ಜಿಲ್ಲಾ ಸುದ್ದಿ:
ಭಾರಿ ಗಾಳಿ ಮಳೆಗೆ ಕಾರಿನ ಮೇಲೆ ಬಿದ್ದ ಮರ | Thirthahalli
ಭಾರಿ ಗಾಳಿ ಮಳೆಗೆ ಕಾರಿನ ಮೇಲೆ ಬಿದ್ದ ಮರ ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ(Thirthahalli) ತಾಲೂಕಿನಾದ್ಯಂತ ಪುಷ್ಯ ಮಳೆಯ ಆರ್ಭಟ ಹೆಚ್ಚಾಗಿದ್ದು ಗಾಳಿ ಮಳೆಯಿಂದ ಗೋಳಿ ಮರವೊಂದು ಉರುಳಿ ಬಿದ್ದು ಪಕ್ಕದಲ್ಲಿ ಇದ್ದ ಕಾರು(car) ಜಖಂಗೊಂಡ ಘಟನೆ ನಡೆದಿದೆ. ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸಮೀಪ ಇರುವ ಕಾಂಗ್ರೆಸ್ ಕಚೇರಿ ಪಕ್ಕದಲ್ಲಿ ಇರುವಂತಹ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಪಕ್ಕದಲ್ಲಿ ಇದ್ದಂತಹ ಭಾರಿ ಹಳೆಯ ಗೋಳಿ ಮರವೊಂದು ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಬಿದ್ದ…
ಶಂಕಿತ ಡೆಂಗ್ಯೂ ಜ್ವರಕ್ಕೆ ನರ್ಸಿಂಗ್ ಆಫೀಸರ್ ಬಲಿ | Dengue
ಶಂಕಿತ ಡೆಂಗ್ಯೂ ಜ್ವರಕ್ಕೆ ನರ್ಸಿಂಗ್ ಆಫೀಸರ್ ಬಲಿ | Dengue ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ನರ್ಸಿಂಗ್ ಆಫೀಸರ್(ನರ್ಸ್) ಹೇಮಾ(45) ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾರೆ. ಭದ್ರಾವತಿಯ ಹೇಮಾ ಅವರು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಜ್ವರಕ್ಕೆ ತುತ್ತಾಗಿ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಶಂಕಿತ ಡೆಂಗ್ಯೂ ಜೊತೆಗೆ ಬೇರೆ ಸಮಸ್ಯೆಯಿಂದಲೂ ಹೇಮಾರವರು ಬಳಲುತ್ತಿದ್ದರು ಎಂಬ ಮಾಹಿತಿ ತಿಳಿದು…
ಮಾರುತಿಪುರ , ಚಂದಾಳದಿಂಬದಲ್ಲಿ ಭಾರಿ ಮಳೆಗೆ ಮನೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು |House damaged due to heavy rain
ಮಾರುತಿಪುರ , ಚಂದಾಳದಿಂಬದಲ್ಲಿ ಭಾರಿ ಮಳೆಗೆ ಮನೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪದ ಚೆಂದಾಳದಿಂಬದಲ್ಲಿ ಹಾಗೂ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಹೊಸಕೆಸರೆ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕರ ಪರವಾಗಿ ಆರ್ಥಿಕಾ ನೆರವು ನೀಡಲಾಗಿದೆ. ಚೆಂದಾಳದಿಂಬ ಗ್ರಾಮದ ಅಮರ್ ಸಿಂಗ್ ಎಂಬುವವರ ಮನೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತ ಕಂಡಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ…
ಉರುಳಿಗೆ ಸಿಲುಕಿ ಚಿರತೆ ಸಾವು | Leopard died after falling
ಉರುಳಿಗೆ ಸಿಲುಕಿ ಚಿರತೆ ಸಾವು ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಚಿರತೆ ಉರುಳಿಗೆ ಸಿಲುಕಿ ಕೂಗುವುದನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶಿವಮೊಗ್ಗದಿಂದ ಅರವಳಿಕೆ ತಜ್ಞರು ಆಗಮಿಸಿ ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡುವಷ್ಟರಲ್ಲಿ ಚಿರತೆ ಮೃತಪಟ್ಟಿದೆ. ಜಮೀನಿನೊಂದರ ತಂತಿ ಬೇಲಿಗೆ ಹಂದಿ ಹಿಡಿಯಲು ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು…
ಗ್ರಾಪಂ ಅಧ್ಯಕ್ಷರ ಮನೆ ಮೇಲೆ ಲೋಕಾಯುಕ್ತ ದಾಳಿ – ಕಂತೆ ಕಂತೆ ಹಣ , ಚಿನ್ನಾಭರಣ ಪತ್ತೆ | Lokayukta Raid
ಗ್ರಾಪಂ ಅಧ್ಯಕ್ಷರ ಮನೆ ಮೇಲೆ ಲೋಕಾಯುಕ್ತ ದಾಳಿ – ಕಂತೆ ಕಂತೆ ಹಣ , ಚಿನ್ನಾಭರಣ ಪತ್ತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಂತರಗಂಗೆ ಗ್ರಾಪಂ ಅಧ್ಯಕ್ಷರಾದ ನಾಗೇಶ್.ಬಿ ಮೂಲ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿರುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಲಂ 13(1)(ಬಿ) ಸಹಿತ…
ಹಳ್ಳದಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ದುರಸ್ತಿಪಡಿಸಿದ ಲೈನ್ ಮ್ಯಾನ್ – ವೀಡಿಯೋ ವೈರಲ್ | power man
ಹಳ್ಳದಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ದುರಸ್ತಿಪಡಿಸಿದ ಲೈನ್ ಮ್ಯಾನ್ – ವೀಡಿಯೋ ವೈರಲ್ | power man ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ಹಲವಾರು ಕಡೆ ಅನೇಕ ಅವಘಡಗಳು ಸಂಭವಿಸಿದೆ, ಇದೀಗ ವಿದ್ಯುತ್ ಲೈನ್ ಸರಿಪಡಿಸಲು ಹಳ್ಳದಲ್ಲಿ ಈಜಿಕೊಂಡು ಹೋಗಿರುವ ವೀಡಿಯೋ ವೈರಲ್ ಆಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಮ್ಯಾನ್ ವೊಬ್ಬ ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ…
ತಗ್ಗಿದ ವರುಣನ ಆರ್ಭಟ – ಹೊಸನಗರ ,ಸಾಗರ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..!| Rain update
ತಗ್ಗಿದ ವರುಣನ ಆರ್ಭಟ – ಹೊಸನಗರ ,ಸಾಗರ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..! ಹೊಸನಗರ ಮತ್ತು ಸಾಗರ ತಾಲೂಕಿನಾದ್ಯಂತ ವರುಣನ ಆರ್ಭಟ ತಗ್ಗಿರುವ ಹಿನ್ನಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳು ಎಂದಿನಂತೆ ಪ್ರಾರಂಭಗೊಳ್ಳಲಿದೆ. ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಭಾರಿ ಮಳೆಯಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು ಈಗ ವರುಣನ ಆರ್ಭಟ ತಗ್ಗಿರುವುದರಿಂದ ಶಾಲಾ ಕಾಲೇಜುಗಳು ಎಂದಿನಂತೆ ಪ್ರಾರಂಭಗೊಳ್ಳಲಿದೆ. ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಹೊಸನಗರ BEO ಎಚ್ ಆರ್…
Ripponpete | ಬೆನವಳ್ಳಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ : ಶಿವಮೊಗ್ಗ – ರಿಪ್ಪನ್‌ಪೇಟೆ ಸಂಚಾರ ಕೆಲಕಾಲ ವ್ಯತ್ಯಯ
Ripponpete | ಬೆನವಳ್ಳಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಮರ : ಶಿವಮೊಗ್ಗ – ರಿಪ್ಪನ್‌ಪೇಟೆ ಸಂಚಾರ ಕೆಲಕಾಲ ವ್ಯತ್ಯಯ ರಿಪ್ಪನ್‌ಪೇಟೆ : ಬೆನವಳ್ಳಿ ಗ್ರಾಮದ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ರಿಪ್ಪನ್ ಪೇಟೆ ಶಿವಮೊಗ್ಗ ಮಾರ್ಗದ ಸಂಚಾರ ಕೆಲಕಾಲ ವ್ಯತ್ಯಯವಾಗಿರುವ ಘಟನೆ ನಡೆದಿದೆ. ಅರಸಾಳು ಗ್ರಾಪಂ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ತಿರುವಿನಲ್ಲಿ ಬೃಹತ್ ಮರವೊಂದು ಹೆದ್ದಾರಿ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನಲೆಯಲ್ಲಿ ಕೆಲಕಾಲ ಶಿವಮೊಗ್ಗ- ರಿಪ್ಪನ್‌ಪೇಟೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ಅರ್ಧ ಗಂಟೆಗೂ ಹೆಚ್ಚು…
Humcha | ಭಾರಿ ಮಳೆಗೆ ಕುಸಿದ ರಸ್ತೆ – ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್
Humcha | ಭಾರಿ ಮಳೆಗೆ ಕುಸಿದ ರಸ್ತೆ – ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಜಡ್ಡು ಎಸ್ ಸಿ ಕಾಲೋನಿ – ನಾಗರಹಳ್ಳಿ ಹೋಗುವ ಸೇತುವೆ ಭಾರಿ ಮಳೆಗೆ ಕುಸಿದು ಬಿದ್ದಿದ್ದು ಭಾರಿ ಅನಾಹುತಕ್ಕೆ ಎಡೆಯಾಗಿತ್ತು. ಈ ಹಿನ್ನಲೆಯಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿದ ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಳ ದೇವರಾಜ್ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ತುರ್ತು ದುರಸ್ತಿಗೆ ಸೂಚಿಸಿದ್ದಾರೆ….
ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ | mini Olympics
ಮಿನಿ ಒಲಿಂಪಿಕ್ ಕಬ್ಬಡಿ ತಂಡಕ್ಕೆ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆ | mini Olympics ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ ಮೂರನೇ ಒಲಿಂಪಿಕ್ ನ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ ಆನಂದಪುರ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯ ಓರ್ವ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 17/07/2024 ರಂದು ನಡೆದ ರಾಜ್ಯ ಒಲಿಂಪಿಕ್ಸ್ ಚಾಂಪಿಯನ್ ಶಿಪ್ ಗೆ ತಂಡಗಳ ಅಯ್ಕೆ ಪ್ರಕ್ರಿಯೆಯಲ್ಲಿ ಕಬ್ಬಡಿ ತಂಡಕ್ಕೆ ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ…