Headlines

ಬ್ರೇಕ್‌ ಫೇಲ್ | ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಹರಿದ್ ಬಸ್ – ತಪ್ಪಿದ ಭಾರಿ ಅನಾಹುತ

ಬ್ರೇಕ್‌ ಫೇಲ್ | ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಹರಿದ್ ಬಸ್ – ತಪ್ಪಿದ ಭಾರಿ ಅನಾಹುತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರದಲ್ಲಿ ಇಂದು ಸಂಜೆ ನಡೆದ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಖಾಸಗಿ ಬಸ್‌ವೊಂದರ ಬ್ರೇಕ್‌ ಫೇಲ್‌ ಆಗಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ಬೈಕ್‌ಗಳ ಮೇಲೆ ಬಸ್ ಹರಿದ ಘಟನೆ ನಡೆದಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಸಂಭವಿಸಿದ ಈ ಅವಘಡದಲ್ಲಿ ಬೈಕ್‌ಗಳಿಗೆ ಗಂಭೀರ ಹಾನಿಯಾಗಿದೆ….

Read More

ಶಿವಮೊಗ್ಗದಲ್ಲಿ ಸರಣಿ ಅಪಘಾತ – ಓರ್ವ ಗಂಭೀರ , ಮೂವರಿಗೆ ಗಾಯ

ಶಿವಮೊಗ್ಗದಲ್ಲಿ ಸರಣಿ ಅಪಘಾತ – ಓರ್ವ ಗಂಭೀರ , ಮೂವರಿಗೆ ಗಾಯ ಶಿವಮೊಗ್ಗ ನಗರ ಆಯನೂರು ಗೇಟ್ ಬಳಿ ಭಾನುವಾರ ಮಧ್ಯಾಹ್ನ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಮೂವರಿಗೆ ಗಾಯಗಳಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಗಾಯಗೊಂಡ ಮೂವರಲ್ಲಿ ಒಬ್ಬರಿಗೆ ತೀವ್ರ ರೀತಿಯಲ್ಲಿ ತಲೆಗೆ ಪೆಟ್ಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಫುಡ್‌ ಡೆಲಿವರಿ ಬಾಯ್‌ ಸಿಗ್ನಲ್‌ ಬ್ರೇಕ್‌ ಮಾಡಿ ಅಜಾಗರೂಕವಾಗಿ ಬೈಕ್‌ ಚಲಾಯಿಸಿದ್ದು, ಇದನ್ನು ತಪ್ಪಿಸಲು ಶರಾವತಿ ನಗರದ ಕಡೆಯಿಂದ ಬರುತ್ತಿದ್ದ ಎರಿಟಿಗಾ ಕಾರು…

Read More

ಹೊಸನಗರ | ಬಸ್ಸು ಡಿಕ್ಕಿಯಾಗಿ ಪ್ರಪಾತಕ್ಕೆ ಉರುಳಿದ ಕಾರು – ಓರ್ವ ಸಾವು – ಮೂವರಿಗೆ ಗಾಯ

ಹೊಸನಗರ | ಬಸ್ಸು ಡಿಕ್ಕಿಯಾಗಿ ಪ್ರಪಾತಕ್ಕೆ ಉರುಳಿದ ಕಾರು – ಓರ್ವ ಸಾವು – ಮೂವರಿಗೆ ಗಾಯ Car falls into ravine after hitting bus – one dead, three injured ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿ ಹಿನ್ನೀರಿನ ಪ್ರಪಾತಕ್ಕೆ ಕಾರು ಉರುಳಿಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಮಂಡೋಡಿ ಎಂಬುವಲ್ಲಿ ನಡೆದಿದೆ. ಕಾರು ಚಲಾಯಿಸುತ್ತಿದ್ದ ಮಂಡೋಡಿ…

Read More

SAGARA | ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ,ಯುವಕನಿಗೆ ಗಂಭೀರ ಗಾಯ – ಕೊಲೆಯತ್ನ ಪ್ರಕರಣ ದಾಖಲು

SAGARA | ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ,ಯುವಕನಿಗೆ ಗಂಭೀರ ಗಾಯ – ಕೊಲೆಯತ್ನ ಪ್ರಕರಣ ದಾಖಲು ಸಾಗರ ಪಟ್ಟಣದ ಹಳೆ ಖಾಸಗಿ ಬಸ್ ನಿಲ್ದಾಣದ ಸಮೀಪದ ಹೋಟೆಲ್‌ವೊಂದರಲ್ಲಿ ಶುಕ್ರವಾರ ಸಂಜೆ ಎರಡು ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡು ಮಾರಣಾಂತಿಕ ಹೊಡೆದಾಟ ನಡೆದಿದ್ದು ಪುರಪ್ಪೆಮನೆ ಗ್ರಾಮದ ಮಂಜುನಾಥ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ಹಿನ್ನೆಲೆಯಲ್ಲಿ ಕುಗ್ವೆ ಗ್ರಾಮದ ಸೋಮಶೇಖರ್, ಶಿವಾನಂದ ಮತ್ತು ಅವಿನಾಶ್ ವಿರುದ್ಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಹಲವು…

Read More

mETA

ರಿಪ್ಪನ್‌ಪೇಟೆ ಪೊಲೀಸರ ದಾಳಿ: ಅಕ್ರಮ ಗೋ ಸಾಗಾಣಿಕೆ ಪತ್ತೆ, ಮೂವರ ಬಂಧನ ರಿಪ್ಪನ್‌ಪೇಟೆ – ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಗ್ರಾಮಸ್ಥರ ಸಹಕಾರದೊಂದಿಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಜಾನುವಾರು ಸಹಿತ ಆರೋಪಿಗಳನ್ನು ಬಂಧಿಸಿದೆ. ಪೊಲೀಸರು ಬಂಧಿಸಿದವರನ್ನು ನಲ್ಲಿಹೊಂಡಾ ಗ್ರಾಮದ ಅರಣ್ಯ ಇಲಾಖೆಯ ವಾಚರ್ ಹಾಗೂ ತಾಲ್ಲೂಕು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಶಿಕಾರಿಪುರ ಬೆಂಡೆಕಟ್ಟ ಗ್ರಾಮದ…

Read More

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ನೆಪದಲ್ಲಿ ಶಿವಮೊಗ್ಗದ ಯುವಕನಿಗೆ ₹2.66 ಲಕ್ಷ ವಂಚನೆ

ಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ ಶಿವಮೊಗ್ಗ ಯುವಕನಿಗೆ ₹2.66 ಲಕ್ಷ ವಂಚನೆ ಶಿವಮೊಗ್ಗ: ಕ್ರಿಪ್ಟೋ ಕರೆನ್ಸಿ ಹೂಡಿಕೆಯಲ್ಲಿ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ, ಶಿವಮೊಗ್ಗದ ಯುವಕನೊಬ್ಬನಿಂದ ₹2,66,069 ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 2ರಂದು ದೂರುದಾರರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ತಮ್ಮನ್ನು “Live Trading” ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ವಂಚಕರು, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು…

Read More

ರಿಪ್ಪನ್‌ಪೇಟೆ ಪೊಲೀಸರ ದಾಳಿ: ಅಕ್ರಮ ಗೋ ಸಾಗಾಣಿಕೆ ಪತ್ತೆ, ಮೂವರ ಬಂಧನ

ರಿಪ್ಪನ್‌ಪೇಟೆ ಪೊಲೀಸರ ದಾಳಿ: ಅಕ್ರಮ ಗೋ ಸಾಗಾಣಿಕೆ ಪತ್ತೆ, ಮೂವರ ಬಂಧನ ರಿಪ್ಪನ್‌ಪೇಟೆ – ಅಕ್ರಮವಾಗಿ ಗೋವುಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಗ್ರಾಮಸ್ಥರ ಸಹಕಾರದೊಂದಿಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಜಾನುವಾರು ಸಹಿತ ಆರೋಪಿಗಳನ್ನು ಬಂಧಿಸಿದೆ. ಪೊಲೀಸರು ಬಂಧಿಸಿದವರನ್ನು ನಲ್ಲಿಹೊಂಡಾ ಗ್ರಾಮದ ಅರಣ್ಯ ಇಲಾಖೆಯ ವಾಚರ್ ಹಾಗೂ ತಾಲ್ಲೂಕು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಹಾಗೂ ಶಿಕಾರಿಪುರ ಬೆಂಡೆಕಟ್ಟ ಗ್ರಾಮದ…

Read More

ಆಟೋ ಚಾಲಕನನ್ನು ನಂಬಿ ಹೋದ ಕಾಲೇಜು ಹುಡುಗಿಯರು – ಸಾಮೂಹಿಕ ಅತ್ಯಾಚಾರಕ್ಕೆ ಪ್ಲಾನ್ | ನಾಲ್ವರನ್ನು ಬಂಧಿಸಿದ ಪೊಲೀಸರು

ಆಟೋ ಚಾಲಕನನ್ನು ನಂಬಿ ಹೋದ ಕಾಲೇಜು ಹುಡುಗಿಯರು – ಸಾಮೂಹಿಕ ಅತ್ಯಾಚಾರಕ್ಕೆ ಪ್ಲಾನ್ | ನಾಲ್ವರನ್ನು ಬಂಧಿಸಿದ ಪೊಲೀಸರು ಆಟೋ ಡ್ರೈವರನ್ನು ನಂಬಿ ಹೋದ ಇಬ್ಬರು ಅಪ್ರಾಪ್ತ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ (ಗ್ಯಾಂಗ್ ರೇಪ್) ನಡೆಯುವುದನ್ನು ತಪ್ಪಿಸಿ, ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಯುವಕರ ದುಷ್ಕೃತ್ಯದಿಂದ ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ನಿಡ್ಡೋಡಿ ಎಂಬಲ್ಲಿ ಘಟನೆ ನಡೆದಿದೆ. ಆಟೋ ಚಾಲಕ ಮಹೇಶ್, ಕಟೀಲು ನಿವಾಸಿ ಶ್ರೀಕಾಂತ್, ಯಜ್ಞೇಶ್ ಮತ್ತು ದಿಲೀಪ್ ಬಂಧಿತರು.ಖಾಕಿ…

Read More

ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಶವ ಕೆರೆಯಲ್ಲಿ ಪತ್ತೆ

ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಶವ ಕೆರೆಯಲ್ಲಿ ಪತ್ತೆ ಜಾತಿವಾರು ಸಮೀಕ್ಷಾ ಕಾರ್ಯಕ್ಕೆ ತೆರಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕಿಯ ಶವ ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಬಳಿಯ ಅಯ್ಯಪ್ಪಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿದೆ. ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ಅಖ್ತರ್ ಬೇಗಂ (50) ಮೃತ ಶಿಕ್ಷಕಿ. ಬೇತಮಂಗಲ ಪೊಲೀಸರು ಮೃತದೇಹವನ್ನು ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಖ್ತರ್ ಬೇಗಂ…

Read More

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು

ಬುಲೆರೋ-ಬೈಕ್ ಮುಖಾಮುಖಿ ಡಿಕ್ಕಿ : ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲೇ ಸಾವು ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಇಂದು ಸಂಜೆ ನಡೆದ ದುರಂತ ಅಪಘಾತದಲ್ಲಿ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಗರ್ತಿಕೆರೆ ಸಮೀಪದ ನಿಟ್ಟೂರು ಗ್ರಾಮದ ನಿವಾಸಿ ಚರಣ್ (23) ಎಂಬ ಯುವಕನೇ ದುರ್ದೈವಿ. ಈತ ತೀರ್ಥಹಳ್ಳಿಯಿಂದ ಮನೆಗೆ ವಾಪಸ್ಸಾಗುವ ವೇಳೆ ಅಪಘಾತ ಸಂಭವಿಸಿದೆ. ಚರಣ್ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮುಗಿಸಿದ್ದನು. ಇನ್ನೂ ಚರಣ್…

Read More