ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ : ಅಶ್ಲೀಲ ವೀಡಿಯೋ ವೈರಲ್ ಪ್ರಕರಣ – ಆರೋಪಿಯ ವಿರುದ್ದ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ|protest
ರಿಪ್ಪನ್‌ಪೇಟೆ : 16-06-2023 ರಂದು ವಾಟ್ಸಪ್ ಗ್ರೂಫ್‌ಗಳಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ನಗ್ನ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ABVP ವಿದ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆತನ ವಿರುದ್ಧ ಕಾನೂನು ಕಠಿಣ ಕ್ರಮ ಜರುಗಿಸುವಂತೆ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಗೆ ಸದಸ್ಯತ್ವ ಆಮಿಷ ತೋರಿಸಿ, ವೀಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ…
ಹೊಂಬುಜ ಸ್ವಸ್ತಿಶ್ರೀಗಳವರ ವಿದೇಶ ವಿಹಾರ|hombuja
ಹೊಂಬುಜ : ಅಮೇರಿಕಾದ ಕೆನಡಾದ ಟೊರಂಟೋ ನಗರದ ಜಿನಮಂದಿರದಲ್ಲಿ 24 ತೀರ್ಥಂಕರರ ಭವ್ಯ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ನೇತೃತ್ವ, ದಿವ್ಯ ಮಾರ್ಗದರ್ಶನ ನೀಡಲು ಹೊಂಬುಜ ಅತಿಶಯ ಶ್ರೀಕ್ಷೇತ್ರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ವಿದೇಶ ವಿಹಾರಕ್ಕಾಗಿ ತೆರಳಿದರು. ಪಟ್ಟಾಭಿಷಿಕ್ತರಾಗಿ 11 ವರ್ಷದ ಬಳಿಕ ಶ್ರೀಗಳವರು ಪ್ರಥಮ ಬಾರಿಗೆ ವಿದೇಶದಲ್ಲಿ ಜಿನಧರ್ಮ ಪ್ರಭಾವನೆಯ ಪ್ರವಚನಗಳನ್ನು ನೀಡಲಿರುವರು. ಜೂ. 24 ರಿಂದ 28ರವರೆಗೆ ಟೊರಂಟೋ ಜಿನಮಂದಿರದ ಪಂಚಕಲ್ಯಾಣ ವಿಧಾನಗಳಿವೆ. ಹೊಂಬುಜ…
ವಿವಾಹಿತ ಮಹಿಳೆ ಕಾಣೆ – ಪತ್ತೆಗೆ ಮನವಿ|missing
ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಬಡಾವಣೆ 3ನೇ ಕ್ರಾಸ್, ಕರುಮಾರಿಯಮ್ಮ ದೇವಸ್ಥಾನದ ಹತ್ತಿರದ ವಾಸಿ ರಮೇಶಪ್ಪ ಎಂಬುವವರ ಪತ್ನಿ 30 ವರ್ಷದ ಅನಿತಾ ಎಂಬ ಮಹಿಳೆ ಜೂನ್ 15 ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈಕೆಯ ಚಹರೆ 5.0 ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ, ಸಾಧಾರಣಾ ಮೈಕಟ್ಟು ಹೊಂದಿದ್ದು, ಬಲಗೈನಲ್ಲಿ ನವಿಲುಗರಿ ಟ್ಯಾಟು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮೆರೂನ್ ಕಲರ್ ಟಾಪ್ ಮತ್ತು ಗೋಲ್ಡ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಈಕೆಯ ಸುಳಿವು…
ತೀರ್ಥಹಳ್ಳಿ: ಬ್ಯಾಂಗಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ ನಷ್ಟ|FIRE
ಬ್ಯಾಂಗಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ ನಷ್ಟ ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿರುವ ಕಲ್ಪವೃಕ್ಷ ಹೋಟೆಲ್ ಪಕ್ಕದಲ್ಲಿರುವ ಬ್ಯಾಂಗಲ್ ಸ್ಟೋರ್ ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದ್ದು ಅಂಗಡಿ ಒಳಗೆ ಇದ್ದ ಹಲವು ಸಾಮಗ್ರಿಗಳು ಬೆಂಕಿಗೆ ಅನಾಹುತವಾಗಿದೆ. ವಯಸ್ಸಾದ ವೃದ್ದೆಯಾದ ಲಕ್ಷ್ಮಿ ಎಂಬುವರು ಅಂಗಡಿ ನೆಡೆಸಿ ಜೀವನ ನೆಡೆಸುತ್ತಿದ್ದರು. ಅಂಗಡಿ ಬಾಗಿಲು ಹಾಕಿ ಬ್ಯಾಂಕ್ ಗೆ ಹೋಗಿದ್ದಾಗ ಈ ಘಟನೆ ಜರುಗಿದೆ.2 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಅನಾಹುತ…
ರಿಪ್ಪನ್‌ಪೇಟೆ : ಯುವ ಕಾಂಗ್ರೆಸ್ ವತಿಯಿಂದ ಅರಸಾಳುವಿನಲ್ಲಿ ರೈಲು ತಡೆಗೆ ಯತ್ನ – ಕಾರ್ಯಕರ್ತರ ಬಂಧನ,ಬಿಡುಗಡೆ|Protest
ರಿಪ್ಪನ್‌ಪೇಟೆ : ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ವತಿಯಿಂದ ರೈಲು ತಡೆಗೆ ಯತ್ನಿಸಿದ ಘಟನೆ ನಡೆಯಿತು. ಇಂದು ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗೂತ್ತ ಮೈಸೂರು – ತಾಳಗುಪ್ಪ ರೈಲು ತಡೆ ನಡೆಸಲು ಮುನ್ನುಗ್ಗುತಿದ್ದಂತೆ ಗೇಟ್ ಬಳಿಯೇ ಪೊಲೀಸರು ತಡೆದು ಕಾರ್ಯಕರ್ತರನ್ನು ಬಂಧಿಸಿದರು. ಕಾರ್ಯಕರ್ತರನು ಬಂಧಿಸಿ ರಿಪ್ಪನ್‌ಪೇಟೆ…
ಶಿವಮೊಗ್ಗದ ಇಂಜಿನಿಯರ್ ಪತ್ನಿಯ ಕೊಲೆ!!! – ನಡೆದಿದ್ದೇನು…!!???
ಶಿವಮೊಗ್ಗ ನಗರದ ವಿಜಯನಗರದಲ್ಲಿ ಮಹಿಳೆಯ ಕೊಲೆ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕಾರು ಚಾಲಕನ ನಡೆ ಬಗ್ಗೆ ತುಂಗಾನಗರ ಪೊಲೀಸರು ಅನುಮಾನ ಮೂಡಿಸಿದೆಯಷ್ಟೆ ಅಲ್ಲದೆ , ಮನೆ ಸಮೀಪ ಕೆಲ ವ್ಯಕ್ತಿಗಳು ಓಡಾಡಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ವಿಜಯ ನಗರದ 2 ನೇ ತಿರುವಿನಲ್ಲಿರುವ ಮನೆಯಲ್ಲಿ ಕಮಲಮ್ಮ 54 ವರ್ಷದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ….
ಕಾಂಗ್ರೆಸ್ ಸರ್ಕಾರ 10 ಕೆ ಜಿ ಅಕ್ಕಿ ವಿತರಣೆ ಮಾಡದಿದ್ದರೆ ಜನ ಒಪ್ಪಲ್ಲ – ಬಿ ಎಸ್ ಯಡಿಯೂರಪ್ಪ
ಶಿವಮೊಗ್ಗ : ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದರೂ ಖರೀದಿ ಮಾಡಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಅಕ್ಕಿ ವಿತರಣೆ ಗೊಂದಲ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲು ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ…
ರಿಪ್ಪನ್‌ಪೇಟೆ ಠಾಣೆಯ ನೂತನ ಪಿಎಸ್‌ಐ ಅಗಿ ಎಸ್ ಪಿ ಪ್ರವೀಣ್ ಅಧಿಕಾರ ಸ್ವಿಕಾರ|PSI-RPET
ರಿಪ್ಪನ್‌ಪೇಟೆ ಠಾಣೆಯ“ನೂತನ ಪಿಎಸ್‌ಐ ಅಗಿ ಎಸ್.ಪಿ.ಪ್ರವೀಣ್ ಅಧಿಕಾರ ಸ್ವಿಕಾರ’’ ರಿಪ್ಪನ್‌ಪೇಟೆ;-ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಯಿಂದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್‌ಐ ಪ್ರವೀಣ್ ಎಸ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಂದ ಕೋಳಿ ಹೊಸನಗರ ಠಾಣೆಗೆ ವರ್ಗಾವಣೆಗೊಂಡಿದ್ದು ಆ ಸ್ಥಳಕ್ಕೆ ದಾವಣೆಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ವರ್ಗಾವಣೆಗೊಂಡಿದ್ದರು. ಆಧಿಕಾರ ಸ್ವೀಕಾರದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಈ ಹಿಂದಿನ ಪಿಎಸ್‌ಐ ಶಿವಾನಂದಕೋಳಿಯವರು ಟ್ರಾಫಿಕ್ ಕಿರಿಕಿರಿಯನ್ನು ತಡೆಯುವಲ್ಲಿ…
ಕಾಂಗ್ರೆಸ್ ಸರ್ಕಾರ ಹಿಂದೂ ಹಾಗೂ ಬಡವರ ವಿರೋಧಿ ಸರ್ಕಾರ – ಕೆ ಎಸ್ ಈಶ್ವರಪ್ಪ|KSE
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳ ಒಳಗೆ ಹಿಂದೂ ಧರ್ಮ ವಿರೋಧಿ ಮತ್ತು ಬಡವರ ವಿರೋಧಿ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಪ್ರತಿ ತಿಂಗಳಿಗೆ 10 ಕೆ ಜಿ ಅಕ್ಕಿ ಕೊಡುವುದಾಗಿ ಹೇಳಿ ಪ್ರಧಾನಿ ಮೋದಿ ಅಡ್ಡ ಬರ್ತಾ ಇದ್ದಾರೆ ಎಂಬ ಭಾವನೆಯನ್ನ ಕಾಂಗ್ರೆಸ್ ಆರೋಪಿಸುತ್ತಿದೆ. ಕೇಂದ್ರವನ್ನು ಕೇಳಿ ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಮಾಡಿದ್ರಾ.ಎಂದು ಪ್ರಶ್ನಿಸಿದ ಈಶ್ವರಪ್ಪ ಬಡವರಿಗೆ ಮೋಸ ಆಗುತ್ತಿದೆ…
ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಮಾರ್ಗ ಸರ್ಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಮಹಿಳೆಯರಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ|KSRTC
ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಮಾರ್ಗ ಸರ್ಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಮಹಿಳೆಯರಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ರಿಪ್ಪನ್‌ಪೇಟೆ;-ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಷ್ಟಾನಗೊಳಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಡಿ ಹೊಸನಗರ ತಾಲ್ಲೂಕಿನ ಮಹಿಳೆಯರು ಶಾಲಾ ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ವಂಚಿತರಾನ್ನಾಗಿಸಿದ್ದು ತಕ್ಷಣ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗಮನಹರಿಸಿ ಶಿವಮೊಗ್ಗ ಹೊಸನಗರ ಮತ್ತು ಸಾಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಅಗ್ರಹಿಸಿ ಇಂದು ಮಹಿಳೆಯರು ನಾಡಕಛೇರಿಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು….