹಾಗೂ ಬಗರ್‌ಹುಕುಂ ಹಕ್ಕು ಪತ್ರ ವಿತರಣೆ ; ಜಮೀನು ಮಂಜೂರು ವಿಚಾರದಲ್ಲಿ ನಯಾ ಪೈಸೆ ಹಣ ಕೊಡಬೇಡಿ ; ಸಚಿವ ಆರಗ ಜ್ಞಾನೇಂದ್ರ ಹೊಸನಗರ: ಜಮೀನು ಮಂಜೂರಾತಿ ವಿಚಾರದಲ್ಲಿ ಅಧಿಕಾರಿಗಳು ಹಣ ಕೇಳುವ ಕುರಿತಾಗಿ ಸಾಕಷ್ಟು ದೂರು ಬಂದಿದ್ದು ರೈತರು ನಯಾ ಪೈಸೆ ಕೊಡಬೇಡಿ. ಅರ್ಹ ಫಲಾನುಭವಿ ರೈತರಿಗೆ ಹಕ್ಕುಪತ್ರ ಸಿಕ್ಕೆ ಸಿಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 94 ಸಿ ಹಾಗೂ ರೈತರಿಗೆ ಬಹರ್‌ಹುಕುಂ ಸಾಗುವಳಿ ಹಕ್ಕು…
ತೀರ್ಥಹಳ್ಳಿ ಪಟ್ಟಣದ ತುಡ್ಕಿಯಲ್ಲಿ ಕಾಣಿಸಿಕೊಂಡ ಚಿರತೆ – ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ|leopard
ವನ್ಯಜೀವಿಗಳ ಕಾಟ ಬರೀ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಪಟ್ಟಣ, ನಗರ ಪ್ರದೇಶಕ್ಕೂ ವನ್ಯಜೀವಿಗಳು ದಾಂಗುಡಿ ಇಡುತ್ತಿದ್ದು ಭಯ ಮೂಡಿಸುತ್ತಿವೆ. ಕೆಲದಿನದಿಂದ ಪಟ್ಟಣ ಸಮೀಪದ ತುಡ್ಕಿಯ ಆನಂದಗಿರಿ ಗುಡ್ಡದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು ಜನರು ಗಾಬರಿಗೊಂಡಿದ್ದಾರೆ. ಆನಂದಗಿರಿ ಗುಡ್ಡದಲ್ಲಿರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಮಕ್ಕಳ ಪ್ರಾರ್ಥನಾ ಕಾರ್ಯಕ್ರಮದ ಅವಧಿಯನ್ನು ಕೆಲ ದಿನದ ಮಟ್ಟಿಗೆ ಬದಲಾಯಿಸಲಾಗಿದೆ. ಕಟ್ಟಡ ಒಳಾಂಗಣ, ಕೊಠಡಿಯಲ್ಲಿ ಇರುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಚಿರತೆ ಓಡಾಟವನ್ನು ಸಾರ್ವಜನಿಕರು…
ಅತ್ಯಂತ ನೀರಸ,ಚುನಾವಣಾ ತಂತ್ರಗಾರಿಕೆಯ ಬಜೆಟ್ – ಜೆಡಿಎಸ್|JDS
ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ 2023-24 ನೇ ಸಾಲಿನ ಬಜೆಟ್ ಚುನಾವಣಾ ತಂತ್ರಗಾರಿಕೆ ಬಜೆಟ್ ಆಗಿದೆಯೇ ಹೊರತು ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದ ಮುನ್ನೋಟವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲೂ ಕೂಡ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿಲ್ಲ. ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂಪಾಯಿ ಅನುದಾನ ಕಡಿಮೆ ಮಾಡಿದ್ದಾರೆ….
ಇಂದು (17-02-2023) ರಿಪ್ಪನ್‌ಪೇಟೆಯಲ್ಲಿ ಹೊನಲು ಬೆಳಕಿನ ಖೋಖೋ ಪಂದ್ಯಾವಳಿ|KHOKHO
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು(17-02-2023) ಸ್ವಾಮಿ ವಿವೇಕಾನಂದ ಖೋ ಖೋ ಗೆಳೆಯರ ಬಳಗದ ವತಿಯಿಂದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಖೋಖೋ ಕ್ರೀಡಾಪಟು ಪೃಥ್ವಿ ಸ್ಮರಣಾರ್ಥ ಅಂತರ್ ಜಿಲ್ಲಾ ಮಟ್ಟದ 4ನೇ ವರ್ಷದ ಹಗಲು,ಹೊನಲು-ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟುಗಳು ಈ ಕ್ರೀಡಾಕೂಟಕ್ಕೆ ಭಾಗವಹಿಸುತಿದ್ದು ಅತ್ಯಂತ ರೋಚಕ ಪಂದ್ಯಾವಳಿಗಳು ನಡೆಯಲಿದೆ.
ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮ ನಾಟಾ ಸಾಗಾಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್|FOREST
ಅಧಿಕಾರಿಗಳೇ ನಡೆಸುತ್ತಿದ್ದ ಅಕ್ರಮ ನಾಟಾ ಸಾಗಾಟ ಪತ್ತೆ ಹಚ್ಚಿದ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಸೊರಬ: ಪಟ್ಟಣದಲ್ಲಿ ಹಳೇ ನಾಟಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಸಿದ್ದವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ಪಟ್ಟಣ ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಪಟ್ಟಣದ ಹಳೇ ತಾಲೂಕು ಕಚೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ನಾಟವನ್ನು ಸಂಗ್ರಹಿಸಲಾಗಿತ್ತು. ಆದರೆ ಅಕ್ರಮವಾಗಿ ಸಾಗಾಟ ಮಾಡುತ್ತಿವ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಅವರ ತಂಡ…