ಜಿಲ್ಲಾ ಸುದ್ದಿ:
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್|BSY
ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಲು ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾನಿಲಯ ತೀರ್ಮಾನಿಸಲಾಗಿದೆ. ಜುಲೈ 21 ರಂದು ( ನಾಳೆ ) ನೆಡೆಯುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ – ಕಿಮ್ಮನೆ ರತ್ನಾಕರ್|Press Day
ಹೊಸನಗರ,ಜು.೧೯: ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕವು ಇಲ್ಲಿನ ಈಡಿಗರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಮಾದಕ ವ್ಯಸನ ಜಾಗೃತ ಅಭಿಯಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ರಂಜನೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು. ಪತ್ರಿಕೆ ಒಮ್ಮೆ ಮುದ್ರಣಗೊಂಡು ಹೊರಬಿದ್ದರೆ ಅದು ಸಾರ್ವಜನಿಕ ಸ್ವತ್ತಾಗುತ್ತದೆ…
ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಪದವಿ ಶಿಕ್ಷಣ ಇಲಾಖೆ – ಪ್ರಾಂಶುಪಾಲರ ಪದಚ್ಯುತಿ!!|kodachadri
ಹೊಸನಗರದ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು. ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಅಂಜನ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಈಚೆಗೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ನಿರ್ದೇಶಕರು ಕಾಲೇಜಿಗೆ ಆಗಮಿಸಿದ ವೇಳೆ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ ನಡೆಯಿತು.ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ದ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಟಿಸಿ…
ನಾಳೆ(19-07-2023) ಹೊಸನಗರದಲ್ಲಿ ಪತ್ರಿಕಾ ದಿನಾಚರಣೆ ; ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ
ಹೊಸನಗರ ಪಟ್ಟಣದ ಆರ್ಯ ಈಡಿಗರ ಸಭಾಭವನದಲ್ಲಿ ಜುಲೈ 19 ರಂದು ಬೆಳಿಗ್ಗೆ 11ಗಂಟೆಯಿಂದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ಶಾಖೆಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಕೆ ವೆಂಕಟೇಶ್‌ಮೂರ್ತಿಯವರು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಉದ್ಘಾಟಿಸಲಿದ್ದು, ಸಮಕಾಲಿನ ಪತ್ರಿಕಾ ಮಾಧ್ಯಮದ ಜವಾಬ್ದಾರಿಗಳು ಎಂಬ ವಿಷಯವಾಗಿ…
ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ|TRK
ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಜನಪರ ಹೋರಾಟಗಾರನೊಬ್ಬ ಅರೆ ಬೆತ್ತಲೆಯಾಗಿ ಉದ್ಘಾಟನೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದವರು ಅನುಷ್ಟಾನಗೊಳಿಸಿದ 6 ಲಕ್ಷ…
ಆನಂದಪುರದ ಬಳಿ ಮಧ್ಯ ರಸ್ತೆಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್ |Fire
ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ ಸುಟ್ಟು ಹೋಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿಕೊಂಡಿದೆ. ಕಳೆದ ಎರಡು ದಿನಗಳಿಂದ ಸಾಗರದ ಗಜಾನನ ಸಾರಿಗೆ ಬಸ್ ಆನಂದಪುರದ ರೈಲ್ವೆ ಗೇಟ್ ಹತ್ತಿರ ಕೆಟ್ಟು ನಿಂತಿತ್ತು.ಸೋಮವಾರ ಬೆಳಗಿನ ಜಾವ…
ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಹೃದಯ ಸಂಬಂಧಿ ಮಗು ರವಾನೆ!!!|zero traffic
ಶಿವಮೊಗ್ಗ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೂರು ದಿನದ ಹಸುಗೂಸು ಮಗುವನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಗಿದೆ. ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮೂರು ದಿನದ ಮಗುವಿಗೆ ತೆರೆದ ಹೃದಯದ ಆಪರೇಶನ್ ಮಾಡುವ ಅವಶ್ಯಕತೆ ಇದ್ದ ಕಾರಣ ಬೆಂಗಳೂರಿನ ಎನ್ ಎಚ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಶಿವಮೊಗ್ಗದ ಗಾಂಧಿ ಬಜಾರ್ ನ ನಿಲೇಶ್ ಜೈನ್ ಮತ್ತು ಮೋನಿಕಾ ದಂಪತಿಗಳ ಮಗುವಿಗೆ…
ಆಗುಂಬೆ ಘಾಟಿಯಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ – ಜೀವದ ಹಂಗು ತೊರೆದು ರಕ್ಷಿಸಿದ ಯುವಕರು|agumbe
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲಿಕನೊಬ್ಬ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆ ನೆಡೆದಿದೆ. ಮಹಮ್ಮದ್ ಪಾಷಾ ಎಂಬಾತ ರಸ್ತೆ ಬದಿಯಲ್ಲಿದ್ದ ನಿಂತಿದ್ದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಕ್ರಾಪ್ ಗಾಡಿಯನ್ನು ಟ್ರ್ಯಾಕ್ಟರ್ ಟೋಯಿಂಗ್ ಮಾಡ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ. ಆಗುಂಬೆ ಘಾಟ್ ನಿಂದ 25 ರಿಂದ 30…
ಖಾಕಿಯೊಳಗಿನ ಮಾನವೀಯತೆ – ಇದು ರಿಪ್ಪನ್‌ಪೇಟೆ ಪೊಲೀಸ್ ಸ್ಟೋರಿ |ಮಗಳ ಆರೈಕೆಗೆ ಲಕ್ಷ ಲಕ್ಷ ಸುರಿದು ಸಾಲದ ಸುಳಿಗೆ ಸಿಲುಕಿದ ವೃದ್ಧ ಆಟೋ ಚಾಲಕ|help desk
ರಿಪ್ಪನ್‌ಪೇಟೆ : 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಗಳ ಆರೈಕೆಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿರುವ ಗವಟೂರಿನ ಬಡ ಕುಟುಂಬದ ನೋವಿಗೆ ಪಟ್ಟಣದ ಖಾಕಿಗಳು ಹೆಗಲು ಕೊಟ್ಟಿದ್ದಾರೆ. ಪಟ್ಟಣದ ಗವಟೂರು ನಿವಾಸಿ ಆಟೋ ದೇವಪ್ಪಗೌಡ ರವರು 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದು,ಚಿಕಿತ್ಸೆ ನೀಡಿದರೆ ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ಖರ್ಚು ಮಾಡಿದ ಬಡಕುಟುಂಬ ಇಂದು ಸಾಲದ ಸುಳಿಗೆ ಸಿಲುಕಿತ್ತು.ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು. ಈ ಬಗ್ಗೆ…
ರಿಪ್ಪನ್‌ಪೇಟೆ : ಜು.22ರಂದು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ರಿಪ್ಪನ್‌ಪೇಟೆ : ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಿಪ್ಪನ್‌ಪೇಟೆ;-ಇಲ್ಲಿನ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಮಹಿಳೆಯರು ಅಧ್ಯಕ್ಷ ಕಾರ್ಯದರ್ಶಿಯಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪುರಷರಿಗಿಂತ ನಾವುಗಳು ಏನು ಕಮ್ಮಿ ಎಂಬಂತೆ ಹಿಡಿದ ಸಮಾಜಮುಖಿ ಕಾರ್ಯದೊಂದಿಗೆ ರೋಟರಿಯ ದೇಯವಾಕ್ಯದಂತೆ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೋಟರಿ ಕ್ಲಬ್ ಅಧ್ಯಕ್ಷೆ ಪ್ರಮೀಳ ಎಲ್.ಗೌಡ ಮತ್ತು ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ರೋಟರಿ ಅತ್ಯುತ್ತಮ ಕಾರ್ಯದಲ್ಲಿ ಸಾರ್ವಜನಿಕರ ಪ್ರಶಂಸೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷö್ಮಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಯ…