ಜಿಲ್ಲಾ ಸುದ್ದಿ:
ಹಾಲಿನ ಗುಣಮಟ್ಟದ ಉತ್ಪನ್ನಗಳ ಮಾರಾಟದಿಂದ ರೈತರಿಗೆ, ಗ್ರಾಹಕರಿಗೆ ಹೆಚ್ಚು ಲಾಭ – ವಿದ್ಯಾದರ್
ಹಾಲಿನ ಗುಣಮಟ್ಟದ ಉತ್ಪನ್ನಗಳ ಮಾರಾಟದಿಂದ ರೈತರಿಗೆ, ಗ್ರಾಹಕರಿಗೆ ಹೆಚ್ಚು ಲಾಭ – ವಿದ್ಯಾದರ್ ರಿಪ್ಪನ್ ಪೇಟೆಯಲ್ಲಿ ಎರಡು ನಂದಿನಿ ಮಿಲ್ಕ್ ಪಾರ್ಲರ್ ಶುಭಾರಂಭ ಶಿವಮೊಗ್ಗ ಕೆ.ಎಂ.ಎಫ್ ವ್ಯಾಪ್ತಿಗೆ ಮೂರು ಜಿಲ್ಲೆಗಳು ಒಳಪಡುತ್ತಿದ್ದು ಪ್ರತಿ ಜಿಲ್ಲೆಯ ವ್ಯಾಪ್ತಿಯಲ್ಲಿ ತಲಾ 25 ಮಿಲ್ಕ್ ಪಾರ್ಲರ್‌ಗಳನ್ನು ತೆರೆಯುವ ಮೂಲಕ ವಿದ್ಯಾವಂತ ಯುವಕ, ಯುವತಿಯರಿಗೆ ಸ್ವಾವಲಂಬಿ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಶಿಮೂಲ್ ಅಧ್ಯಕ್ಷ ವಿದ್ಯಾಧರ್ ಹೇಳಿದರು. ಪಟ್ಟಣದ ಗ್ರಾಮ ಪಂಚಾಯ್ತಿ ಮುಂಭಾಗ ಮತ್ತು ಸಾಗರ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ…
RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ RIPPONPETE | ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹೊಸನಗರ ತಾಲ್ಲೂಕು ಬಿಜೆಪಿ ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರದ ವತಿಯಿಂದ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕ್ರಮ ಖಂಡನೀಯವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ಬೆಲೆ ಏರಿಕೆ ಆರಂಭಮಾಡಿದೆ. ರಾಜ್ಯ…
ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು
ವಿನೋಬನಗರ ಇನ್ಸ್ ಪೆಕ್ಟರ್ ಚಂದ್ರಕಲಾ ಅಮಾನತು ಶಿವಮೊಗ್ಗ: ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಹೊಸಮನಿ ಅವರನ್ನು ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇ ಗೌಡ ಆದೇಶಿಸಿದ್ದಾರೆ.ಕರ್ತವ್ಯದಲ್ಲಿ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿರುವುದಾಗಿ ತಿಳಿದು ಬಂದಿದೆ. ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿಎಸೈಗಳ ಸಭೆಯನ್ನು ಎಸ್ಪಿ ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್ಐ ಗಳು ಹಾಜರಾಗಿದ್ದರು. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು…
RIPPONPETE | ಸುಸಜ್ಜಿತ ಮದುವೆ ಸಭಾಂಗಣ “ಎಸ್ ಆರ್ ಕನ್ವೆನ್ಷನ್ ಹಾಲ್” ಲೋಕಾರ್ಪಣೆ
RIPPONPETE | ಸುಸಜ್ಜಿತ ಮದುವೆ ಸಭಾಂಗಣ “ಎಸ್ ಆರ್ ಕನ್ವೆನ್ಷನ್ ಹಾಲ್” ಲೋಕಾರ್ಪಣೆ ರಿಪ್ಪನ್ ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ ಮದುವೆ ಸಭಾಂಗಣ “ಎಸ್ ಆರ್ ಕನ್ವೆನ್ಷನ್ ಹಾಲ್ ” ನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರೂ ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು. ಎಸ್ ಆರ್ ಗ್ರೂಪ್ಸ್ ನ ಮಾಲೀಕರರಾದ ಆರ್ ರವಿಚಂದ್ರ ಮಾಲೀಕತ್ವದ ಎಸ್ ಆರ್ ಕನ್ವೆನ್ಷನ್ ಹಾಲ್ ನ್ನು ಟೇಪ್ ಕತ್ತರಿಸುವ ಮೂಲಕ ಶಾಸಕ…
ರಿಪ್ಪನ್ ಪೇಟೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ ಸುಸಜ್ಜಿತ “ಎಸ್ ಆರ್ ಕನ್ವೆನ್ಷನ್” ಹಾಲ್
ರಿಪ್ಪನ್ ಪೇಟೆಯಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ ಸುಸಜ್ಜಿತ “ಎಸ್ ಆರ್ ಕನ್ವೆನ್ಷನ್” ಹಾಲ್ ಮದುವೆ ಎಂದರೆ ಒಂದೆರಡು ದಿನಗಳಿಗೆ ಸೀಮಿತವಾದ ಘಟನೆಯಲ್ಲ, ಅದು ಎಷ್ಟೇ ವರ್ಷಗಳು ಕಳೆದರೂ ನೆನಪಿನಲ್ಲಿ ಉಳಿಯುವ ಒಂದು ನೆನಪು. ಹೌದು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನೂತನವಾಗಿ ಸುಸಜ್ಜಿತವಾಗಿ ಸಿದ್ದವಾಗಿರುವ ಆರ್ ರವಿಚಂದ್ರ ಮಾಲೀಕತ್ವದ “ಎಸ್ ಆರ್ ಕನ್ವೆನ್ಷನ್ ಸೆಂಟರ್” ಇಂದು ಲೋಕಾರ್ಪಣೆಗೊಳ್ಳಲಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅರಮನೆಯಂತೆ ಕಂಗೊಳಿಸುವ ಈ ಎಸ್ ಆರ್…
ನಿವೃತ್ತ ಸೈನಿಕನಿಗೆ ಸಾರ್ವಜನಿಕರಿಂದ ಅದ್ದೂರಿ ಸ್ವಾಗತ
ನಿವೃತ್ತ ಸೈನಿಕನಿಗೆ ಸಾರ್ವಜನಿಕರಿಂದ ಅದ್ದೂರಿ ಸ್ವಾಗತ ರಿಪ್ಪನ್‌ಪೇಟೆ;-ಕೇಂದ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಊರಿಗೆ ಮರಳಿದ ನಿವೃತ್ತ ಸೈನಿಕ ಮಾದಾಪುರ ಗ್ರಾಮದ ಕೊರಟಿಕೆರೆ ನಿವಾಸಿ ಲಿಂಗಾರಾಜ್ ಜಿ. ಇವರಿಗೆ ಗ್ರಾಮಸ್ಥರು ಮತ್ತು ಸಾರ್ವಜನಿಕರು ನಿವೃತ್ತ ಸೈನಿಕರು ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ನಿವೃತ್ತ ಸೈನಿಕ ಲಿಂಗಾರಾಜ್ ಜಿ.ಇವರು ಊರಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಸಮೀಪದ ಸಿದ್ದಪ್ಪನಗುಡಿ ಬಳಿ ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಿ ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ…
ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ
ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ ರಿಪ್ಪನ್‌ಪೇಟೆ;-ಕಾಯಕಯೋಗಿ ತ್ರಿವಿಧ ದಾಸೋಹಿ ಶತಾಯಿಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 118 ನೇ ಜನ್ಮ ದಿನಾಚರಣೆಯನ್ನು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರೋಟರಿ ಕ್ಲಬ್ ಸದಸ್ಯರು ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು ವಿಶೇಷವಾಗಿ ಜನಮನ ಸೆಳೆಯಿತು. ಜಿ.ಎಸ್.ಬಿ.ಮತ್ತು ಬ್ರಾಹ್ಮಣ ಸಮಾಜ ಹಾಗೂ ರೋಟರಿ ಕ್ಲಬ್ ಸಾರ್ವಜನಿಕರು ಮತ್ತು ಶ್ರೀಗಳ ಅಭಿಮಾನಿ ಬಳಗದವರು ಇಲ್ಲಿನ ವಿನಾಯಕ ವೃತ್ತದಲ್ಲಿ “ಲಿಂ.ಡಾ.ಶಿವಕುಮಾರ ಮಹಾಸ್ವಾಮಿಜಿ’’ಗಳ ಭಾವಚಿತ್ರವನ್ನಿಟ್ಟು ಪೂಜೆಸಿ ಪುಷ್ಪಾ ವೃಷ್ಟಿ ಸಮರ್ಪಿಸುವ…
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ
ರಿಪ್ಪನ್‌ಪೇಟೆ – ಭಕ್ತವೃಂದದಿಂದ ತ್ರಿವಿಧ ದಾಸೋಹಿ ಶ್ರೀಗಳ 118 ನೇ ಜನ್ಮ ದಿನಾಚರಣೆ ರಿಪ್ಪನ್‌ಪೇಟೆ : ತ್ರಿವಿಧ ದಾಸೋಹಿ ,ಶತಾಯಿಷಿ ಕಾಯಕಯೋಗಿ ದಿವಂಗತ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು. ರಿಪ್ಪನ್‌ಪೇಟೆ ಭಕ್ತ ಬಳಗದವರು ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೮ ನೇ ವರ್ಷದ ಜನ್ಮ ದಿನಾಚರಣೆಯಲ್ಲಿ ಶ್ರೀಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ಸೇವೆ ಸಲ್ಲಿಸಿದರು. ಸಾಗರ ನಗರ ಸಭೆಯ ನಿವೃತ್ತ ಸಮುದಾಯ ಸಂಘಟನಾಧಿಕಾರಿ…
ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ
SHIVAMOGGA | ಈದ್ಗಾ ಮೈದಾನಕ್ಕೆ ಬೇಲಿ – ಸ್ಥಳದಲ್ಲಿ ಬಿಗುವಿನ ವಾತಾವರಣ | ಎಸ್ ಪಿ ಮಿಥುನ್ ಕುಮಾರ್ ಮಧ್ಯಸ್ಥಿಕೆಯಿಂದ ತಿಳಿಗೊಂಡ ಪರಿಸ್ಥಿತಿ ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂದಿನ ಮೈದಾನದ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಇಲ್ಲಿನ ಈದ್ಗಾ ಮೈದಾನದಲ್ಲಿ ಹಿಂದೂ ಕಾರ್ಯಕರತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆದಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ರಂಜಾನ್ ಪ್ರಾರ್ಥನೆ ನಂತರ ವಿವಾದಿತ ಮೈದಾನಕ್ಕೆ ಬೇಲಿ ಹಾಕಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಬೇಲಿ ಹಾಕಿದ್ದು ಯಾರು ಎಂದು ಬೇಲಿ…
ರಿಪ್ಪನ್ ಪೇಟೆಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ
ರಿಪ್ಪನ್ ಪೇಟೆಯಲ್ಲಿ ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ | ಪರಸ್ಪರ ಸಾಮರಸ್ಯದಿಂದ ಸಮಾಜದಲ್ಲಿ ನೆಮ್ಮದಿ ಸಾಧ್ಯ – ಮುನೀರ್ ಸಖಾಫ಼ಿ ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸ್ಜಿದ್ ನ ಮುಸ್ಲಿಂ ಬಾಂಧವರುಗಳು ಧರ್ಮಗುರುಗಳಾದ ಮುನೀರ್ ಸಖಾಫಿ ಮತ್ತು ಮೌಲಾನ ರಫ಼ೀದ್ ಹಜರತ್ ರವರ ನೇತೃತ್ವದಲ್ಲಿ ರಂಜಾನ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ಹೊಸನಗರ ರಸ್ತೆಯಿಂದ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ…