ಜಿಲ್ಲಾ ಸುದ್ದಿ:
ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರೂ ಕಳೆದುಕೊಂಡ ಮಹಿಳೆ
ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರೂ ಕಳೆದುಕೊಂಡ ಮಹಿಳೆ ಶಿವಮೊಗ್ಗ: ನಗರದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್ ಟೈಮ್ ಜಾಬ್‌ನ ಆಸೆಗೆ ಬಿದ್ದು ಸುಮಾರು 6,78,100 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ನಗರದ ಉದ್ಯಮಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಬಂದಿದ್ದ ಪಾರ್ಟ್ ಟೈಮ್ ಕೆಲಸದ ಆಮಿಷಕ್ಕೆ ಬಲಿಯಾಗಿ ಕೇವಲ 5 ದಿನಗಳ ಅಂತರದಲ್ಲಿ ಬರೋಬ್ಬರಿ ₹6,78,100 ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ದೂರಿನ ಪ್ರಕಾರ, ಅಪರಿಚಿತ ವಂಚಕರು ಎನ್‌ಎಸ್‌ಇ (NSE) ಕಂಪನಿಯ ಉದ್ಯೋಗಿಗಳಂತೆ…
ಗಾಂಧೀಜಿಯ ಆದರ್ಶಗಳೇ ದೇಶದ ಶಕ್ತಿ – ಬಿ ಜಿ ಚಂದ್ರಮೌಳಿ
ಗಾಂಧೀಜಿಯ ಆದರ್ಶಗಳೇ ದೇಶದ ಶಕ್ತಿ – ಬಿ ಜಿ ಚಂದ್ರಮೌಳಿ ಹೊಸನಗರ: ಸತ್ಯ, ಪ್ರಾಮಾಣಿಕತೆ ಹಾಗೂ ಜನಪರ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ತ್ವ–ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಬಿಜಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಹಿಂಸೆಯೇ ಗಾಂಧೀಜಿಯವರ ಮಹಾಸ್ತ್ರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು ಅಕ್ಟೋಬರ್ 2 ಅನ್ನು ರಾಷ್ಟ್ರದಾದ್ಯಂತ…
HUMCHA | ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ – ಸ್ವಚ್ಛತಾ ಕಾರ್ಯಕ್ರಮ
HUMCHA | ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ – ಸ್ವಚ್ಛತಾ ಕಾರ್ಯಕ್ರಮ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ಅಂಗವಾಗಿ ಇಂದು ಸ್ವಗ್ರಾಮ ಹಿತರಕ್ಷಣಾ ವೇದಿಕೆ ವತಿಯಿಂದ ಹುಂಚ ಭಾಗದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಾರ್ಯಕ್ರಮದ ಭಾಗವಾಗಿ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಂಚ ಆಸ್ಪತ್ರೆಯ ಮುಂಭಾಗದ ಬಸ್…
ಲಯನ್ ಸಫಾರಿ ಬಳಿ ಪಿಕಪ್ ಅಪಘಾತ – ಓರ್ವ ಸಾವು , ಮೂವರು ಗಂಭೀರ !!
ಲಯನ್ ಸಫಾರಿ ಬಳಿ ಪಿಕಪ್ ವಾಹನ ಅಪಘಾತ – ಓರ್ವ ಸಾವು , ಮೂವರು ಗಂಭೀರ !!ಜ಼್ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಸಮೀಪದ ಲಯನ್ ಸಫಾರಿ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಆಯನೂರು ಕಡೆಯಿಂದ ಶಿವಮೊಗ್ಗಕ್ಕೆ ತೆರಳುತಿದ್ದ ಪಿಕಪ್ ವಾಹನ ಲಯನ್ ಸಫಾರಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪಿದ್ದು ,…
ಮಹಾನವಮಿ ಪೂಜೆ, ಉತ್ಸವ | ನವಧಾ ಭಕ್ತಿ ಸಮರ್ಪಣೆಯಿಂದ ನವಚೈತನ್ಯ ; ಹೊಂಬುಜ ಶ್ರೀ
ಮಹಾನವಮಿ ಪೂಜೆ, ಉತ್ಸವ | ನವಧಾ ಭಕ್ತಿ ಸಮರ್ಪಣೆಯಿಂದ ನವಚೈತನ್ಯ ; ಹೊಂಬುಜ ಶ್ರೀ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಕ್ತವೃಂದದವರ ಭಾಗವಹಿಸುವಿಕೆಯಿಂದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಒಂಬತ್ತು ದಿವಸಗಳಲ್ಲಿ ಶರನ್ನವರಾತ್ರಿ ಪೂಜೆ, ಉತ್ಸವಗಳು ನೆರವೇರಿದವು. ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ…
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸಂಭ್ರಮದ ಆಯುಧ ಪೂಜೆ
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸಂಭ್ರಮದ ಆಯುಧ ಪೂಜೆ ರಿಪ್ಪನ್‌ಪೇಟೆ : ನಾಡಹಬ್ಬ ದಸರಾ ಹಿಂದಿನ ದಿನವಾದ ಇಂದು ಆಯುಧ ಪೂಜೆಯನ್ನು ಪಟ್ಟಣದ ಗ್ರಾಮ ಪಂಚಾಯತ್ , ನಾಡ ಕಛೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ವಾಹನಗಳು, ಖಾಸಗಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಚಾಮುಂಡೇಶ್ವರಿ ದೇವಿಯ ಫೋಟೋ ಪ್ರತಿಷ್ಠಾಪನೆ ಮಾಡಿ ವಾಹನಗಳಿಗೆ ಪೂಜೆ ಸಲ್ಲಿಸಿ ಬಂದೂಕು ಮತ್ತು ರಿವಾಲ್ವರ್ ಗಳಿಗೆ…
ಆನಂದಪುರದಲ್ಲಿ ದಸರಾ ಕವಿಗೋಷ್ಠಿ – ಕಾವ್ಯವೇ ಮಾನವ ಸಂಬಂಧಗಳ ಸೇತುವೆ
ಆನಂದಪುರದಲ್ಲಿ ದಸರಾ ಕವಿಗೋಷ್ಠಿ – ಕಾವ್ಯವೇ ಮಾನವ ಸಂಬಂಧಗಳ ಸೇತುವೆ ಆನಂದಪುರ: “ಕಾವ್ಯಗಳ ಮೂಲಕವೇ ಮಾನವ ಸಂಬಂಧಗಳನ್ನು ಹೆಚ್ಚಿಸಬಹುದು. ಮಾತುಗಳಲ್ಲಿ ಹೇಳಲಾಗದ ವಿಚಾರಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸಲು ಸಾಧ್ಯ,” ಎಂದು ಹಿರಿಯ ಪತ್ರಕರ್ತ ಜಗನ್ನಾಥ್ ಆರ್. ಅಭಿಪ್ರಾಯಪಟ್ಟರು. ಇಲ್ಲಿನ ರಂಗನಾಥ ದೇವಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಪತ್ರಿಕಾ ಬಳಗ ಮತ್ತು ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಸರಾ ಕವಿಗೋಷ್ಠಿ…
ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ
ರಿಪ್ಪನ್‌ಪೇಟೆಯಲ್ಲಿ ಅಷ್ಟಲಕ್ಷ್ಮಿ ಹವನ – ನವರಾತ್ರಿ ಧಾರ್ಮಿಕ ವೈಭವ ರಿಪ್ಪನ್‌ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಪ್ರಯುಕ್ತ ಅಷ್ಟಲಕ್ಷ್ಮಿ ಹವನವನ್ನು ಆಯೋಜಿಸಲಾಯಿತು. ಜಿ.ಎಸ್.ಬಿ ಸಮಾಜದ ಅನೇಕ ಬಂಧುಗಳು ಭಾಗವಹಿಸಿ ಭಕ್ತಿಪೂರ್ಣವಾಗಿ ಕಾರ್ಯಕ್ರಮವನ್ನು ನೆರವೇರಿಸಿದರು. ನವರಾತ್ರಿಯ ಸಂದರ್ಭದಲ್ಲಿ ‘ಅಖಂಡ ದೀಪಪ್ರಜ್ವಲನೆ’ ಅಂದರೆ ಒಂಭತ್ತು ದಿನಗಳ ಕಾಲ ನಿರಂತರವಾಗಿ ದೀಪವನ್ನು ಬೆಳಗಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನ ಪಾರಾಯಣ, ಲಲಿತಾಪೂಜೆ, ಸರಸ್ವತಿಪೂಜೆ,…
ಟೋಲ್‌ಗೇಟ್ ವಿವಾದ : ಅ.9 ಕ್ಕೆ ಶಿಕಾರಿಪುರ ಬಂದ್ ಗೆ ಕರೆ
ಟೋಲ್‌ಗೇಟ್ ವಿವಾದ : ಅ.9 ರಂದು ರಂದು ಶಿಕಾರಿಪುರ ಬಂದ್ ಗೆ ಕರೆ ಶಿಕಾರಿಪುರ, ಸೆಪ್ಟೆಂಬರ್ ೨೮ : ಕುಟ್ರಳ್ಳಿ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ ೯ರಂದು ಶಿಕಾರಿಪುರ ಪಟ್ಟಣ ಬಂದ್ ನಡೆಸಲು ಟೋಲ್‌ಗೇಟ್ ಹೋರಾಟ ಸಮಿತಿ ಕರೆ ನೀಡಿದೆ ಎಂದು ಸಮಿತಿ ಮುಖಂಡ, ನ್ಯಾಯವಾದಿ ಶಿವರಾಜ್ ತಿಳಿಸಿದ್ದಾರೆ. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದು ವರ್ಷದಿಂದ ಟೋಲ್‌ಗೇಟ್ ತೆರವಿಗೆ ಹೋರಾಟ ನಡೆಸುತ್ತಿದ್ದೇವೆ. ಸಚಿವರು, ಸಂಸದರು, ಶಾಸಕರು ಎಲ್ಲರೂ ಬೆಂಬಲ ವ್ಯಕ್ತಪಡಿಸಿದರೂ, ಕಾಣದ ಶಕ್ತಿಯ ಕಾರಣದಿಂದ…
ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!?
ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!? ಶಿವಮೊಗ್ಗ : ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ವೇತಾ ಬಂಡಿ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ ತುಂಬಿದೆ ಎಂದು ಬಣ್ಣಿಸಿದರು. ಬಂಜಾರ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ…