ಜಿಲ್ಲಾ ಸುದ್ದಿ:
ಭ್ರಷ್ಟಾಚಾರ ನಡೆಸಿ ಜಾಮೀನಿನ ಮೇಲಿರುವ ನಾಯಕರು ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ – ಆರಗ ಜ್ಞಾನೇಂದ್ರ|araga
ಭ್ರಷ್ಟಾಚಾರ ನಡೆಸಿ ಜಾಮೀನಿನ ಮೇಲಿರುವ ನಾಯಕರು ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ – ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಯಾರು ಭ್ರಷ್ಟಾಚಾರದ ತಾಯಿಯೋ ಅವರೇ ಕರ್ನಾಟಕ ಬಂದ್ ಗೆ ಕರೆ ನೀಡುತ್ತಿದ್ದಾರೆ. ಅವರ ಕೇಂದ್ರ ನಾಯಕರು, ರಾಜ್ಯದ ನಾಯಕರು ಬಹಳಷ್ಟು ದಿನ ಜೈಲಿನಲ್ಲಿದ್ದು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ ಅಂಥವರು ಈಗ ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದರು. ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ…
ಶರಾವತಿ ಸಂತ್ರಸ್ಥರು ಒಂದು ಇಂಚು ಜಾಗ ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಶಪಥ ಮಾಡಿ ಹೇಳುತ್ತೇನೆ – ಹರತಾಳು ಹಾಲಪ್ಪ|hinneera habba
ಅದ್ದೂರಿಯಾಗಿ ಜರುಗಿದ ಶರಾವತಿ ಹಿನ್ನೀರ ಮೇಳ – ಶರಾವತಿ ಆರತಿ ಶರಾವತಿ ಸಂತ್ರಸ್ತರು ಒಂದು ಇಂಚು ಜಾಗವೂ ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಶಪಥ ಮಾಡಿ ಹೇಳುತ್ತೇನೆ ಸರ್ಕಾರ ರೈತರ ಪರವಾಗಿದೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು. ಹೊಸನಗರ ತಾಲ್ಲೂಕಿನ ಪಟಗುಪ್ಪ ಸೇತುವೆ ಬಳಿ ನಡೆದ ಶರಾವತಿ ಹಿನ್ನೀರ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ರೈತರು ಸರ್ಕಾರದ ಮೇಲೆ ನಂಬಿಕೆ ಇಡಬೇಕು. ಯಾವುದೇ ಕಾರಣಕ್ಕೂ ರೈತರಲ್ಲಿ ಆತಂಕ ಬೇಡ. ರೈತರನ್ನು ಒಕ್ಕಲೇಬ್ಬಿಸಲು ಬಿಡಲ್ಲ. ಸದ್ಯದಲ್ಲೆ ಶುಭಸುದ್ದಿ ನೀಡಲಿದ್ದೇವೆ. ರೈತರ…
ಯುವಕರು ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಜೀವನ ಚರಿತ್ರೆ ಅರಿಯುವುದು ಅಗತ್ಯ – ಆದರ್ಶ ಗೋಖಲೆ|shivaji jayantji
ಯುವಕರು ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಜೀವನ ಚರಿತ್ರೆ ಅರಿಯುವುದು ಅಗತ್ಯ – ಆದರ್ಶ ಗೋಖಲೆ ರಿಪ್ಪನ್‌ಪೇಟೆ : ಅಪ್ರತಿಮ ಹೋರಾಟ, ವಿಭಿನ್ನ ಯುದ್ಧಕಲೆ, ಸಂಘಟನಾ ಚತುರತೆ, ಆದರ್ಶ ದೇಶ ಪ್ರೇಮದ ಮೂಲಕ ಇಂದಿಗೂ ನಮ್ಮೆಲ್ಲರಿಗೆ ಆದರ್ಶಪ್ರಾಯ ಆಗಿರುವ ಶಿವಾಜಿ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಅರಿಯುವುದು ಅಗತ್ಯ ಎಂದು ಯುವ ಚಿಂತಕ, ಪ್ರಖರ ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಪಟ್ಟಣದಲ್ಲಿ ಮರಾಠ ಸಮಾಜ ಭಾನುವಾರ ಆಯೋಜಿಸಿದ್ದ ಶಿವಾಜಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿ ಜೀಜಾಬಾಯಿ ಶಿವಾಜಿಗೆ…
ಪತ್ರಕರ್ತರಿಗೆ ಕಿರುಕುಳ – ದಾವಣಗೆರೆ ಎಸ್ ಪಿ ರಿಷ್ಯಂತ್ ಮೇಲೆ ಕ್ರಮ ಕೈಗೊಳ್ಳುವಂತೆ ರಿಪ್ಪನ್‌ಪೇಟೆ ಪತ್ರಕರ್ತರಿಂದ ಒತ್ತಾಯ|Rpet
ರಿಪ್ಪನ್‌ಪೇಟೆ : ಫೆಬ್ರವರಿ 27 ರಂದು ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಹಿರಿಯ ಪತ್ರಕರ್ತ ಆರ್.ಎಸ್. ಹಾಲಸ್ವಾಮಿ (ಟಿವಿ ಭಾರತ್) ಅವರನ್ನು ಅಕ್ರಮವಾಗಿ ಪೊಲೀಸ್ ವಾಹನದಲ್ಲಿ ಕೂಡಿಟ್ಟು ಉದ್ದಟತನದಿಂದ ವರ್ತಿಸಿದ ದಾವಣೆಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಅಮಾನತ್ತಿನಲ್ಲಿಡುವಂತೆ ಒತ್ತಾಯಿಸಿ ಶನಿವಾರ ಪಟ್ಟಣದ ಪತ್ರಕರ್ತ ಸಂಘಟನೆಗಳಿಂದ ಗೃಹ ಸಚಿವರಿಗೆ ರಾಜಸ್ವ ನಿರೀಕ್ಷಕರಾದ ಅಫ಼್ರೋಜ್ ರವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ…
ವಿಧಾನಸಭಾ ಚುನಾವಣೆಗೆ ಈ ಬಾರಿ ನನ್ನ ಸ್ಪರ್ಧೆ ಇಲ್ಲ – ಕಾಗೋಡು ತಿಮ್ಮಪ್ಪ|congress
ಈ ಬಾರಿ ನನ್ನ ಸ್ಪರ್ಧೆ ಇಲ್ಲ – ಕಾಗೋಡು ತಿಮ್ಮಪ್ಪ ರಿಪ್ಪನ್‌ಪೇಟೆ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲಾ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಈ ಬಾರಿ ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಳೆದ ಕೆಲವು ದಿನಗಳಿಂದ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಪುನಃ ಕಾಗೋಡು ತಿಮ್ಮಪ್ಪ ಸ್ಪರ್ಧೆ ಮಾಡುತ್ತಾರೆ…
ಚುನಾಯಿತ ಪ್ರತಿನಿಧಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು – ಹರತಾಳು ಹಾಲಪ್ಪ|Inauguration
ಚುನಾಯಿತ ಪ್ರತಿನಿಧಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು – ಹರತಾಳು ಹಾಲಪ್ಪ ರಿಪ್ಪನ್‌ಪೇಟೆ : ಶಾಸಕರಾದವರಿಗೆ ಗ್ರಾಮೀಣ ಜನರ ಸಮಸ್ಯೆಯ ಅರಿವಿರಬೇಕು ಜೊತೆಯಲ್ಲಿ ಅಭಿವೃದ್ದಿಗಾಗಿ ಸರ್ಕಾರದ ಅನುದಾನವನ್ನು ತರುವ ಎದೆಗಾರಿಕೆ ಇರಬೇಕು ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ರಿಪ್ಪನ್‌ಪೇಟೆಯ ವ್ಯಾಪ್ತಿಯಲ್ಲಿ ಬರುವ ಸಾಗರ ತೀರ್ಥಹಳ್ಳಿ ಮಾರ್ಗದ ಅಂದಾಸುರ ಬಳಿಯಲ್ಲಿನ ಶಿಥಿಲಗೊಂಡ ಸಂಪರ್ಕ ಸೇತುವೆಗೆ 2.40 ಕೋಟಿ ವೆಚ್ಚದ ಸಂಪರ್ಕ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ…
ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಬಿ ಜಿ ನಾಗರಾಜ್|congress
ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಕಾಂಗ್ರೆಸ್ ಪಟಗುಪ್ಪೆಯಲ್ಲಿ ಶರಾವತಿ ಹಿನ್ನೀರು ಹಬ್ಬ ಆಚರಣೆಗೆ ಕಾಂಗ್ರೆಸ್ ಪಕ್ಷದ ವಿರೋಧ ಹೊಸನಗರ : ಶಾಸಕ ಎಚ್. ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಮಾ.೪ರಂದು ತಾಲೂಕಿನ ಪಟಗುಪ್ಪೆಯಲ್ಲಿ ಏರ್ಪಡಿಸಿರುವ ಶರಾವತಿ ಹಿನ್ನೀರು ಹಬ್ಬ ಎನ್ನುವ ಕರ‍್ಯಕ್ರಮದ ಆಯೋಜನೆಯು ಆಯೋಜಕರ ವಿಕೃತ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಆರೋಪಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶರಾವತಿ ಮುಳುಗಡೆ ಎನ್ನುವುದು ಈ…
ರಿಪ್ಪನ್‌ಪೇಟೆಯಲ್ಲಿ ಶಿವಾಜಿ ಜಯಂತಿ ಅಂಗವಾಗಿ ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ|shivaji jayanthi
ರಿಪ್ಪನ್‌ಪೇಟೆಯಲ್ಲಿ ಮರಾಠ ಸಮಾಜದವರಿಂದ ಅದ್ದೂರಿ ಬೈಕ್ ರ‍್ಯಾಲಿ ರಿಪ್ಪನ್‌ಪೇಟೆ;- ಛತ್ರಪತಿ ಶಿವಾಜಿ 393 ನೇ ಜಯಂತೋತ್ಸವ ಅಂಗವಾಗಿ ರಿಪ್ಪನ್‌ಪೇಟೆ ಮರಾಠ ಸಮಾಜದವರು ಸಾಗರ ರಸ್ತೆಯಲ್ಲಿನ ಮರಾಠ ಸಮಾಜದ ಭವನದಿಂದ ಬೈಕ್ ರ‍್ಯಾಲಿ ನಡೆಸಿದರು. ಶಿವಮೊಗ್ಗ ರಸ್ತೆಯಿಂದ ವಿನಾಯಕ ವೃತ್ತ – ತೀರ್ಥಹಳ್ಳಿ ರಸ್ತೆ- ಹೊಸನಗರ ರಸ್ತೆ ರಸ್ತೆಯ ಮೂಲಕ ಸಾಗರ ರಸ್ತೆಯಲ್ಲಿನ ಮರಾಠ ಸಮಾಜದವರೆಗೆ ಬೈಕ್ ರ‍್ಯಾಲಿ ನಡೆಸಿದರು. ಬೈಕ್ ರ‍್ಯಾಲಿಯಲ್ಲಿ ಛತ್ರಪತಿ ವೀರ ಶಿವಾಜಿಯ ಪರವಾದ ಘೋಷಣೆ ಕೂಗುತ್ತಾ ಭಗವಾಧ್ವಜವನ್ನು ಹಿಡಿದು ನೂರಾರು ಬೈಕ್‌ಗಳೊಂದಿಗೆ ರ‍್ಯಾಲಿ ನಡೆಸಿ…
ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ ಮೆಚ್ಚುಗೆಗೆ ಬಿಜೆಪಿ ಪಾತ್ರವಾಗುತ್ತಿದೆ – ಗೃಹ ಸಚಿವ ಆರಗ ಜ್ಞಾನೇಂದ್ರ|BJP
ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ ಮೆಚ್ಚುಗೆಗೆ ಬಿಜೆಪಿ ಪಾತ್ರ ಆಗುತ್ತಿದೆ – ಗೃಹಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಅತ್ಯಂತ ಸಂತೋಷದಾಯಕವಾದ ದಿನ, ನಮ್ಮ ಇಶಾನ್ಯ ರಾಜ್ಯಗಳಲ್ಲಿ ಮೂರು ರಾಜ್ಯದಲ್ಲಿ ಚುನಾವಣೆ ನೆಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದೆ. ಮೂರರಲ್ಲಿ ಎರಡು ಸ್ಪಷ್ಟ ಬಹುಮತವನ್ನು ಪಡೆದು ತನ್ನ ರಾಜ್ಯಭಾರ ಮಾಡಲು ಸಜ್ಜಾಗಿದೆ. ಇನ್ನೊಂದು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಗುರುವಾರ ಕೊಪ್ಪ ಸರ್ಕಲ್ ನಲ್ಲಿ ಕಾರ್ಯಕರ್ತರ ಜೊತೆ ಸಂಭ್ರಮ…
ನಾಳೆ (03-03-2023) ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಛತ್ರಪತಿ ಶಿವಾಜಿ ಜಯಂತ್ಯೋತ್ಸವ
ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿರುವ ಮರಾಠಾ ಸಮಾಜದ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮರಾಠ ಸಂಘ ಹಾಗೂ ಕ್ಷತ್ರಿಯ ಮರಾಠ ಯುವ ವೇದಿಕೆ ವತಿಯಿಂದ ನಾಳೆ 03/03/2023 ರಂದು ಸಂಜೆ 4.30 ಗಂಟೆಗೆ ಅದ್ದೂರಿಯಾಗಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ , ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ,ಮಾಜಿ…