Headlines

ರೈಲ್ವೆ ನಿಲ್ದಾಣದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ | Railway

ರೈಲ್ವೆ ನಿಲ್ದಾಣದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ |

ಶಿವಮೊಗ್ಗ : ಇಲ್ಲಿನ ರೈಲುನಿಲ್ದಾಣದಲ್ಲಿ ಭದ್ರಾವತಿ ಕಡೆಗೆ ಹೋಗುವ ಕೊನೆಯ ರೈಲ್ವೆ ಟ್ರಾಕ್ ಮೇಲೆ ಸುಮಾರು 30 ವರ್ಷದ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. 

ಕರ್ತವ್ಯದಲ್ಲಿದ್ದ ಕೀ ಮ್ಯಾನ್ ಟ್ರ್ಯಾಕ್ ಪರಿಶೀಲನೆ ವೇಳೆಯಲ್ಲಿ ಶವ ಪತ್ತೆಯಾಗಿದೆ. ಶವವು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೈತ್ಯಗಾರದಲ್ಲಿರುತ್ತದೆ.

ಮೃತ ವ್ಯಕ್ತಿಯ ಚಹರೆ ಸುಮಾರು 5.8 ಅಡಿ ಎತ್ತರ, ಸಾದಾ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಕಪ್ಪು ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತ ವ್ಯಕ್ತಿಯು ಗ್ರೇ ಕಲರ್ ತುಂಬು ತೋಳಿನ ಶರ್ಟ್, ಗ್ರೇ ಕಲರ್ ಮತ್ತು ನೀಲಿ ಬಣ್ಣದ ಬನಿಯನ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಬಟ್ಟೆಗಳು ಹರಿದು ರಕ್ತಮಯವಾಗಿರುತ್ತದೆ.

ವಾರಸುದಾರರು ಯಾರದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹುದೆಂದು ರೈಲ್ವೆ ಪೊಲೀಸ್ ಠಾಣೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *