ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ ಪಟ್ಟಣದಾದ್ಯಂತ ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ | Rpet
ರಿಪ್ಪನ್‌ಪೇಟೆ : ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಏರ್ ಟೆಲ್ ನೆಟ್ ವರ್ಕ್ ಕೈಕೊಟ್ಟಿತ್ತು. ಜನರು ತಮ್ಮ ತಮ್ಮವರಿಗೆ ಕರೆ ಮಾಡಲು ಮೊಬೈಲ್ ಕೈಯಲ್ಲಿ ಹಿಡಿದರೆ ನೆಟ್ ವರ್ಕ್ ಇಲ್ಲದೆ ಪರದಾಡಬೇಕಾಯಿತು. ಅಂಗ್ಯೆಯಲ್ಲಿ ವಿಶ್ವ ಎನ್ನುವ ಪ್ರಧಾನಿ ಮೋದಿಯವರ ಪರಿಕಲ್ಪನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ನುಚ್ಚುನೂರು ಮಾಡುತ್ತಿದೆ ಏರ್ಟೆಲ್ ನೆಟ್ವರ್ಕ್… ಮಧ್ಯಾಹ್ನದವರೆಗೂ ಏರ್ ಟೆಲ್ ಕಂಪನಿಯ ಮೊಬೈಲ್ ಗಳ ಸಿಗ್ನಲ್ ಸಿಗಲಿಲ್ಲ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ರಸ್ತೆಯ…
Humcha | ಕೋರಂ ಕೊರತೆ – ಹುಂಚ ಗ್ರಾಮ ಪಂಚಾಯತಿಯ ಗ್ರಾಮಸಭೆ ಮುಂದೂಡಿಕೆ
ಕೋರಂ ಕೊರತೆ – ಹುಂಚ ಗ್ರಾಮ ಪಂಚಾಯತಿಯ ಗ್ರಾಮಸಭೆ ಮುಂದೂಡಿಕೆ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮಸ್ಥರು (ಕೋರಂ) ಇಲ್ಲದೆ ಗ್ರಾಮ ಸಭೆ ಮುಂದೂಡಿಕೆಯಾಗಿದೆ. 2023-24 ನೇ ಸಾಲಿನ ಪ್ರಥಮ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆ ಇದಾಗಿದ್ದು ಗ್ರಾಮಸ್ಥರ ಹಾಜರಿ ಕಡಿಮೆ ಇದ್ದ ಕಾರಣ ಸಭೆ ಮುಂದೂಡಿಕೆಯಾಗಿದೆ. ಪಂಚಾಯತ್ ಅಧ್ಯಕ್ಷೆ ಸುಮಂಗಳ ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆ ಬೆಳಗ್ಗೆ 11-30 ಕ್ಕೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಬೆರೆಳೆಣಿಕೆಯಷ್ಟು ಜನರಿದ್ದರು. ಕೋರಂ ಇಲ್ಲದೆ ಸಭೆ ನಡೆಸುವಂತಿಲ್ಲ…
Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ – ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!??
Shiralakoppa | ಸಂತೆಯಲ್ಲಿ ನಿಗೂಢ ವಸ್ತು ಸ್ಫೋಟ ಪ್ರಕರಣ – ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದೇನು..!!?? ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಎಸ್ ಪಿ ಹೇಳಿದ್ದೇನು..?? ಇಂದು ಸಂತೆಗೆ ಉಮೇಶ್ ಮತ್ತು ಅವನ ಹೆಂಡತಿ ರೂಪರವರು ರಸ್ತೆ ಬದಿಯ ಅಂಗಡಿಯಾತ ಅಂತೋನಿ ಜೊತೆ ಕಂಬಳಿ ಖರೀದಿಸಿದ್ದಾರೆ. ಆ…
Ripponpete | ಲಂಚಕ್ಕೆ ಬೇಡಿಕೆಯಿಟ್ಟರಾ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು – ಏನಿದು ಹೊಟೇಲ್ ಮಾಲೀಕನ ಆರೋಪ
Ripponpete | ಲಂಚಕ್ಕೆ ಬೇಡಿಕೆ – ತೂಕ ಮತ್ತು ಅಳತೆ ಮಾಪನ ನವೀಕರಣಗೊಳಿಸದೇ ಹಿಂದಿರುಗಿದ ಅಧಿಕಾರಿಗಳು..!!! ರಿಪ್ಪನ್‌ಪೇಟೆ;-ವರ್ಷಕ್ಕೂಮ್ಮೆ ಸರ್ಕಾರ ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಿ 250 ರೂ ಫೀ ಯನ್ನು ಗಣಕೀಕೃತ ರಶೀಧಿಯನ್ನು ನೀಡುತ್ತಾರೆ.ಇದರೊಂದಿಗೆ ಹೆಚ್ಚುವರಿಯಾಗಿ ಲಂಚದ ಹಣವನ್ನು ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಲು ಕೊಡಬೇಕು ಇಲ್ಲವಾದರೆ ತಕಡಿಗೆ ಮೊಹರು ಮಾಡುವುದಿಲ್ಲ ಎಂದು ಕಾನೂನು ಮಾಪನಶಾಸ್ತ ಇಲಾಖೆಯ ಅಧಿಕಾರಿಗಳು ಹೇಳಿ ತಿರಸ್ಕರಿಸಿ ವಾಪಾಸ್ಸು ಹೋದ ಘಟನೆಯೊಂದು ನಡೆದಿದೆ. ಶಿವಮೊಗ್ಗ ರಸ್ತೆಯ ಜಯಪ್ರಕಾಶ ಹೋಟಲ್ ಮತ್ತು…
Ripponpete | ಅನ್ನದಾತನ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅಧಿಕಾರಿಗಳ ವಿರುದ್ದ ಕೆಂಡಮಂಡಲರಾದ ವೀರೇಶ್ ಆಲುವಳ್ಳಿ
Ripponpete | ಅನ್ನದಾತರ ಮೇಲೆ ಅರಣ್ಯಾಧಿಕಾರಿಗಳ ದಬ್ಬಾಳಿಕೆ – ಅಧಿಕಾರಿಗಳ ವಿರುದ್ದ ಕೆಂಡಮಂಡಲರಾದ ವೀರೇಶ್ ಆಲುವಳ್ಳಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅವೈಜ್ಞಾನಿಕವಾಗಿ EPT ಟ್ರಂಚ್ ತೆಗೆಯುತ್ತಿರುವ ಹಿನ್ನಲೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿರುವ ಘಟನೆ ನಡೆದಿದೆ. ಹಾರಂಬಳ್ಳಿ ಗ್ರಾಮದಲ್ಲಿ ರೈತರು ಉಳುಮೆ ಮಾಡುತ್ತಿರುವ ಖಾತೆ ಜಾಗದಲ್ಲಿ EPT ಟ್ರಂಚ್ ಹೊಡೆಯಲಾಗುತ್ತಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ಪಟ್ಟು ಹಿಡಿದ…
ಸಿದ್ದರಾಮಯ್ಯ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದೇನು .?? ಇಲ್ಲಿದೆ ಮಾಹಿತಿ | Budget
ಸಿದ್ದರಾಮಯ್ಯ ಬಜೆಟ್ ನಲ್ಲಿ ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದೇನು .?? ಇಲ್ಲಿದೆ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಶಿವಮೊಗ್ಗಕ್ಕೆ ಹಲವು ಯೋಜನೆಗಳನ್ನ ಘೋಷಿಸಲಾಗಿದೆ. ಆಹಾರ ಪಾರ್ಕ್, IPHL ಪ್ರಯೋಗಾಲಯ, ಶಿವಮೊಗ್ಗ-ಬೊಮ್ಮನ್ ಕಟ್ಟೆ ರಸ್ತೆಯಲ್ಲಿ ರೈಲು ಮೇಲು-ಕೆಳ ಸೇತುವೆ, ತಾರಾಲಾಯ/ವಿಜ್ಞಾನ ಕೇಂದ್ರ ಸ್ಥಾಪನೆ, ಹೈಸೆಕ್ಯೂರಿಟಿ ಕಾರಾಗೃಹ ನಿರ್ಮಾಣದ ಘೋಷಣೆಯನ್ನ ಮಾಡಲಾಗಿದೆ. 1. ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ…
Ripponpete | ವಿಧಿಯಾಟಕ್ಕೆ ಹಾಸಿಗೆ ಹಿಡಿದ ದುಡಿಯುವ ಯುವತಿ – ಬೇಕಿದೆ ಮಾನವೀಯತೆಯ ನೆರವು
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ನಿವಾಸಿ ಶಂಕರಪ್ಪ ಮತ್ತು ಸಾವಿತ್ರಿ ದಂಪತಿಯ ಪುತ್ರಿ ಕು. ಮಾಲಿನಿ ಅಚಾನಕ್ ಆಗಿ ಸಂಭವಿಸಿದ ಅಪಘಾತದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ಬಲ ಸಿಗುತ್ತಿಲ್ಲ. ಅದಕ್ಕಾಗಿ ಕೊಡುಗೈಗಳ ಬೆಂಬಲವನ್ನ ನಿರೀಕ್ಷಿಸಿ ಕೈ ಚಾಚಿದ್ದಾರೆ. ಕಳೆದ ಫೆ.10 ರಂದು ಮಧ್ಯಾಹ್ನ ಬೈಕ್‌ನಲ್ಲಿ ಹೋಗುವಾಗ ಹೊಸನಗರದ ಆರೋಡಿ 30 ಅಪಘಾತವಾಗಿ ಮಾಲಿನಿಯವರ ಕಾಲಿನ ಮೂಳೆ ಮುರಿದಿದೆ. ಅವರನ್ನ ಆ ತಕ್ಷಣವೆ ಹೊಸನಗರ…
Ripponpete | ಜಗತ್ತಿನ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು :ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ
ಜಗತ್ತಿನ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು ’’:ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ರಿಪ್ಪನ್‌ಪೇಟೆ;- ದುರ್ಗುಣಗಳು ದೂರವಾಗಿ ಸದ್ಗುಣಗಳು ಸರ್ವರಲ್ಲಿ ಪ್ರಾಪ್ತಿಯಾದಾಗ ಮಾತ್ರ ಜಗತ್ತಿನ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಸಾಧ್ಯ.ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು.ಮುಂದೆ ನೋಡಿ ಬದುಕಬೇಕು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಮಸರೂರು ಗ್ರಾಮದ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯರು ಆ ಯೋಜಿಸಲಾದ ಇಷ್ಟಲಿಂಗ ರುದ್ರಾಭಿಷೇಕ ಹಾಗೂ ಅರ್ಚನೆಯ ಪ್ರಯುಕ್ತವಾಗಿ ಹಮ್ಮಿಕೊಂಡ ಧರ್ಮಸಮಾರಂಭದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು ಮುಖದಲ್ಲಿ ನಗುವಿರಲಿ.ಹೃದಯದಲ್ಲಿ…
Ripponpete | ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು – ಧನಲಕ್ಷ್ಮಿ ಗಂಗಾಧರ್
Ripponpete | ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು – ಧನಲಕ್ಷ್ಮಿ ಗಂಗಾಧರ್ ರಿಪ್ಪನ್‌ಪೇಟೆ : ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿನೊಂದಿಗೆ ಜೀವನ ನಡೆಸಲು ಅನುವು ಮಾಡಿಕೊಟ್ಟ ಪವಿತ್ರ ಗ್ರಂಥವಾಗಿದೆ. ಸಂವಿಧಾನದಿಂದ ಇಂದು ದೇಶ ಪ್ರಗತಿ ಕಾಣುವಂತಾಗಿದೆ. ಪ್ರತಿಯೊಬ್ಬರೂ ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು. ಸೋಮವಾರ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ…
Ripponpete | ಅಡಿಕೆ ಅಡಮಾನ ಸಾಲ ಯೋಜನೆಯನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು – ಆರ್ ಎಂ ಮಂಜುನಾಥ್ ಗೌಡ
Ripponpete | ಅಡಿಕೆ ಅಡಮಾನ ಸಾಲ ಯೋಜನೆಯನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು – ಆರ್ ಎಂ ಮಂಜುನಾಥ್ ಗೌಡ ರಿಪ್ಪನ್ ಪೇಟೆ : ಅಡಿಕೆ ಅಡಮಾನ ಸಾಲ ಯೋಜನೆಯನ್ನು ಉತ್ತಮ ರೀತಿಯಲ್ಲಿ ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಹೇಳಿದರು. ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಡಿಕೆ ಅಡಮಾನ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿ ಅಡಿಕೆಯ ದರ ಏರಿಳಿತವಾಗುತ್ತಿರುತ್ತದೆ…