ಜಿಲ್ಲಾ ಸುದ್ದಿ:
Shivamogga | ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ
Shivamogga | ಬಿಜೆಪಿ ಹಿರಿಯ ಮುಖಂಡ ಎಂ ಬಿ ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ – ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ವೇಳೆ ಕುಸಿದು ಬಿದ್ದ ಭಾನುಪ್ರಕಾಶ್ ಕಾಂಗ್ರೆಸ್ ವಿರುದ್ದ ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್‌ರವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗದಲ್ಲಿ ಬೆಲೆ ಏರಿಕೆ ವಿರೂದ ಪ್ರತಿಭಟನೆ ನಡೆಸುತಿದ್ದ ವೇಳೆ ಹೃದಯಾಘಾತವಾಗಿದ್ದು ತಕ್ಷಣವೇ ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಶಿವಮೊಗ್ಗದಲ್ಲಿಂದು ರಾಜ್ಯ…
Ripponpete | ಮುಸ್ಲಿಂ ಬಾಂಧವರಿಂದ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ
Ripponpete | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ…
ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ |Muthalik
ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ರಿಪ್ಪನ್‌ಪೇಟೆ : ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಪಟ್ಟಣಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಕೊಪ್ಪಕ್ಕೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಮನೆಗೆ ಭೇಟಿ ನೀಡಿ ನೆರೆದಿದ್ದ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಪ್ರಮೋದ್ ಮುತಾಲಿಕ್ ವಾಹನ ಚಾಲಕ ಹಾಗೂ ಅಪ್ತನಾಗಿರುವ ಶಬರೀಶ್ ರವರು ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಪುತ್ರನಾಗಿದ್ದು ಈ…
Ripponpete | ಕೆರೆಯ ಜಾಗದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ – ಅಧಿಕಾರಿಗಳ ಬೇಜವಬ್ದಾರಿಯ ನಡೆ | ಗ್ರಾಮಸ್ಥರ ಆಕ್ರೋಶ
Ripponpete | ಕೆರೆಯ ಜಾಗದಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ – ಅಧಿಕಾರಿಗಳ ಬೇಜವಬ್ದಾರಿಯ ನಡೆ | ಗ್ರಾಮಸ್ಥರ ಆಕ್ರೋಶ ರಿಪ್ಪನ್‌ಪೇಟೆ: ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಸರ್ವೇ ನಂ.12ರ ಗುಳಗುಳಿ ಶಂಕರದಲ್ಲಿ ಕೆರೆ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಿಸುರುವುದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬೆಳ್ಳೂರು-ಆಯನೂರು-ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಪ್ರಸಿದ್ಧ ಗುಳಗುಳಿ ಶಂಕರೇಶ್ವರ ದೇವಸ್ಥಾನ ಮತ್ತು ಜಟಾತೀರ್ಥದ ಎದುರು ಇರುವ ಕೆರೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಕೆರೆ ನೀರನ್ನು ಆಶ್ರಯಿಸುವ…
ಕಾನೂನುಬಾಹಿರ ಅಮದು ತಡೆದರೇ ಅಡಿಕೆಗೆ ಉತ್ತಮ ಧಾರಣೆ ಸದಾ ಇರುತ್ತದೆ – ಕಿಶೋರ್ ಕುಮಾರ್ | Campco
ಕಾನೂನುಬಾಹಿರ ಅಮದು ತಡೆದರೇ ಅಡಿಕೆಗೆ ಉತ್ತಮ ಧಾರಣೆ ಸದಾ ಇರುತ್ತದೆ – ಕಿಶೋರ್ ಕುಮಾರ್ | Campco ಕ್ಯಾಂಪ್ಕೋ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಮಾರಾಟ ಮಳಿಗೆ ಉದ್ಘಾಟನೆ | Arecanut ರಿಪ್ಪನ್‌ಪೇಟೆ: ದೇಶದಲ್ಲಿ ಅಡಿಕೆ ಕಾನೂನು ಬಾಹಿರ ಆಮದು ನಡೆಯುತ್ತಿದೆ. ಅದನ್ನು ತಡೆಗಟ್ಟಿದರೆ ರೈತರ ಅಡಿಕೆಗೆ ಉತ್ತಮ ಧಾರಣೆ ಸದಾ ದೊರೆಯುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಪಟ್ಟಣದಲ್ಲಿ ಕ್ಯಾಂಪ್ಕೋ ಸಾವಯವ ಗೊಬ್ಬರ ಮತ್ತು ಲಘುಪೋಷಕಾಂಶಗಳ ಮಾರಾಟ ಮಳಿಗೆಯನ್ನು ಉದ್ಘಾಟನೆ ನೆರವೇರಿಸಿ…
Ripponpete | ಅಪ್ಪ ಹೊಡೆದರೆ ಏನು ಮಾಡಬೇಕು.? ಕಳ್ಳರನ್ನು ಹಿಡಿದು ಏನು ಮಾಡ್ತೀರಾ.?? ಪಿಎಸ್‌ಐ ಗೆ ಶಾಲಾ ಮಕ್ಕಳಿಂದ ಕುತೂಹಲದ ಪ್ರಶ್ನೆಗಳು.!?
Ripponpete | ಅಪ್ಪ ಹೊಡೆದರೆ ಏನು ಮಾಡಬೇಕು.? ಕಳ್ಳರನ್ನು ಹಿಡಿದು ಏನು ಮಾಡ್ತೀರಾ.?? ಪಿಎಸ್‌ಐ ಗೆ ಶಾಲಾ ಮಕ್ಕಳಿಂದ ಕುತೂಹಲದ ಪ್ರಶ್ನೆಗಳು ‘ತೆರೆದ ಮನೆ’ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಭೇಟಿ ನೀಡಿದ ಶಾಲಾ ಮಕ್ಕಳೊಂದಿಗೆ ಪೊಲೀಸರ ಸಂವಾದ ರಿಪ್ಪನ್‌ಪೇಟೆ : ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್ ಯಾವಾಗ ಬಳಸುತ್ತೀರಾ, ಕಳ್ಳರು ಹಿಡಿದು ಏನ್ ಮಾಡುತ್ತೀರಾ.’–ಇದು ಪೊಲೀಸ್ ಇಲಾಖೆಯ ‘ತೆರೆದ ಮನೆ’ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಪಟ್ಟಣದ ಠಾಣೆಗೆ ಭೇಟಿ ನೀಡಿದಾಗ ಕುತೂಹಲದ…
Ripponpete | ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ಗ್ರಾಮಾಡಳಿತದಿಂದ ವಿವಿಧ ವಾರ್ಡ್ ಗಳಲ್ಲಿ ಔಷದಿ ಸಿಂಪಡಣೆ
Ripponpete | ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ಗ್ರಾಮಾಡಳಿತದಿಂದ ವಿವಿಧ ವಾರ್ಡ್ ಗಳಲ್ಲಿ ಔಷದಿ ಸಿಂಪಡಣೆ ರಿಪ್ಪನ್‌ಪೇಟೆ : ಮಳೆಗಾಲ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಹಲವಾರು ಡೆಂಗ್ಯೂ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಗ್ರಾಮಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಸಾಂಕ್ರಾಮಿಕ ರೋಗ ತಡೆಗಟ್ಟವ ನಿಟ್ಟಿನಲ್ಲಿ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಕ್ರಿಮಿನಾಶಕ ಔಷಧ ಸಿಂಪಡಣೆ ಕಾರ್ಯ ನಡೆಯಿತು. ಪಟ್ಟಣದ ಗಾಂಧಿನಗರ , ಮದೀನಾ ಕಾಲೋನಿ ಹಾಗೂ…
Bakrid Festival | ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರ ಕಣ್ಗಾವಲು | ಶಾಲಾ ವಾಹನಗಳ ಬಗ್ಗೆ ಮತ್ತು ಆನ್ಲೈನ್ ವಂಚನೆ ಬಗ್ಗೆ ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು?
ಬಕ್ರೀದ್ ಹಬ್ಬದ ಹಿನ್ನಲೆ – ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು – ಶಾಲಾ ವಾಹನಗಳ ಬಗ್ಗೆ ಮತ್ತು ಆನ್ಲೈನ್ ವಂಚನೆ ಬಗ್ಗೆ ತೀರ್ಥಹಳ್ಳಿ ಡಿವೈಎಸ್ಪಿ ಹೇಳಿದ್ದೇನು? ತೀರ್ಥಹಳ್ಳಿ : ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಹಲವು ಕಾರ್ಮಿಕರು ಅಥವಾ ಇನ್ನಿತರರು ಆಗಮಿಸಿದ್ದಾರೆ. ಹೊರಗಡೆಯಿಂದ ಬರುವವರಿಗೆ ಬಾಡಿಗೆ ನೀಡುವ ಅಥವಾ ಲೀಸ್ ನೀಡುವ ಮೊದಲು ಕೆಲವೊಂದು ಮಾಹಿತಿಗಳನ್ನು ಪಡೆಯಬೇಕು. ಬಾಡಿಗೆದಾರರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ಪೋರ್ಟ್ ಸೇರಿ ಇತರ ಮಾಹಿತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತೀರ್ಥಹಳ್ಳಿ ಡಿವೈಎಸ್ಪಿ…
ರಿಪ್ಪನ್‌ಪೇಟೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಪ್ರಕರಣ – ಸಾರ್ವಜನಿಕರಲ್ಲಿ ಆತಂಕ | ರೋಗದ ಲಕ್ಷಣ , ಮುಂಜಾಗ್ರತಾ ಕ್ರಮಗಳೇನು..?? | Ripponpete
ರಿಪ್ಪನ್‌ಪೇಟೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ ಪ್ರಕರಣ – ಸಾರ್ವಜನಿಕರಲ್ಲಿ ಆತಂಕ | ರೋಗದ ಲಕ್ಷಣ , ಮುಂಜಾಗ್ರತಾ ಕ್ರಮಗಳೇನು..?? ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ರೋಗವು ತೀವ್ರಗತಿಯಲ್ಲಿ ಹಬ್ಬುತ್ತಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಮಳೆಯು ಜಿಲ್ಲೆಯನ್ನು ಪ್ರವೇಶಿಸಿ, ತಾಲೂಕಿನಾದ್ಯಂತ ಮಳೆ ಹಾಗೂ ಬಿಸಿಲಿನ ವಾತಾವರಣವಿದೆ. ಈ ಉಷ್ಣಾಂಶದಲ್ಲಿ ಸೊಳ್ಳೆಯ ಸಂತತಿ ವೃದ್ಧಿಯಾಗುವುದರಿಂದ ಡೆಂಗ್ಯೂ ರೋಗದ ಭೀತಿ ಜೋರಾಗಿದೆ. ಅಂದಾಜಿನ ಪ್ರಕಾರ ಪಟ್ಟಣದ ವ್ಯಾಪ್ತಿಯಲ್ಲಿ 10…
Ripponpete | ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್
ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್ ರಿಪ್ಪನ್‌ಪೇಟೆ : ಕಾನೂನು ಎಲ್ಲರಿಗೂ ಒಂದೇ ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುವುದೆಂದು ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪದೇಪದೆ ಅಪರಾಧ ಎಸಗುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ…