ಕ್ರೈಂ ಸುದ್ದಿ:
ರಿಪ್ಪನ್‌ಪೇಟೆ : ದನದ ಕೊಟ್ಟಿಗೆಯ ಹಂಚನ್ನು ಕಿತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಬ್ಬಲ್ ಮರ್ಡರ್ ಬೆದರಿಕೆ !!! ಪ್ರಕರಣ ದಾಖಲು|assault
ರಿಪ್ಪನ್‌ಪೇಟೆ : ದನದ ಕೊಟ್ಟಿಗೆಯ ಹಂಚು ಕಿತ್ತುಹಾಕಿದ್ದನ್ನ ಪ್ರಶ್ನಿಸಿದ್ದಕ್ಕೆ ಈ ಮನೆಯಲ್ಲಿ ಎರಡು ಕೊಲೆಯಾಗುತ್ತದೆ ಎಂದು ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿನ ಸಮೀಪದ ಬೆನವಳ್ಳಿ ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ಬೆನವಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯ ಹಂಚನ್ನು ಚಂದ್ರಪ್ರಸಾದ್ ಎಂಬವರು ಏಕಾಏಕಿ ಕಿತ್ತುಹಾಕಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ಸಂತ್ರಸ್ತರು ಪ್ರಶ್ನಿಸಿದ್ದಾರೆ. ಈ ವೇಳೇ ಅವರನ್ನು ನಿಂದಿಸಿದ್ದಷ್ಟೆ ಅಲ್ಲದೆ, ಈ ಮನೆಯಲ್ಲಿ ಎರಡು ಕೊಲೆಯಾಗಲಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು…
ವಿದ್ಯುತ್ ತಗುಲಿ ಇಬ್ಬರು ಸಾವು – ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವಿನ ವೇಳೆ ನಡೆದ ದುರಂತ|electric-shock
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕಟಾವ್ ಮಾಡಲು ಹೋಗಿದ್ದ ಇಬ್ಬರು ಕರೆಂಟ್ ತಗುಲಿ ಸಾವನ್ನಪ್ಪಿದ್ಧಾರೆ. ಶಿವಮೊಗ್ಗ ನಗರದ ಊರುಗಡೂರ್ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವರು ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಎಂದು ಗೊತ್ತಾಗಿದ್ದು, ಇನ್ನೊಬ್ಬರ ಸುಳಿವು ಸಿಗಬೇಕಿದೆ. ಘಟನೆಯಲ್ಲಿ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮೇನ್ ಲೇನ್ ಸಂಪರ್ಕಗೊಂಡಿದ್ದು, ಅದರಿಂದ ಹರಿದ ವಿದ್ಯುತ್ನಿಂದಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು 108 ಗೆ ಕರೆ ಮಾಡಿ ಆ್ಯಂಬುಲೆನ್ಸ್ನ್ನ ಕರೆಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿದ್ದು,…
ರಿಪ್ಪನ್‌ಪೇಟೆ : ನ್ಯೂ ಚಾಣಕ್ಯ ಬಾರ್ ಹಿಂಭಾಗದಲ್ಲಿ ವ್ಯಕ್ತಿಯ ಶವ ಪತ್ತೆ|crime news
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ನ್ಯೂ ಚಾಣಕ್ಯ ಬಾರ್ ಹಿಂಬಾಗದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ತೀರ್ಥಹಳ್ಳಿ ರಸ್ತೆಯ ನಿವಾಸಿ ಓಂಕೇಶ್ (52) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ನ್ಯೂ ಚಾಣಕ್ಯ ಬಾರ್ ಹಿಂಬಾಗದಲ್ಲಿ ಮದ್ಯವ್ಯಸನಿಯಾಗಿದ್ದ ಓಂಕೇಶ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪಿಎಸ್ ಐ ಎಸ್ ಪಿ ಪ್ರವೀಣ್ ಮತ್ತು ಸಿಬ್ಬಂದಿಗಳು ಸ್ಥಳ್ಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಾರ್ ಮಾಲೀಕರು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದೇ ಬಾರ್ ಹಿಂಭಾಗದಲ್ಲಿ ಮದ್ಯ ಸೇವನೆಗೆ ಅನುವು…
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೇಸ್ ವರ್ಕರ್|bribe
ಶಿವಮೊಗ್ಗ ಜಿಲ್ಲೆಯ ಸೊರಬ ಪುರಸಭೆಯ ಮಹಿಳಾ ಸಿಬ್ಬಂದಿ ಖಾತೆ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಬಲೆಗೆ ಬಿದ್ದವರು ಸೊರಬ ಪುರಸಭೆಯ ಕೇಸ್ ವರ್ಕರ್ ಚಂದ್ರಕಲಾ ಎಂದು ತಿಳಿದುಬಂದಿದೆ. ಮಂಜುನಾಥ ಶೆಟ್ಟಿ ಎಂಬವರು ತಮ್ಮ ಖಾತೆ ಬದಲಾವಣೆಗಾಗಿ ಪುರಸಭೆಗೆ ಹೋದಾಗ ಸಿಬ್ಬಂದಿ ಖಾತೆ ಬದಲಾವಣೆ ಮಾಡಿಸದೆ ಸತಾಯಿಸಿದ್ದಾರೆ. ಅಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಮಂಜುನಾಥ್ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೊರಬ ಪುರಸಭೆಯಲ್ಲಿ ಚಂದ್ರಕಲಾ…
ಹೆಣ್ಣು ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಅಪ್ಪ ವಿಧಿಯಾಟಕ್ಕೆ ಬಲಿ – ಆನಂದಪುರದಲ್ಲೊಂದು ಹೃದಯವಿದ್ರಾವಕ ಘಟನೆ|Accident
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಆನಂದಪುರದ ಕಡೆ ತೆರಳುತ್ತಿದ್ದ ಪಾದಾಚಾರಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮೃತಪಟ್ಟವರು ಬನವಾಸಿ ನಿವಾಸಿ ಮಂಜುನಾಥ ಗೌಡ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆ ಮನೆಯಲ್ಲಿ ನಾಳೆ ಇಬ್ಬರು ಹೆಣ್ಮಕ್ಕಳ ಮದುವೆ ಇತ್ತು. ಇಡೀ ಮನೆ ಬಂಧು ಮಿತ್ರರಿಂದ ಖುಷಿಖುಷಿಯಾಗಿ ನಲಿದಾಡುತ್ತಿತ್ತು. ಆದರೆ, ಒಮ್ಮಿಂದೊಮ್ಮೆಗೇ ಈ ಮನೆಯಲ್ಲಿ ಸೂತಕದ ಕಳೆ ಆವರಿಸಿದೆ. ಯಾಕೆಂದರೆ, ನಾಳೆ ಮದುವೆಯಾಗಬೇಕಾದ ಆ ಇಬ್ಬರು ಹೆಣ್ಣು ಮಕ್ಕಳ ತಂದೆ…
ರಿಪ್ಪನ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರು ಗಾಯಾಳು ಮೆಗ್ಗಾನ್ ಗೆ ರವಾನೆ|accident
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿರುವ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಂಪೌಂಡ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಮಾರುತಿ ಜೆನ್ ಕಾರು ಸೋಮವಾರ ರಾತ್ರಿ 11.00 ಗಂಟೆಯ ಸಮಯದಲ್ಲಿ ಚರ್ಚ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಮರದ ದಿಬ್ಬಗಳಿಗೆ ಡಿಕ್ಕಿಯಾಗಿ ನಂತರ ಕಾಂಪೌಂಡ್ ಗೆ ಡಿಕ್ಕಿಯಾಗಿ ಮೂರು ಪಲ್ಟಿಯಾಗಿದೆ.ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನಲ್ಲಿ ಇಬ್ಬರು ಪ್ರಯಾಣಿಸುತಿದ್ದರು ಎನ್ನಲಾಗುತ್ತಿದೆ. ಪಟ್ಟಣದಲ್ಲಿ ಜೆಸಿಬಿ…
ತೀರ್ಥಹಳ್ಳಿಯಲ್ಲಿ ಹನಿಟ್ರ್ಯಾಪ್ ..! ಸರ್ಕಾರಿ ಅಧಿಕಾರಿಗೆ ಬ್ಲಾಕ್ ಮೇಲ್ – ಯುವತಿ ಸೇರಿ ಮೂವರ ಬಂಧನ,ನಾಲ್ವರು ಪರಾರಿ|crime news
ತೀರ್ಥಹಳ್ಳಿ ತಾಲೂಕಿನಲ್ಲಿ ಅಶ್ಲೀಲ ವಿಡಿಯೋ ,ವೇಶ್ಯಾವಾಟಿಕೆ ಜಾಲ ಬಯಲು ಬಳಿಕ ಇದೀಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಹನಿಟ್ರ್ಯಾಪ್ ಎಂದು ಹೆಸರಿಡಲಾಗಿದ್ದು ಈ ಪ್ರಕರಣದಲ್ಲಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಹಿನ್ನಲೆ : ಅರಣ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೊಬ್ಬರು ನೀವು ನಮ್ಮ ಸ್ಟುಡಿಯೋ ದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ.ಈ ಕರೆ ಅಧಿಕಾರಿ ಮತ್ತು ಮಹಿಳೆಯ ಜೊತೆ ಸಲುಗೆಯಿಂದ ಇರುವಂತೆ…
ರಿಪ್ಪನ್‌ಪೇಟೆ : ಮನೆಗಳ್ಳತನದ ಆರೋಪಿಗಳ ಬಂಧನ – ಕಳ್ಳರ ಜಾಡು ಪತ್ತೆ ಹಚ್ಚಿದ ಆ ಒಂದು ಸುಳಿವು|arrested
ಜೂನ್ ತಿಂಗಳ 8 ನೇ ತಾರೀಖಿನಂದು ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಗಂಧ್ರಳ್ಳಿ ಗ್ರಾಮದ ಗೋವಿಂದನಾಯ್ಕ್ ರವರ ಮನೆಯಲ್ಲಿದ್ದ ಆಭರಣ, ನಗದು ಕಳ್ಳತನ ನಡೆಸಿದ ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ಧಾರೆ. ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನದ ಆಭರಣಗಳು ಮತ್ತು ನಗದು ಕಳ್ಳತನ ಮಾಡಿದ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂ 08 ರಂದು ಪ್ರಕರಣ ದಾಖಲಾಗಿತ್ತು. ಘಟನೆಯ ಬಗ್ಗೆ ತನಿಖೆ ಕೈಗೊಂಡ ಪಿಎಸ್ ಐ ಪ್ರವೀಣ್ ಎಸ್ ಪಿ ಮತ್ತು ಸಿಬಂದಿಗಳ ತಂಡವು ಶಿವಮೊಗ್ಗ ಜಿಲ್ಲೆಯ ಹೊಸನಗರ…
ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ: ಏಳು ಮಹಿಳೆಯರ ರಕ್ಷಣೆ|crime news
ಶಿವಮೊಗ್ಗ ನಗರದಲ್ಲಿ ಅರ್ಬನ್ ಪ್ರೊಫೆಷನ್ ಫ್ಯಾಮಿಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಏಳು ಜನ ಮಹಿಳೆಯರನ್ನು ರಕ್ಷಿಸಿಸಲಾಗಿದೆ. ಶಿವಮೊಗ್ಗ ವಿನೋಬನಗರದಲ್ಲಿ ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುಳಿವು. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳು ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಐಪಿಎಸ್ ಬಿಂದುಮಣಿ ನೇತೃತ್ವದಲ್ಲಿ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು. ಸದ್ಯ ಏಳು ಸಂತ್ರಸ್ತ ಮಹಿಳೆಯರನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು ಜಿಲ್ಲೆಯಲ್ಲಿ ವೇಶ್ಯಾವಾಟಿಕೆ…
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವಕರ ಮೇಲೆ ಹಲ್ಲೆ – ಆಸ್ಪತ್ರೆಗೆ ದೌಡಾಯಿಸಿದ ಹಿಂದೂ ಕಾರ್ಯಕರ್ತರು|assault
ಶಿವಮೊಗ್ಗ : ಕ್ಷುಲಕ ವಿಚಾರಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಟಿಪ್ಪು ನಗರದಲ್ಲಿ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್ ಮತ್ತು ಆಟೋ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಸಂದೇಶ್ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ….