ಜಿಲ್ಲಾ ಸುದ್ದಿ:
ರಿಪ್ಪನ್ ಪೇಟೆ ಸುತ್ತಮುತ್ತ ನಿರಂತರ ಕಾಡಾನೆ ದಾಳಿ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ :
ರಿಪ್ಪನ್‌ಪೇಟೆ: ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆ ರೈತರ ಹೊಲಗದ್ದೆಗಳಿಗೆ ನಿರಂತರ ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಂತಿದೆ. ಅರಸಾಳು ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯತ್ನಿ ವ್ಯಾಪ್ತಿಯ ಕಾನಗೋಡು ತಮ್ಮಡಿಕೊಪ್ಪ ಹಾರಂಬಳ್ಳಿ ಬಾಳೆಕೊಡ್ಲು, ಕಾರೆಹೊಂಡ, ಕಗಚಿ, ತಳಲೆ, ಸುಳಕೋಡು ಗ್ರಾಮದ ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದೆ. ರೈತರು ಬೆಳೆದ ಅಡಿಕೆ, ತೆಂಗು, ಬಾಳೆ, ಕಬ್ಬು ಬೆಳೆಗಳನ್ನು ಮುರಿದು ತಿಂದು ನಷ್ಟಮಾಡುತ್ತಿದೆ. ಈ ಭಾಗದಲ್ಲಿ ಆನೆ ಬೀಡುಬಿಟ್ಟಿರುವ ಮಾಹಿತಿಯಿದ್ದರೂ ಅರಣ್ಯ ಇಲಾಖೆ ಮಾತ್ರ ರಾತ್ರಿ ಗಸ್ತು…
ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರಿಂದ ದಿಡೀರ್ ಪ್ರತಿಭಟನೆ :
ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಯಲದಲ್ಲಿ ಮೂಲಭೂತ ಸೌಕರ್ಯದ ಕೊರತೆಯನ್ನ ವಿರೋಧಿಸಿ ಹಾಗೂ ಮೊನ್ನೆ ವಿದ್ಯಾರ್ಥಿನಿಯರಿಗೆ ಫುಡ್ ಪಾಯಸನ್ ಆಗಿರುವುದಕ್ಕೆ ಇಲ್ಲಿನ ಅವ್ಯವಸ್ಥೆಯೇ ಕಾರಣವೆಂದು ಆಗ್ರಹಿಸಿ ನೂರಾರು ವಿದ್ಯಾರ್ಥಿನಿಯರು ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಪ್ರತಿಭಟಜನೆ ನಡೆಸಿದರು. ಶೌಚಾಲಯ ಸ್ವಚ್ಚವಿಲ್ಲದೇ ಇರುವುದು, ಒಂದು ಕೊಠಡಿಯಲ್ಲಿ 11 ಜನ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ಅವಕಾಶ ನೀಡಿರುವುದು. ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಈ ದಿಡೀರ್‌ಪ್ರತಿಭಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ಪ್ರತಿಭಟನೆಯಲ್ಲಿ ಸಹ್ಯಾದ್ರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಅವ್ಯವಸ್ಥೆಯನ್ನ…
ಶಿವಮೊಗ್ಗದ ಮೊದಲ ಎಫ್.ಎಂ ರೇಡಿಯೋ ಆರಂಭ; ಉತ್ತಮ ಸ್ಪಂದನೆ
ದಶಕದಿಂದ ಮಲೆನಾಡಿಗೊಂದು ಎಫ್.ಎಂ. ರೇಡಿಯೋ ಬೇಕು ಎಂಬ ಬೇಡಿಕೆ ಇತ್ತು. ಜನರ ಬೇಡಿಕೆ ತಣಿಸುವ ಸಲುವಾಗಿ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಕೊಡುಗೆಯಾಗಿ ಸಿಕ್ಕಿದೆ. ಸದ್ಯ ಎಫ್.ಎಂ. ರೇಡಿಯೋ ಟೆಸ್ಟಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ. ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಆರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಬೆಳಗ್ಗೆ 9…
ಮಗನಿಗಾಗಿ ಮತ್ತೆ ಜೊತೆಯಾದ ತಂದೆ-ತಾಯಿ
ವಿಚ್ಚೇದನ ಪಡೆಯಲು ಮುಂದಾಗಿದ್ದ ತಂದೆ ಮತ್ತು ತಾಯಿಯನ್ನು ಅವರ 10ನೇ ತರಗತಿಯ ಮಗ ಒಂದು ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಶಿವಮೊಗ್ಗೆ ಜಿಲ್ಲೆ ಹೊಸನಗರ ತಾಲೂಕಿನ ಕಡೆಗದ್ದೆಯ ನಿವಾಸಿಗಳಾದ ಗಣೇಶಮೂರ್ತಿ ಮತ್ತು ಪೂರ್ಣಿಮಾ ದಂಪತಿ 17 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು.ಸಣ್ಣದಾದ ಮನಸ್ತಾಪದಿಂದಾಗಿ ಮೂರು ವರ್ಷದ ಹಿಂದೆ ತವರು ಸೇರಿದ್ದ ಪೂರ್ಣಿಮಾ ಮರಳಿ ಗಂಡನ ಮನೆಗೆ ಬಂದಿರಲಿಲ್ಲ. ಕಳೆದ ಮೂರು ವರ್ಷಗಳಿಂದ ದೂರ ಇದ್ದ ದಂಪತಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇತ್ತ…
ಅಕಾಲಿಕ ಮರಣಕ್ಕೆ ತುತ್ತಾದ ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು : ಮೃತ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ 5ಲಕ್ಷ ಆರ್ಥಿಕ ನೆರವು
ರಿಪ್ಪನ್ ಪೇಟೆ ಸಮೀಪದ ಹಾರಂಬಳ್ಳಿ ಗ್ರಾಮದ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಭರತ್ ರಾಜ್ (ಬೆಳ್ಳಿ) ಎಂಬ ಬಾಲಕ 21-10-2021 ರಂದು ಹಾರಂಬಳ್ಳಿ ಮನೆಯ ಸಮೀಪ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟಿದ್ದನು. ಇಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರು ಮೃತ ಭರತ್ ರಾಜ್ ರವರ ತಾಯಿ ಶ್ರೀಮತಿ ಲಕ್ಷ್ಮಿ ವಾಸುದೇವ ರವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಮಂಜೂರಾದ 5 ಲಕ್ಷ ರೂ ಗಳ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಿ, ಸಾಂತ್ವನ ಹೇಳಿದರು. ಇಂದು…
ಸಂಘದ ಬಾಕಿ ಹಣ ಕೇಳಲು ಹೋದ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ : ಇಬ್ಬರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲು
ರಿಪ್ಪನ್ ಪೇಟೆ : ಸಂಘದ ಬಾಕಿ ಹಣ ಕೇಳಲು ಹೋದ ಸಂಘದ ಮಹಿಳೆಯರ ಮೇಲೆಯೇ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಕಮದೂರು ಗ್ರಾಮದಲ್ಲಿ ನಡೆದಿದೆ. ಕಮದೂರು ಗ್ರಾಮದ ಭಾಗಿರಥಮ್ಮ ಎಂಬುವವರು ಶ್ರೀ ರೇಣುಕಾಂಬ ಸಂಘ ಆಲುವಳ್ಳಿ ಯ ಸದಸ್ಯೆಯಾಗಿದ್ದು ಸಾಲ ಪಡೆದಿರುತ್ತಾರೆ.ಕಳೆದ ಹಲವಾರು ದಿನಗಳಿಂದ ಸಾಲ ಮರು ಪಾವತಿ ಮಾಡುತ್ತಿಲ್ಲವೆಂದು ಸಂಘದ ಎಲ್ಲಾ ಸದಸ್ಯರು ಅವರ ಮನೆಗೆ ಸಾಲ ವಸೂಲಿಗೆ ಹೋಗಿದ್ದಾರೆ.ಈ ಸಂಧರ್ಭದಲ್ಲಿ ಭಾಗಿರಥಮ್ಮ ರವರ ಮಗ ಸತೀಶ್ ಎಂಬುವವನು ಸಾಲ ವಸೂಲಿಗೆ ಹೋಗಿದ್ದ…
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯಗಳಿಸಿದ ಹಿನ್ನಲೆ ಅನಾಥಶ್ರಮಕ್ಕೆ ಸಿಹಿ ಹಂಚಿ,ದಿನಸಿ ಸಾಮಾಗ್ರಿ ವಿತರಿಸಿ ವಿಜಯೋತ್ಸವ ಆಚರಿಸಿದ ಆಪ್ ಕಾರ್ಯಕರ್ತರು
ರಿಪ್ಪನ್‌ಪೇಟೆ: ಆರ್ಥಿಕ, ಸಾಮಾಜಿಕ, ಧಾರ್ಮಿಕ ಭಷ್ಟಾಚಾರ ನಿರ್ಮೂಲನೆ ಮಾಡುವುದರೊಂದಿಗೆ ಸರ್ವಸಮತೆಯ ರಾಷ್ಟ್ರ ನಿರ್ಮಾಣ ಮಾಡುವುದು ಅಮ್ಆದ್ಮಿ ಪಕ್ಷದ ಉದ್ದೇಶವಾಗಿದೆ ಎಂದು ಎಎಪಿ ಮುಖಂಡ ಹನೀಫ್ ಹೇಳಿದರು. ಸಮೀಪದ ಚಿಕ್ಕಜೇನಿ ಪದ್ಮಶ್ರೀ ಅನಾಥಾಶ್ರಮದಲ್ಲಿ ಶುಕ್ರವಾರ ಪಂಜಾಬ್ ರಾಜ್ಯದಲ್ಲಿ ಆಮ್ಆದ್ಮಿ ಪಕ್ಷ ಅಭೂತಪೂರ್ವ ಜಯಗಳಿಸಿರುವ ಹಿನ್ನೆಲೆಯಲ್ಲಿ ಅನಾಥರಿಗೆ ಸಿಹಿ ಹಾಗೂ ಅಗತ್ಯ ದಿನಸಿ ಸಾಮಾನು ವಿತರಿಸಿ ಮಾತನಾಡಿ ನಮ್ಮ ವಿಜಯೋತ್ಸವ ಅರ್ಥಪೂರ್ಣವಾದದು ಈಗಾಗಲೆ ಪಕ್ಷದ ವರಿಷ್ಠ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ದೆಹಲಿ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣದಲ್ಲಿ ಕ್ರಾಂತಿಕಾರಿಕ…
ಫುಡ್ ಪಾಯ್ಸನ್ ಆಗಿ 25 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ
ಶಿವಮೊಗ್ಗ : ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಹಾಸ್ಟೆಲ್ ನಲ್ಲಿ ಫುಡ್ ಪಾಯ್ಸನ್ ಆಗಿ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ. ನಿನ್ನೆ ಮಧ್ಯಾಹ್ನ 27 ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಸೊಪ್ಪಿನ ಸಾರು- ಅನ್ನ ಊಟ ಮಾಡಿದ್ದ ವಿದ್ಯಾರ್ಥಿನಿಯರು ಸಂಜೆ ಇದ್ದಕ್ಕಿದ್ದಂತೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಎಲ್ಲಾ ವಿದ್ಯಾರ್ಥಿನಿಯರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಹಾಸ್ಟೆಲ್ ಫುಡ್ ಹಾಗೂ ನೀರಿನಲ್ಲಿ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ.
ರಿಪ್ಪನ್ ಪೇಟೆ :ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕರಲ್ಲಿ ಅಭೂತಪೂರ್ವ ಗೆಲುವಿನ ಹಿನ್ನಲೆ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ :
ರಿಪ್ಪನ್ ಪೇಟೆ : ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ವಿನಾಯಕ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ,ವಿಜಯೋತ್ಸವ ಆಚರಿಸಿದರು.ಈ ಸಂಧರ್ಭದಲ್ಲಿ ಪ್ರಧಾನಿ ಮೋದಿ,ಮುಖ್ಯಮಂತ್ರಿ ಬೊಮ್ಮಾಯಿ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾ ನಾಥ್ ,ಯಡಿಯೂರಪ್ಪ ಹಾಗೂ ಶಾಸಕ ಹರತಾಳು ಹಾಲಪ್ಪ ಪರವಾಗಿ ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು. ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಜೊತೆ ಮಾತನಾಡಿದ…
ಕಳಪೆ ಕಾಮಗಾರಿ, ಗ್ರಾಮಸ್ಥರ ಪ್ರತಿಭಟನೆ
ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲೂರು ಸರ್ಕಾರಿ ಕಿರಿಯ ಶಾಲೆಯ ನೆಲ ಹಾಸಿಗೆ ಟೈಲ್ಸ್ ಅಳವಡಿಕೆ ಕಾಮಗಾರಿ ಕಳಪೆ ಗುಣಮಟ್ಟ ಹೊಂದಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡ ಆದರ್ಶಗೌಡ ಕಲ್ಲೂರು ಮಾತನಾಡಿ ಶಾಲೆ ನೆಲಹಾಸು ಕಾಮಗಾರಿಗೆ ಒಂದುವರೆ ಲಕ್ಷ ರೂಪಾಯಿ ಅನುದಾನ ಮಂಜೂರಾಗಿರುವ ಬಗ್ಗೆ ಗುತ್ತಿಗೆದಾರ ತಿಳಿಸಿರುತ್ತಾನೆ. ಆದರೆ ಕಾಮಗಾರಿ ಮಂಜೂರಾತಿ ವಿಷಯ ಶಾಲಾಭಿವೃದ್ಧಿ ಸಮಿತಿಗಾಗಲೀ, ಸ್ಥಳೀಯರೇ ಆದ ಗ್ರಾಮ ಪಂಚಾಯತಿ ಅಧ್ಯಕ್ಷರಿಗಾಗಲೀ ಹಾಗೂ ಗ್ರಾಮಸ್ಥರಿಗಾಗಲೀ ಮಾಹಿತಿ ಇರುವುದಿಲ್ಲ. ಏಕಾಏಕಿ ಬುಧವಾರ…