ಜಿಲ್ಲಾ ಸುದ್ದಿ:
ಆನಂದಪುರ – ಆಯನೂರು ಹೆದ್ದಾರಿಗೆ ಅಡ್ದಲಾಗಿ ಬಿದ್ದ ಮರ – ಟ್ರಾಫಿಕ್ ಜಾಮ್| ಸಮಯ ಪ್ರಜ್ಞೆ ಮೆರೆದ ಶಾಸಕ ಬೇಳೂರು|rain
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಿಳಾಲಗುಂಡಿ ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿತ್ತು. ಗಾಳಿ ಮಳೆಗೆ ಬಿದ್ದ ಮರದಿಂದಾಗಿ ಶಿವಮೊಗ್ಗ-ಸಾಗರ ರಸ್ತೆಯಲ್ಲಿ ಸಂಚಾರಕ್ಕೆ ಕೆಲವು ಹೊತ್ತು ಸಮಸ್ಯೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ಧಾರಿಯಲ್ಲಿ ಸುಮಾರು 2 ಗಂಟೆ ಕಾಲ ಸಂಚಾರ ಬಂದ್ ಆಗಿತ್ತು. ಮರ ಉರುಳಿಬಿದ್ದ ಬೆನ್ನಲ್ಲೆ ಸ್ಥಳೀಯರು ಮರವನ್ನು ಕಡಿದು , ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದರು. ಆದರೆ ದೊಡ್ಡದಾಗಿದ್ದ ಮರವನ್ನು ತೆರವುಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಗಿಳಾಲಗುಂಡಿ ಕ್ರಾಸ್ ಸಮೀಪವೇ ಘಟನೆ ಬಗ್ಗೆ ವಿಷಯ ತಿಳಿದು…
ರಿಪ್ಪನ್‌ಪೇಟೆ : ನೂತನವಾಗಿ ಕಟ್ಟಡ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ|labour
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಮದಲ್ಲಿ ನೂತನವಾಗಿ ಕಟ್ಟಡ ಕಾರ್ಮಿಕರ ಸಂಘ ಸೋಮವಾರ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಪಟ್ಟಣದ ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಸಂಘವನ್ನು ರಚನೆ ಮಾಡಿ ಸಂಘದ ಅಧ್ಯಕ್ಷರನ್ನಾಗಿ ಮಹಮ್ಮದ್ ಹುಸೇನ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ವಿವರ : ಅಧ್ಯಕ್ಷರು : ಮಹಮ್ಮದ್ ಹುಸೇನ್ ಉಪಾಧ್ಯಕ್ಷರು : ದೇವೇಂದ್ರ ಆಚಾರ್ ಮತ್ತು ಶೌಕತ್ ಗೌರವಾಧ್ಯಕ್ಷರು : ರಮೇಶ್ ಆರ್ ಕಾರ್ಯಾಧ್ಯಕ್ಷರು : ಪ್ರಭಾಕರ್ ಆಚಾರ್…
ರಿಪ್ಪನ್‌ಪೇಟೆ : ತಳಲೆಯಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿತ|ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆ – ಅಭಿನಂದನೆ|Rpet
ರಿಪ್ಪನ್‌ಪೇಟೆ : ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿತವಾಗಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಸುರಿದ ಭಾರಿ ಮಳೆಗೆ ತಳಲೆ ಗ್ರಾಮದ ಈಶ್ವರಪ್ಪ ಎಂಬುವವರ ಮನೆಯ ಗೋಡೆ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆಯಾದ ಯುವ ಪ್ರತಿಭೆಗೆ ಮಂಜುನಾಥ್ ಗೌಡರವರಿಂದ ಅಭಿನಂದನೆ: ರಿಪ್ಪನ್‌ಪೇಟೆ…
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ : ರಿಪ್ಪನ್‌ಪೇಟೆ – ಆಯನೂರು ಮಾರ್ಗ ಬಂದ್|ಪರ್ಯಾಯ ಮಾರ್ಗ ಯಾವುದು..?? ಇಲ್ಲಿದೆ ಮಾಹಿತಿ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ 9ನೇ ಮೈಲಿಕಲ್ಲು ಬಳಿ ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. 9ನೇ ಮೈಲಿಕಲ್ಲು ಬಳಿಯಲ್ಲಿ ಭಾರಿ ಗಾಳಿ ಮಳೆಗೆ ಬೃಹತ್ ಜಂಬೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ರಿಪ್ಪನ್‌ಪೇಟೆ – ಆಯನೂರು ಮಾರ್ಗ ಸಂಪೂರ್ಣವಾಗಿ ಕಡಿತಗೊಂಡಿದ್ದು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಸ್ಥಳಕ್ಕೆ ಪಿಎಸ್ ಐ ಪ್ರವೀಣ್ ಹಾಗೂ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪರ್ಯಾಯ ಮಾರ್ಗ…
ಭಾರಿ ಮಳೆಯ ಹಿನ್ನಲೆ – ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಣೆ|Rain
ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿ ಡಿಡಿಪಿಐ ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿಗಳ ರವರ ಸೂಚನೆ ಮೇರೆಗೆ ಜು. 24 ರಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ…
ಭಾರಿ ಮಳೆ ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿತ|Rain
ಭಾರಿ ಮಳೆ ಗಾಳಿಗೆ ಮದರಸದ ಗೋಡೆ ಮೇಲ್ಚಾವಣಿ ಕುಸಿತ ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚುಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿ ಬೈಲು ಗ್ರಾಮದಲ್ಲಿ ಇರುವ ಐತಿಹಾಸಿಕ ಹಿನ್ನೆಲೆ ಉಳ್ಳಂತಹ ಮದರಸದ ಶಾಲೆಯ ಮೇಲ್ಚಾವಣಿ ಹಾಗೂ ಕಟ್ಟಡವು ಭಾನುವಾರ ಸುರಿದ ಭಾರಿ ಮಳೆಗೆ ಕುಸಿದು ಬಿದ್ದ ಘಟನೆ ನಡೆದಿದೆ. ಪ್ರತಿನಿತ್ಯ ಈ ಮದರಸದಲ್ಲಿ ಹಲವು ಮಕ್ಕಳು ಅರೆಬಿಕ್ ವಿದ್ಯಾಭ್ಯಾಸ ನಡೆಸುತಿದ್ದು ಭಾನುವಾರ ರಜಾ ದಿನವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಇತರೆ ದಿನಗಳಲ್ಲಿ ಘಟನೆ ಸಂಭವಿಸಿದ್ದಲ್ಲಿ ಅಹಿತಕರ…
ರಿಪ್ಪನ್‌ಪೇಟೆ : ಪ್ರೋ ಕಬ್ಬಡಿ ಲೀಗ್ ಗೆ ಆಯ್ಕೆಯಾದ ಯುವ ಪ್ರತಿಭೆಗೆ ಮಾಜಿ ಸಚಿವರಿಂದ ಅಭಿನಂದನೆ|pro kabbadi
ರಿಪ್ಪನ್‌ಪೇಟೆ : ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ನಲ್ಲಿ ಯುಪಿ ಯೋಧ ತಂಡಕ್ಕೆ ಆಯ್ಕೆಯಾದ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿದ್ದಾರೆ. ಇಂದು ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದಲ್ಲಿರುವ ಗಗನ್ ಗೌಡ ರವರ ಮನೆಗೆ ತೆರಳಿದ ಮಾಜಿ ಸಚಿವರು ಯುವ ಪ್ರತಿಭೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ದೇವೆಂದ್ರಪ್ಪ ಗೌಡ ,ಆನಂದ್ ಮೆಣಸೆ, ನೇಮಾಕ್ಷಿ ಗೌಡ್ರು, ಜಯದೇವ, ರಾಜೇಂದ್ರ ಘಂಟೆ, ಗಣಪತಿ,…
ಭಾರಿ ಮಳೆಗೆ ತೆಪ್ಪದಗಂಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಉರುಳಿದ ಮರ – ಸಂಚಾರ ಅಸ್ತವ್ಯಸ್ತ|CKM
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತಿದ್ದು ಬಾಳೆಹೊನ್ನೂರು-ಕಳಸ ಮಾರ್ಗ ಮಧ್ಯೆ ತೆಪ್ಪದಗಂಡಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ತೆಪ್ಪದಗಂಡಿಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಸ್ಥಳೀಯರು ಹಾಗೂ ಯಾತ್ರಿಕರ ನೆರವಿನಿಂದ ಮರ ತೆರವು ಕಾರ್ಯಾಚರಣೆ ನಡೆಸಿ ಕ್ರೇನ್ ಮುಖಾಂತರ ರಸ್ತೆಗೆ ಬಿದ್ದ ಎರಡು ಮರಗಳನ್ನು ತೆರವುಗೊಳಿಸಲಾಯಿತು. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ನೆಲಕ್ಕುರುಳಿರುವ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದೆ….
ರಿಪ್ಪನ್‌ಪೇಟೆಯ ಗವಟೂರಿನಲ್ಲಿ ನೂತನ ಮದ್ಯದಂಗಡಿ ಆರಂಭಕ್ಕೆ ಭಾರಿ ವಿರೋಧ|protest
ರಿಪ್ಪನ್ ಪೇಟೆ : ಪಟ್ಟಣದ ಗವಟೂರಿನಲ್ಲಿ ನೂತನವಾಗಿ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಗವಟೂರಿನ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರವಿಗೆ ಸರ್ಕಾರದಿಂದ ಲೈಸೆನ್ಸ್ ದೊರತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ…
ಹತ್ತನೇ ಆವೃತ್ತಿಯ ಪ್ರೋ ಕಬ್ಬಡಿ ಲೀಗ್ ತಂಡಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆಯ ಯುವ ಪ್ರತಿಭೆ ಗಗನ್ ಗೌಡ|pro kabbadi
ರಿಪ್ಪನ್‌ಪೇಟೆ : ಪಟ್ಟಣದ ಯುವ ಕ್ರೀಡಾಪಟುವೊಬ್ಬ ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದ ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. ಮೂಲತಃ…