ಜಿಲ್ಲಾ ಸುದ್ದಿ:
Ripponpete | ಅಪ್ಪನಿಗೆ ಅವಮಾನಿಸಿದರು ವಿರೋಧಿಸದ ಮಕ್ಕಳು ಬೇಕಾ – ಅಯನೂರು ಮಂಜುನಾಥ್
ಅಪ್ಪನಿಗೆ ಅವಮಾನಿಸಿದರು ವಿರೋಧಿಸದ ಮಕ್ಕಳು ಬೇಕಾ – ಅಯನೂರು ರಿಪ್ಪನ್‌ಪೇಟೆ;-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಮಾತು ಮಾತಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಟೀಕಿಸುತ್ತಿದ್ದರೂ ಕೂಡಾ ಅದನ್ನು ಖಂಡಿಸದೇ ಇರುವ ಮಕ್ಕಳು ಬೇಕಾ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ನಿಮ್ಮ ತಂದೆಯವರಿಗೆ ಹೀಗೆ ಯಾರಾದರೂ ಹೇಳಿದರೆ ಸುಮ್ಮನಿರುತ್ತೀರಾ ಎಂದು ಮಾಧ್ಯಮದವರನ್ನು ಕೇಳಿದ ಅವರು ಅಂತಹ ಜಾಯಾಮಾನ ನಮ್ಮದಲ್ಲ ಎಂದು ಹೇಳುತ್ತಾ ರಾಜ್ಯಾಧ್ಯಕ್ಷ…
Shivamogga | ಹಿಂದುಳಿದವರ ಮತ ವಿಭಜನೆಗಾಗಿ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಚುನಾವಣೆಗೆ ನಿಲ್ಲಿಸುತಿದ್ದಾರೆ – ಆಯನೂರು ಮಂಜುನಾಥ್
ಹಿಂದುಳಿದವರ ಮತ ವಿಭಜನೆಗಾಗಿ ಯಡಿಯೂರಪ್ಪನವರೇ ಈಶ್ವರಪ್ಪರನ್ನು ಚುನಾವಣೆಗೆ ನಿಲ್ಲಿಸುತಿದ್ದಾರೆ – ಆಯನೂರು ಮಂಜುನಾಥ್ ಹಿಂದುಳಿದವರ ಮತ ವಿಭಜನೆ ಆದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸುಲಭ ಎಂಬ ಕಾರಣಕ್ಕೆ ಕೆ.ಎಸ್. ಈಶ್ವರಪ್ಪ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯನ್ನಾಗಿ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರೇ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಡಮ್ಮಿ’ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಅವರು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು….
ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ಧಾರಣೆ (26-03-2024)
ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ಶಿವಮೊಗ್ಗ ಮಾರುಕಟ್ಟೆ ಅಡಿಕೆ ಮಾರುಕಟ್ಟೆ ಕನಿಷ್ಠ ಗರಿಷ್ಠ ಬೆಟ್ಟೆ ಶಿವಮೊಗ್ಗ 46500 54400 ಸರಕು ಶಿವಮೊಗ್ಗ 77700 82610 ಗೊರಬಲು ಶಿವಮೊಗ್ಗ 26099 31859 ರಾಶಿ ಶಿವಮೊಗ್ಗ 31199 48759 ಸಿಪ್ಪೆಗೋಟು ಶಿವಮೊಗ್ಗ 29099 47709
Thirthahalli | ಕೆಟ್ಟ ರಾಜಕಾರಣವನ್ನು ಸುಟ್ಟು ಹಾಕಬೇಕು ಎಂದು ಹೋಳಿ ಹಬ್ಬ ಆಚರಿಸಿದ ರೈತರು..!!!
ಕೆಟ್ಟ ರಾಜಕಾರಣವನ್ನು ಸುಟ್ಟು ಹಾಕಬೇಕು ಎಂದು ಹೋಳಿ ಹಬ್ಬ ಆಚರಿಸಿದ ರೈತರು ! ತೀರ್ಥಹಳ್ಳಿ : ತಾಲ್ಲೂಕಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ವಿರುದ್ಧ ಹೆಗ್ಗೋಡಿನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ 29 ನೇ ದಿನವನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಕಾಮ ದಹನದ ಬದಲು “ಕೆಟ್ಟ ರಾಜಕಾರಣವನ್ನು ಸುಟ್ಟು ಹಾಕಬೇಕು” ಎಂದು ರೈತರು ಘೋಷಣೆ ಕೂಗುತ್ತಾ ಹುಲ್ಲಿನ ಗೊಂಬೆಯನ್ನು ದಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೌಳಿ ನಾಗರಾಜ್ ಹಿಂದೆ ಪೆರಿಯಾರ್, ಅಂಬೇಡ್ಕರ್ ಮುಂತಾದ ಜನಪರ…
ಹೊಸನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ | Congress
ಹೊಸನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹೊಸನಗರ : ಬಿಜೆಪಿಯು ಅನೈತಿಕ ರೀತಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. ಇಲ್ಲಿನ ಈಡಿಗರ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ನಿರಂಕುಶ ಪ್ರಭುತ್ವದಂತೆ ಭಾಸವಾಗುತ್ತಿದೆ. ಪ್ರಧಾನಮಂತ್ರಿ ಮಾಧ್ಯಮಗಳ ಎದುರು ಬರುತ್ತಿಲ್ಲ. ವಿರೋಧ ಪಕ್ಷಗಳನ್ನು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಮಟ್ಟ ಹಾಕಲು ಹೊರಟಿದ್ದಾರೆ. ಅವರ ಕಾರ್ಯವೈಖರಿಯನ್ನು ಯಾರೊಬ್ಬರೂ ಪ್ರಶ್ನಿಸಬಾರದು ಎಂಬ ಧೋರಣೆ ಎಷ್ಟರ ಮಟ್ಟಿಗೆ ಸರಿ. ದೇಶದ ಜನರು ಈ…
Ripponpete | ಇದು ವ್ಯಕ್ತಿ ಆಧಾರಿತ ಚುನಾವಣೆಯಲ್ಲ, ರಾಷ್ಟ್ರೀಯತೆಯ ಚುನಾವಣೆ – ಬಿ ವೈ ರಾಘವೇಂದ್ರ
ಇದು ವ್ಯಕ್ತಿ ಆಧಾರಿತ ಚುನಾವಣೆಯಲ್ಲ, ರಾಷ್ಟ್ರೀಯತೆಯ ಚುನಾವಣೆ – ಬಿ ವೈ ರಾಘವೇಂದ್ರ ರಿಪ್ಪನ್‌ಪೇಟೆ;-ಈ ಭಾರಿಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ವ್ಯಕ್ತಿ ಆಧಾರಿತ ಚುನಾವಣೆಯಲ್ಲ ರಾಷ್ಟ್ರೀಯತೆಯ ಚುನಾವಣೆ ಎಂದು ಸಂಸದ ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಲೋಕಸಭಾ ಚುನಾವಣೆಯ ಬಿಜೆಪಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತರಲಾಗಿರುವ ಅನುಧಾನದ ಕಾಮಗಾರಿಗಳ ಕುರಿತು ಮತದಾರರಿಗೆ ಮುಟ್ಟಿಸಬೇಕು ಹಾಗೂ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಭಾಗ್ಯಲಕ್ಷಿö್ಮ…
SSLC ಪರೀಕ್ಷೆ ಬರೆಯಲು ಪಿಕ್‌ಆಪ್ ನಲ್ಲಿ ಬಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
SSLC ಪರೀಕ್ಷೆ ಬರೆಯಲು ಪಿಕ್‌ಆಫ್‌ನಲ್ಲಿ ಬಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ರಿಪ್ಪನ್‌ಪೇಟೆ;-ಇಂದಿನಿಂದ ರಾಜ್ಯವ್ಯಾಪ್ತಿ ಅರಂಭಗೊಂಡ ಎಸ್.ಎಸ್.ಎಲ್.ಸಿ.ವಾರ್ಷೀಕ ಪಬ್ಲಿಕ್ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್‌ಆಪ್‌ನಲ್ಲಿ ತುಂಬಿಕೊಂಡು ಬಂದಿದ್ದು ಸಾರ್ವಜನಿಕರ ಮತ್ತು ಪೋಷಕರ ಅಸಮದಾನಕ್ಕೆ ಕಾರಣವಾಗಿದೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು ಈ ಪರೀಕ್ಷಾ ಕೇಂದ್ರದ ವ್ಯಾಪ್ತಿಗೆ ಆರಸಾಳು,ಬೆಳ್ಳೂರು, ಹೆದ್ದಾರಿಪುರ,ಅಮೃತ,ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆಗಳು ಒಳಪಡುತ್ತಿದ್ದು ಖಾಸಗಿ ಶಾಲೆಗಳಾದ ಶ್ರೀಬಸವೇಶ್ವರ,ಶಾರದಾ ರಾಮಕೃಷ್ಣ ಮೇರಿಮಾತಾ ಮಲೆನಾಡು ಪ್ರೌಢಶಾಲೆಗಳ ವಿದ್ಯಾರ್ಥಿಗಳು…
Heddaripura | ಕಿಡಿಗೇಡಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಪುಂಡಾಟ – ಪೀಠೋಪಕರಣಗಳು ಪೀಸ್ ಪೀಸ್ : ಬೆಚ್ಚಿಬಿದ್ದ ಶಿಕ್ಷಕರು ಹಾಗೂ ಪೋಷಕರು
Heddaripura | ಕಿಡಿಗೇಡಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಪುಂಡಾಟ – ಪೀಠೋಪಕರಣಗಳು ಪೀಸ್ ಪೀಸ್ : ಬೆಚ್ಚಿಬಿದ್ದ ಶಿಕ್ಷಕರು ಹಾಗೂ ಪೋಷಕರು ರಿಪ್ಪನ್ ಪೇಟೆ : ಮಲೆನಾಡಿನ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪೋಷಕರ,ಶಿಕ್ಷಕರ ಹಾಗೂ ತಮ್ಮ ಪ್ರತಿಭೆಯ ಸಹಕಾರದಿಂದ ಉನ್ನತ ಶಿಕ್ಷಣವನ್ನು ಪಡೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅಂತ ಮಲೆನಾಡಿನಲ್ಲಿ ಕೆಲ ಕಿಡಿಗೇಡಿಗಳ ವಿದ್ಯಾರ್ಥಿಗಳ ಪುಂಡಾಟಿಕೆಯ ಅಟ್ಟಹಾಸದಿಂದ ಪೋಷಕರು ಶಿಕ್ಷಕರು ಬೆಚ್ಚಿ ಬಿದ್ದಿದ್ದಾರೆ ಹಾಗೂ ಗ್ರಾಮಸ್ಥರು ಮರ್ಯಾದೆಗೆ ಅಂಜಿ ತಲೆ ಬಾಗಿಸುವಂಥಾಗಿದೆ….
‘ಯೋ ಬರ್ಕೊಳಯ್ಯ ಶಿವಮೊಗ್ಗ ನಂದು’ : ಶಿವಣ್ಣನ ಮಾಸ್ ಡೈಲಾಗ್ ಗೆ ಅಭಿಮಾನಿಗಳು ಫಿಧಾ | Election
‘ಯೋ ಬರ್ಕೊಳಯ್ಯ ಶಿವಮೊಗ್ಗ ನಂದು’ : ಶಿವಣ್ಣನ ಮಾಸ್ ಡೈಲಾಗ್ ಗೆ ಅಭಿಮಾನಿಗಳು ‘ಫೀದಾ’ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇದೀಗ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಎಂದು ಚುನಾವಣಾ ಪ್ರಚಾರ ನಡೆಸಿದರು ಈ ವೇಳೆ ಜೋಗಯ್ಯ ಸಿನಿಮಾದ ಡೈಲಾಗ್ ಹೇಳಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ನೀಡಿತು. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ…
Ripponpete | ನನ್ನ ರಕ್ತದ ಕಣಕಣದಲ್ಲಿಯೂ ಕೇಸರಿ ಇದೆ – ಕೆ.ಎಸ್.ಈಶ್ವರಪ್ಪ
ನನ್ನ ರಕ್ತದ ಕಣಕಣದಲ್ಲಿಯೂ ಕೇಸರಿ ತುಂಬಿದೆ. ಕೆ.ಎಸ್.ಈಶ್ವರಪ್ಪ ರಿಪ್ಪನ್‌ಪೇಟೆ;-ನನ್ನ ರಕ್ತದ ಕಣಕಣದಲ್ಲಿಯೂ ಮೋದಿಜೀ ಬಿಜೆಪಿಯ ಹಿಂದುತ್ವವೇ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಇಂದು ಗುಳುಗುಳಿ ಶಂಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಶಂಕೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರದ ಕುರಿತು ಕಾರ್ಯಕರ್ತ ಅಭಿಮಾನಿಗಳನ್ನು ಭೇಟಿ ಮಾಡಲು ರಿಪ್ಪನಪೇಟೆಗೆ ಅಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಧಿಕಾರಕ್ಕಾಗಿ ಪಕ್ಷ ತೊರೆದು ಹೋದ ವ್ಯಕ್ತಿ ಅದರೆ ನನಗೆ ಪಕ್ಷವೇ ಹೆತ್ತ…