w
Headlines
Home » ತಗ್ಗಿದ ವರುಣನ ಆರ್ಭಟ – ಹೊಸನಗರ ,ಸಾಗರ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..!| Rain update

ತಗ್ಗಿದ ವರುಣನ ಆರ್ಭಟ – ಹೊಸನಗರ ,ಸಾಗರ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..!| Rain update

ತಗ್ಗಿದ ವರುಣನ ಆರ್ಭಟ – ಹೊಸನಗರ ,ಸಾಗರ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..!

ಹೊಸನಗರ ಮತ್ತು ಸಾಗರ ತಾಲೂಕಿನಾದ್ಯಂತ ವರುಣನ ಆರ್ಭಟ ತಗ್ಗಿರುವ ಹಿನ್ನಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ಪ್ರಾರಂಭಗೊಳ್ಳಲಿದೆ.


ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಭಾರಿ ಮಳೆಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು ಈಗ ವರುಣನ ಆರ್ಭಟ ತಗ್ಗಿರುವುದರಿಂದ ಶಾಲಾ ಕಾಲೇಜುಗಳು ಎಂದಿನಂತೆ ಪ್ರಾರಂಭಗೊಳ್ಳಲಿದೆ.

ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಹೊಸನಗರ BEO ಎಚ್ ಆರ್ ಕೃಷ್ಣಮೂರ್ತಿ  ಹೊಸನಗರ ತಾಲೂಕಿನಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದ್ದು ,ನಾಳೆಯಿಂದ ಶಾಲೆಗಳು ಪುನಃ ಆರಂಭವಾಗುತ್ತವೆ.  ಮಕ್ಕಳನ್ನು ತರಗತಿ ಕೊಠಡಿಗಳಲ್ಲಿ ಕೂರಿಸುವ ಮೊದಲು ಕೊಠಡಿಗಳು ಸುಸ್ಥಿತಿಯಲ್ಲಿವೆಯೆಂದು ಖಾತರಿ ಪಡಿಸಿಕೊಳ್ಳಲು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ತಿಳಿಸಿದೆ. ಅಪಾಯ ಸ್ಥಿತಿಯಲ್ಲಿರುವ ಕೊಠಡಿಗಳನ್ನು ಬಳಸಿಕೊಳ್ಳಬಾರದು , ಅವುಗಳಿಗೆ ಬೀಗ ಹಾಕಿ  ಮಕ್ಕಳು ಆ  ಕಡೆಗೆ ಹೊಗದಂತೆ ನಿಗಾವಹಿಸುವುದು.ಕೊಠಡಿಗಳ ಕೊರತೆಯಾದಲ್ಲಿ ಗ್ರಾಮ ಪಂಚಾಯಿತಿ ಮತ್ತು ಎಸ್ ಡಿ ಎಂ ಸಿ ಯವರೊಂದಿಗೆ ಸಮಾಲೋಚನೆ ಮಾಡಿ…ಸಮುದಾಯ ಭವನ../ಇತರೆ  ಸುರಕ್ಷಿತ  ಸ್ಥಳಗಳಲ್ಲಿ ತರಗತಿಗಳನ್ನು ನಡೆಸಲು ಕ್ರಮವಹಿಸುವುದು…ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ನಂತರ ಪರ್ಯಾಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದರು…

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.