ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ : ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ|Lake
“ಚಿಕ್ಕಬೀರನ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ’’ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ಮುಖ್ಯ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಚಿಕ್ಕಬೀರನ ಕೆರೆಯು ಹೂಳೆತ್ತುವ ಕಾಮಗಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್ ಚಾಲನೆ ನೀಡಿದರು. ಚಿಕ್ಕಬೀರನ ಕೆರೆಯ ಅಭಿವೃದ್ದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ 12 ಲಕ್ಷ ರೂ ವಿಶೇಷ ಅನುದಾನ ನೀಡಿದ್ದು ಈ ಹಿನ್ನಲೆಯಲ್ಲಿ ಇಂದು ` ನಮ್ಮೂರು ನಮ್ಮ ಕೆರೆ’’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದಾಗಿ ಒಣಗಿ ಹೋದ ಕೆರೆಗಳ ಸಂರಕ್ಷಣೆಯೊಂದಿಗೆ…
ರಿಪ್ಪನ್‌ಪೇಟೆ : ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಅಗ್ನಿ ಅವಘಡ – ತಪ್ಪಿದ ಭಾರಿ ಅನಾಹುತ|Fire
ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬೆಂಕಿ ಹತ್ತಿದ ಮಾಹಿತಿ ಸಿಕ್ಕ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂಧಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರಿಂದಾಗಿ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದೆಡೆಗೆ ಅಗ್ನಿ ಅವಘಡ ಸಂಭವಿಸಿದ ಸ್ಥಳದ ಕೂದಲೆಳೆ ಅಂತರದಲ್ಲಿ ಮರದ ಸಾಮಿಲ್ ಹಾಗೂ ಪೆಟ್ರೋಲ್ ಬಂಕ್ ಇತ್ತು ಸ್ಥಳೀಯರ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರಿ ದೊಡ…
ಹೆದ್ದಾರಿಪುರ ಗ್ರಾಪಂ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು|GP
ರಿಪ್ಪನ್‌ಪೇಟೆ : ಸದಸ್ಯರೊಬ್ಬರ ನಿಧನದ ಹಿನ್ನಲೆಯಲ್ಲಿ ಹೆದ್ದಾರಿಪುರ ಗ್ರಾಪಂನ ತಳಲೆ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೇಯಸ್ ಗೆಲುವು ಸಾಧಿಸಿದ್ದಾರೆ. ಶ್ರೇಯಸ್ ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸುರೇಶ್ ಬೇಕರಿ ಅವರಿಂದ 87 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಒಟ್ಟು 594 ಮತದಾನವಾಗಿತ್ತು. ಈ ಪೈಕಿ ಶ್ರೇಯಸ್ ಅವರು 279 ಮತಗಳನ್ಮು ಪಡೆದುಕೊಂಡಿದ್ದಾರೆ. ಸುರೇಶ್ ಬೇಕರಿ ಅವರು 192 ಮತಗಳನ್ನು ಪಡೆದುಕೊಂಡಿದ್ದಾರೆ.ಕಾಂಗ್ರೆಸ್ ಬೆಂಬಲಿತ ಮಂಜಣ್ಣ 120 ಮತಗಳನ್ನು ಪಡೆದಿದ್ದಾರೆ. 3 ಮತಗಳು…
ಹೊಸನಗರ ತಾಲೂಕಿಗೆ ನೂತನ ತಹಶೀಲ್ದಾರ್ ನೇಮಕ – ಯಾರು ಗೊತ್ತಾ..??? ಈ ಸುದ್ದಿ ನೋಡಿ|tranfer
ಹೊಸನಗರ ತಾಲೂಕಿನ ನೂತನ ತಹಶೀಲ್ದಾರರಾಗಿ ಕೆ ಪುರಂದರ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕೆ ಪುರಂದರ ಅವರು ಪ್ರಸ್ತುತ ಉಡುಪಿ ಜಿಲ್ಲೆಯ ಹೆಬ್ರಿ ತಾಲುಕಿನ ತಹಶೀಲ್ದಾರ್(ಗೇಡ್ 1) ಆಗಿ ಕಾರ್ಯ ನಿರ್ವಹಿಸುತಿದ್ದು ಅವರನ್ನು ಹೊಸನಗರ ತಾಲೂಕ್ ವಿ ರಾಜೀವ್ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ನಿಯುಕ್ತಿಗೊಳಿಸಲಾಗಿದೆ. ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ಹಿನ್ನಲೆಯಲ್ಲಿ ಕೆ ಪುರಂದರ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾಗಿ…
ಬಿಎಸ್ವೈ ಜನ್ಮದಿನದಂದೇ ಡೈರಿ ಬಾಂಬ್ ಸಿಡಿಸಿದ್ರಾ ಪುತ್ರಿ ಅರುಣಾದೇವಿ – ಖುರ್ಚಿ ಅಲ್ಲಾಡಿಸಲು ಎಂತೆಂತಹ ಕೃತ್ಯಗಳು ನಡೆಸಿದ್ದಾರೆನ್ನುವುದನ್ನು ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ..!!!|BSY
ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು, ಜೈಲಿನಲ್ಲಿದ್ದಾಗ ಡೈರಿ ಬರೆದಿದ್ದಾರೆ: ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪನವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಈಗಾಗಲೇ ಶಿವಮೊಗ್ಗದಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪನವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಬರ್ತ್ಡೇ ದಿನವೇ ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಗಿಫ್ಟ್ ನೀಡಲಿದ್ದಾರೆ. ಅಲ್ಲದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆನ್ನುವುದು ಯಡಿಯೂರಪ್ಪನವರ ಕನಸು ಸಹ ಆಗಿತ್ತು. ಇದೀಗ…
ಶಿವಮೊಗ್ಗ ವಿಮಾನ ನಿಲ್ದಾಣ ಮಲೆನಾಡಿನ ಅಭಿವೃದ್ಧಿಯ ಸಂಕೇತ – ಬಿಎಸ್ ವೈ ಭಾವುಕ ನುಡಿ|BSY
ಇದೊಂದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಅಭಿವೃದ್ಧಿ ಮತ್ತಷ್ಟು ವೇಗ ಪಡೆದು ಆಗಸದೆತ್ತರಕ್ಕೆ ಏರುವ ಶುಭ ಸೂಚನೆ. ಶಿವಮೊಗ್ಗದ ಜನ ಹಾಗೂ ಶಿಕಾರಿಪುರದ ಜನರು ನನ್ನನ್ನು ಶಾಸಕನನ್ನಾಗಿ ಮಾಡಿ ನಾಡಿನ ಜನರ ಸೇವೆಗೆ ಅವಕಾಶ ನೀಡಿಕೊಟ್ಟಿದ್ದಾರೆ. ಮೋದಿಯವರ ಆಶೀರ್ವಾದದಿಂದ ಸಂಸತ್ ಸದಸ್ಯ, ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಯಾಗಿ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಾವುಕರಾಗಿ ನುಡಿದರು. ಶಿವಮೊಗ್ಗ ಬಳಿಯ ಸೋಗಾನೆಯಲ್ಲಿ ನಿರ್ಮಾಣವಾಗಿರುವ…
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ – ಬಿಎಸ್ ವೈ ಗೆ ಹಸಿರು ಶಾಲು ಹೊದಿಸಿ ವಿಶೇಷ ಸನ್ಮಾನ ಮಾಡಿದ ಮೋದಿ|modi
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ರವರು ಸೋಗಾನೆಯ ನೂತನ ವಿಮಾನ ನಿಲ್ದಾಣದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದ್ದಾರೆ. 7,165 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು. 995 ಕೋಟಿ ವೆಚ್ಚದ 96 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಶಂಕುಸ್ಥಾಪನೆ , 105 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, 953 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. 66.44 ಕೋಟಿ ವೆಚ್ಚದ ಬೈಂದೂರು-ರಾಣೆಬೆನ್ನೂರು…
ಪ್ರಧಾನಿ ಮೋದಿಗೆ ಮನವಿ ನೀಡಲು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿರುವ ವಿಎಸ್ ಐಎಲ್ ಹೋರಾಟಗಾರರು|vsil
ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆ ಕಾರ್ಖಾನೆ ಉಳಿಸುವಂತೆ ಮನವಿ ನೀಡಲೇಬೇಕು ಎಂದು ನಿರ್ಧರಿಸಿದ್ದ ಸಾವಿರಾರು ವಿಐಎಸ್ ಎಲ್ ಗುತ್ತಿಗೆ ನೌಕರರ ಕಾರ್ಯಕರ್ತರನ್ನು ಬಿಳಕಿ ಕ್ರಾಸ್ ಬಳಿ ಪೊಲೀಸರು ತಡೆದಿದ್ದಾರೆ. ಪೊಲೀಸರು ತಡೆದರೂ ಗದ್ದೆಯಲ್ಲಿ ಎದ್ದು ಬಿದ್ದು ಓಡಿ ಶಿವಮೊಗ್ಗ ವಿಮಾನ ನಿಲ್ದಾಣದ ಕಡೆ ಹೋರಾಟಗಾರರು ತೆರಳುತಿದ್ದಾರೆ. ಇಂದು ಬೆಳಗ್ಗಿನ ಜಾವವೇ ಸಂಘದ 40 ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಇಂದು ಬೆಳಿಗ್ಗೆ ಭದ್ರಾವತಿ ಶಾಸಕ…
ಕೆಲವೇ ಕ್ಷಣಗಳಲ್ಲಿ ಪ್ರಧಾನಿಯಿಂದ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆ – ವಿಶೇಷತೆ ಏನು ಗೊತ್ತಾ..???|airport
ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 11.30ಕ್ಕೆ ನರೇಂದ್ರ ಮೋದಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇದಕ್ಕಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಬಳಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಒಂದೂವರೆಲಕ್ಷದಷ್ಟು ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ….
ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಹರತಾಳು ಹಾಲಪ್ಪ|mescom
ರಿಪ್ಪನ್‌ಪೇಟೆ : ಇತ್ತೀಚೆಗೆ ಹರತಾಳು ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನವನ್ನು ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ವಿತರಿಸಿದರು. ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಶೇಷಗಿರಿ ಬಿನ್ ಬಸವನಾಯ್ಕ ರವರು ಮೃತಪಟ್ಟಿದ್ದು, ಮೃತರ ವಾರಸುದಾರರಾದ ಸುಧಾರಾಣಿ ಶೇಷಗಿರಿಯವರಿಗೆ ಸಾಗರದಲ್ಲಿ 5 ಲಕ್ಷ ರೂ ಗಳ ಪರಿಹಾರ ಧನದ ಆದೇಶ ಪ್ರತಿ ಹಸ್ತಾಂತರಿಸಿ, ಸಾಂತ್ವನ ಹೇಳಿದರು. ಈ ಸಂಧರ್ಭದಲ್ಲಿ ಮೆಸ್ಕಾಂ AEE ಚಂದ್ರಶೇಖರ್, ಮೃತರ ಕುಟುಂಬಸ್ಥರು, ಪಕ್ಷದ ಮುಖಂಡರು…