ಜಿಲ್ಲಾ ಸುದ್ದಿ:
ಶಿವಮೊಗ್ಗ ತಹಶೀಲ್ದಾರ್ ಎನ್ ಜೆ ನಾಗರಾಜ್ ಅಮಾನತ್ತು|suspended
ಶಿವಮೊಗ್ಗ ತಹಶೀಲ್ದಾರ್ ಎನ್ ಜೆ ನಾಗರಾಜ್ ಅಮಾನತ್ತು ಶಿವಮೊಗ್ಗದದಲ್ಲಿ ತಹಶೀಲ್ದಾರ್ ಆಗಿರುವ ಎನ್ಜೆ ನಾಗರಾಜ್ರನ್ನ ಅಮಾನತ್ತುಗೊಳಿಸಲಾಗಿದೆ. ಅವರು ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಅವರ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಆನಂತರ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರು, ಪ್ರಕರಣಾ ತನಿಖಾ ವರದಿ ಆಧರಿಸಿ, ನಾಗರಾಜ್ರವರನ್ನು ಅಮಾನತ್ತುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಉಲ್ಲೇಖದಂತೆ ಕರ್ನಾಟಕ ಸರ್ಕಾರ ತನ್ನ ನಡಾವಳಿಯಲ್ಲಿ ನಾಗರಾಜ್ರವರನ್ನು ಅಮಾನತ್ತುಗೊಳಿಸಿ ಇಂದು ಆದೇಶಿಸಿದೆ. ಸರ್ಕಾರದ ಆದೇಶದಲ್ಲಿ ಏನಿದೆ ..?? ಸರ್ಕಾರದ ಆದೇಶ ಸಂಖ್ಯೆ:ಕಂಇ 45…
ಕ್ರೀಡಾಕೂಟಕ್ಕೆ ಅನುದಾನದ ಕೊರತೆ ಶಾಮಿಯಾನಕ್ಕೂ ಬರೆ- ಬಿಸಿಲ ಝಳಕ್ಕೆ ತತ್ತರಿಸಿದ ವಿದ್ಯಾರ್ಥಿಗಳು|amrutha
ಕ್ರೀಡಾಕೂಟಕ್ಕೆ ಅನುದಾನದ ಕೊರತೆ ಶಾಮಿಯಾನಕ್ಕೂ ಬರೆ- ಬಿಸಿಲ ಝಳಕ್ಕೆ ತತ್ತರಿಸಿದ ವಿದ್ಯಾರ್ಥಿಗಳು ರಿಪ್ಪನ್‌ಪೇಟೆ;-ಕ್ರೀಡಾ ಕೂಟಗಳಿಗೆ ಸರ್ಕಾರ ನೀಡುವ ಅನುದಾನ ಬಹಳ ಕಡಿಮೆಯಿದ್ದು ಇದರಿಂದ ಒಂದು ಶಾಮಿಯಾನ ಹಾಕುವುದು ಕಷ್ಟವಾಗಿದೆ ಇನ್ನೂ ಬಹುಮಾನ ಮತ್ತು ಕ್ರೀಡಾ ಸಾಮಗ್ರಿಗಳ ಖರೀಧಿ ಸೇರಿದಂತೆ ಊಟೋಪಚಾರಕ್ಕೆ ಗ್ರಾಮದಲ್ಲಿ ಕೊಡುಗೈ ದಾನಿಗಳನ್ನು ಅವಲಂಭಿಸಬೇಕಾದ ಅನಿರ್ವಾತೆ ಇದೆ ಎಂದು ಎಂ.ಎಲ್.ಸಿ ಎಸ್.ಎಲ್.ಭೋಜೇ ಗೌಡರು ವಿಷಾದ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆ ಸಮೀಪದ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಹೊಸನಗರ ತಾಲ್ಲೂಕ್ ಪದವಿ ಪೂರ್ವ ಕಾಲೇಜ್‌ಗಳ…
ತುಂಗಾ ನದಿ ತೀರದಲ್ಲಿ ಹೆಬ್ಬಾವು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ|python
ತುಂಗಾ ನದಿ ತೀರದಲ್ಲಿ ಹೆಬ್ಬಾವು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ ತೀರ್ಥಹಳ್ಳಿ: ತುಂಗಾ ನದಿ ತೀರದಲ್ಲಿ ಹೆಬ್ಬಾವು ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಪಟ್ಡಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ ಹದಿನಾಲ್ಕರ ಕುರುವಳ್ಳಿ ಗಣಪತಿ ಪೆಂಡಲ್ ಹಿಂಭಾಗ ತುಂಗಾ ನದಿಯಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವು ಇರುವ ವಿಷಯ ತಿಳಿಯುತ್ತಿದ್ದಂತೆ ಕುರುವಳ್ಳಿಯ ಜನರು ಹೆಬ್ಬಾವು ನೋಡಲು ನದಿಯ ಸಮೀಪ ಬರುತ್ತಿದ್ದಾರೆ ಎನ್ನಲಾಗಿದೆ. ನದಿಯಲ್ಲಿ ಹೆಬ್ಬಾವು ಇರುವ ವಿಷಯ ಸ್ಥಳೀಯರು…
ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು – ಮಂಜಪ್ಪ ಗುಳುಕೊಪ್ಪ|hombuja
ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು – ಮಂಜಪ್ಪ ಗುಳುಕೊಪ್ಪ ರಿಪ್ಪನ್‌ಪೇಟೆ : ಮನುಷ್ಯನ ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು ಎಂದು ನಿವೃತ ಮುಖ್ಯ ಶಿಕ್ಷಕ ಮಂಜಪ್ಪ ಗುಳುಕೊಪ್ಪ ಹೇಳಿದರು. ಇಲ್ಲಿನ ಸಮೀಪದ ಹುಂಚ ಗ್ರಾಮದಲ್ಲಿ ಹಳೆ ನವೋದಯ ವಿದ್ಯಾರ್ಥಿ ಬಳಗ ಮತ್ತು ಹುಂಚ ಯುವ ತಂಡದ ವತಿಯಿಂದ ತೃತೀಯ ವರ್ಷದ ನವೋದಯ ಮತ್ತು ಮುರಾರ್ಜಿ ಶಾಲೆಯ ಪ್ರವೇಶ ಪರೀಕ್ಷೆಯ – ಉಚಿತ…
ಹಸೆಮಣೆ ಏರಿದ ದಿನವೇ ಪರೀಕ್ಷೆಗೆ ಹಾಜರಾದ ನವವಧು|special news
ಹಸೆಮಣೆ ಏರಿದ ದಿನವೇ ಪರೀಕ್ಷೆಗೆ ಹಾಜರಾದ ನವವಧು ಶಿವಮೊಗ್ಗ: ಹೊಸ ಜೀವನಕ್ಕೆ ಕಾಲಿಟ್ಟ ದಿನವೇ ನವವಧುವೊಬ್ಬರು ಪರೀಕ್ಷೆಗೆ ಹಾಜರಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಚೆನ್ನೈ ಮೂಲದ ಫ್ರಾನ್ಸಿಸ್‌ಗೆ ಕಳೆದ ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಪ್ರೇಮಾಂಕುರವಾಗಿತ್ತು. ಹೀಗಾಗಿ ಸತ್ಯವತಿ ಹಾಗೂ ಫ್ರಾನ್ಸಿಸ್ ಹಿರಿಯರನ್ನು ಒಪ್ಪಿಸಿ ಭಾನುವಾರ ಮನೆಯಲ್ಲಿಯೇ ಸರಳವಾಗಿ ವಿವಾಹವಾದರು. ಆದರೆ ಸತ್ಯವತಿ ಪದವಿ ಕಾಲೇಜುವೊಂದರಲ್ಲಿ ಅಂತಿಮ…
ಕರಿಮನೆ ಗ್ರಾಪಂ ಅಕ್ರಮ ಮರಕಡಿತಲೆ ಪ್ರಕರಣ – ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ|ಅಧಿಕಾರಿಗಳ ವಿರುದ್ದ ಆರಗ ಜ್ಞಾನೇಂದ್ರ ಗರಂ|protest
ಹೊಸನಗರ : ಕರಿಮನೆ ಗ್ರಾಮದ ಅಕೇಶಿಯ ಮರಗಳ ಅಕ್ರಮ ಕಡಿತಲೆ ಪ್ರಕರಣದ ಆರೋಪಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ. ತಾಲೂಕಿನ ನಗರ ಹೋಬಳಿ ಕರಿಮನೆ ಗ್ರಾಮದಲ್ಲಿ ನಡೆದ ಅಕೇಶಿಯಾ ಮರಗಳ ಅಕ್ರಮ ಕಡಿತಲೆ ಪ್ರಕರಣದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ನಡೆಸುತಿದ್ದ ಅಹೋರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಗ್ರಾಮದ ಸರ್ವೆ ನಂಬರ್ 106ರಲ್ಲಿ ಗ್ರಾಮ ಪಂಚಾಯಿತಿ ಅರಣ್ಯೀಕರಣ…
ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ|fest
ಹೊಸನಗರದಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ ಹೊಸನಗರ : ಇಂದು ಪಟ್ಟಣದ ಸಂತ ಅಂತೋನಿ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಮ ಮೊ0ತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಹೊಸ ಬಟ್ಟೆ ಧರಿಸಿ ವರ್ಣ ರಂಜಿತವಾಗಿ ಆಚರಿಸಿದರು. ತೆನೆ ಹಬ್ಬವೆಂದು ಕರೆಯಲ್ಪಡುವ ಈ ಹಬ್ಬದ ಪ್ರಯುಕ್ತ ಚರ್ಚಿನಲ್ಲಿ ವಿಶೇಷ ಬಲಿಪೂಜೆ ಹೊಸ ತೆನೆಯ ಆಶೀರ್ವಚನ ವಿತರಣೆ ಮಾಡಿ ಮೆರವಣಿಗೆಗೆ ಪುಷ್ಪಾರ್ಚನೆ ಮೂಲಕ ಧರ್ಮ ಗುರುಗಳಾದ ರೆವರೆಂಡ್ ಫಾದರ್ ಸೈಮನ್ ಚಾಲನೆ ನೀಡಿ ಸಂದೇಶ ಹಾಗೂ ಶುಭಾಶಯ ವಿನಿಮಯ…
“ಧಾರ್ಮಿಕ ಶ್ರದ್ಧೆ, ಭಕ್ತಿಯಿಂದ ಜೀವನ ಐಸಿರಿ” – ಹೊಂಬುಜಾ ಶ್ರೀ
“ಧಾರ್ಮಿಕ ಶ್ರದ್ಧೆ, ಭಕ್ತಿಯಿಂದ ಜೀವನ ಐಸಿರಿ” – ಹೊಂಬುಜಾ ಶ್ರೀ ರಿಪ್ಪನ್‌ಪೇಟೆ:-ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರ ಕೃಷ್ಣಪಕ್ಷದ ನವಮಿಯಂದು ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಅಭೀಷ್ಠವರ ಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಇಷ್ಟಾರ್ಥನೆರವೇರಲು ಶ್ರದ್ಧಾ ಪೂರ್ವಕ ಪ್ರಾರ್ಥನೆ ಸಲ್ಲಿಸಿದರು. ಸೀರೆ-ಉಡಿ-ಫಲ-ಪುಷ್ಪ-ಧಾನ್ಯಗಳಿಂದ ಹರಕೆ ಪೂಜೆ ಸಮರ್ಪಿಸಿದರು. ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದ ಹೊಂಬುಜ ಮಠದಲ್ಲಿ ಇಂದು ನಡೆದ ಶ್ರಾವಣ ಮಾಸದ ಚತುರ್ಥ ಸಂಪತ್ ಶುಕ್ರವಾರದ ಧಾರ್ಮಿಕ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ…
ಅಪ್ರಾಪ್ತನಿಂದ ಬೈಕ್ ಚಾಲನೆ – ತಂದೆಗೆ ₹25 ಸಾವಿರ ದಂಡ ವಿಧಿಸಿದ ಕೋರ್ಟ್|penalty
ಅಪ್ರಾಪ್ತನಿಂದ ಬೈಕ್ ಚಾಲನೆ; ತಂದೆಗೆ ₹25 ಸಾವಿರ ದಂಡ ವಿಧಿಸಿದ ಕೋರ್ಟ್ ಶಿವಮೊಗ್ಗ (Shivamogga) ಅಪ್ರಾಪ್ತ ಪುತ್ರನಿಗೆ ಮೋಟಾರ್ ಬೈಕ್(bike) ಓಡಿಸಲು ಅವಕಾಶ ನೀಡಿದ ತಂದೆಗೆ ನಗರದ ನ್ಯಾಯಾಲಯ ₹25 ಸಾವಿರ ದಂಡ(penalty) ವಿಧಿಸಿದ ಘಟನೆ ನಡೆದಿದೆ. 17 ವರ್ಷದ ಬಾಲಕನ ತಂದೆ ಓಂಪ್ರಕಾಶ್ ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯದ 4ನೇ ಎಸಿಜೆ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 2023ರ ಆ.12ರಂದು ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಶ್ಚಿಮ ಠಾಣೆ ಪಿಎಸ್‌ಐ ತಿರುಮಲೇಶ್ ವಾಹನಗಳ ತಪಾಸಣೆ…
ತಳಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ|rpet news
ತಳಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ರಿಪ್ಪನ್‌ಪೇಟೆ : ಮಳೆಯಿಲ್ಲದೇ ಮಲೆನಾಡಿನಲ್ಲಿ ಬಿಸಿಲಿನ ಆರ್ಭಟ ಹೆಚ್ಚಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯೇ ಇಲ್ಲದ ಕಾರಣ ಕೆರೆಗಳು ಬತ್ತಿ ಹೋಗಿದ್ದು, ರೈತರ ಬೆಳೆಗಳಿಗೆ ಸಹ ಸಮಸ್ಯೆ ಆಗುತ್ತಿದೆ. ಸರಿಯಾಗಿ ಮಳೆ ಬಾರದೇ ಕುಡಿಯಲು ನೀರಿಲ್ಲದೇ ಜನ ತತ್ತರಿಸಿ ಹೋಗಿದ್ದಾರೆ. ಪಟ್ಟಣದ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಹ ಮಳೆಯಾಗಲಿ ಎಂದು ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದು, ಕಷ್ಟ ನೀಗಿಸುವಂತೆ…