ಕ್ರೈಂ ಸುದ್ದಿ:
ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಕಾರು ನಡುವೆ ಡಿಕ್ಕಿ – 9 ಮಂದಿಗೆ ಗಾಯ
ಕೆಎಸ್‌ಆರ್‌ಟಿಸಿ ಬಸ್ಸು- ಕಾರು ಡಿಕ್ಕಿ, 9 ಮಂದಿಗೆ ಗಾಯ ಶಿವಮೊಗ್ಗದಿಂದ ತರೀಕೆರೆಗೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿವೆ. ಬಸ್ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿವೆ. ತರೀಕೆರೆ ತಾಲೂಕಿನ ಬೆಲೇನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಶಿವಮೊಗ್ಗದಿಂದ ತರೀಕೆರೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ….
ಓಮಿನಿ ಓಡಿಸಿದ ಅಪ್ರಾಪ್ತ ಪುತ್ರ – ತಂದೆಗೆ 25 ಸಾವಿರ ದಂಡ!!|awareness news
ಓಮಿನಿ ಓಡಿಸಿದ ಅಪ್ರಾಪ್ತ ಪುತ್ರ – ತಂದೆಗೆ 25 ಸಾವಿರ ದಂಡ!! ಶಿವಮೊಗ್ಗ : ಚಾಲನಾ ಪರವಾನಗಿ (ಡಿ.ಎಲ್) ಇಲ್ಲದೇ ಒಮಿನಿ ವಾಹನ ಚಲಾಯಿಸುತ್ತಿದ್ದ ಬಾಲಕನ ತಂದೆಗೆ ಇಲ್ಲಿನ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹ 25 ಸಾವಿರ ದಂಡ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ನಿವಾಸಿ ಇಲಿಯಾಸ್ (41) ದಂಡ ಪಾವತಿಸಬೇಕಾದವರು. ಇಲಿಯಾಸ್ ಅವರ 17 ವರ್ಷದ ಪುತ್ರ ಕಳೆದ ಸೆ.9ರಂದು ಶಿವಮೊಗ್ಗ ನಗರದಲ್ಲಿ ಒಮಿನಿ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಕರ್ನಾಟಕ ಸಂಘದ ಬಳಿಯ…
ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ..!!|crime news
ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ! ತೀರ್ಥಹಳ್ಳಿ: ಬೆಂಗಳೂರಿಂದ ಭೀಮನ ಕಟ್ಟೆಗೆ ಪ್ರವಾಸಕ್ಕೆ ಬಂದಿದ್ದ ಮೂರು ಯುವಕರಲ್ಲಿ ಇಬ್ಬರು ಯುವಕರು ನೀರಿನಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದರು. ಇವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿ ರಾತ್ರಿಯಿಡಿ ತೀರ್ಥಹಳ್ಳಿ ಪೊಲೀಸರು,ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಇದೀಗ ಗೌತಮ್ ( 26) ವರ್ಷ ಅವರ ಮೃತದೇಹವನ್ನು ನೀರಿನಿಂದ ಮೇಲೆ ತೆಗೆಯಲಾಗಿದೆ. ಇನ್ನೋರ್ವ ಯುವಕನ ಪತ್ತೆಗಾಗಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.
ಈಜಲು ನದಿಗೆ ಇಳಿದ ಇಬ್ಬರು ಯುವಕರು ನಾಪತ್ತೆ – ಅಗ್ನಿಶಾಮಕ ದಳದಿಂದ ಶೋಧ|missing
ಭೀಮನಕಟ್ಟೆ ನದಿಯಲ್ಲಿ ಇಬ್ಬರು ಯುವಕರು ನಾಪತ್ತೆ – ಅಗ್ನಿಶಾಮಕದಳದಿಂದ ಶೋಧ ತೀರ್ಥಹಳ್ಳಿ : ಭೀಮನಕಟ್ಟೆಯ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದು ನದಿಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಕಾರ್ಯಾಚರಣೆಯಲ್ಲಿ ತೊಡಕಾಗಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಯುವಕರಿಬ್ಬರು ಈಜಲು ಹೋಗಿ ನಾಪತ್ತೆಯಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ 27 ವರ್ಷ ಹಾಗೂ ಸಂಜಯ್ 25 ನೀರಿನಲ್ಲಿ ಮುಳುಗಿರುವ ಯುವಕರು ಎನ್ನಲಾಗುತ್ತಿದೆ. ಅಗ್ನಿಶಾಮಕ ದಳದಿಂದ ನಾಪತ್ತೆಯಾಗಿರುವ ಯುವಕರ ತೀವ್ರ ಶೋಧ…
ಚಲಿಸುತ್ತಿರುವಾಗ ಧಗಧಗನೇ ಹೊತ್ತಿ ಉರಿದ ಡಸ್ಟರ್ ಕಾರು|fire
ಚಲಿಸುತ್ತಿರುವಾಗ ಧಗಧಗನೇ ಹೊತ್ತಿ ಉರಿದ ಡಸ್ಟರ್ ಕಾರು|fire ಶಿವಮೊಗ್ಗ : ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಡಸ್ಟರ್ ಕಾರು ಧಗ ಧಗನೆ ಹೊತ್ತು ಉರಿದಿರುವ ಘಟನೆ ಇಂದು ಮಧ್ಯಾಹ್ನ ಶಿವಮೊಗ್ಗದ ಹೊರವಲಯದಲ್ಲಿ ಸಂಭವಿಸಿದೆ. ನಗರದ ಮುದ್ದಿನಕೊಪ್ಪದ ಬಳಿ ಭದ್ರಾವತಿಯ ಸಿದ್ದಾಪುರದ ಕಿರಣ್ ಕುಮಾರ್ ಎಂಬುವರ ಡಸ್ಟರ್ ಕಾರು ಕೆಎ 25 ಎಂ ಎ 1169 ಕ್ರಮ ಸಂಖ್ಯೆಯ ಡಸ್ಟರ್ ಕಾರಿನಲ್ಲಿ ಮುಂದಿನ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ರಸ್ತೆ ಬದಿಗೆ ಕಾರು…
ಅಕ್ಕಿ ಕಳ್ಳತನದ ಆರೋಪಿಗಳ ಬಂಧನ|arrested
ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರ್ಕೇಟ್ ನಲ್ಲಿನ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿ ಸೆ.04 ರಂದು ಅಕ್ಕಿ ಪಾಕೇಟ್ ಗಳು ಕಳ್ಳತನವಾದ ಬಗ್ಗೆ ಮಂಜುನಾಥ ಬಿ ಎಂ, ಎಂಬುವರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಮತ್ತು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್ ಎಂ ಡಿ. ಪ್ರಭಾರ ಪ್ರೊಬೇಷನರಿ ಐಪಿಎಸ್ ಕುಮಾರಿ…
ಬೈಕ್ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ|accident
ಬೈಕ್ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ ಹೊಸನಗರ : ಪಟ್ಟಣದ ಕೆಇಬಿ ಸರ್ಕಲ್ ನಲ್ಲಿ ಟ್ಯಾಂಕರ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತಿದ್ದ ಟ್ಯಾಂಕರ್ ಹೊಸನಗರದಿಂದ ಸುತ್ತ ತೆಂಕಬೈಲ್ ಕಡೆಗೆ ಹೋಗುತ್ತಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಶುಕ್ರವಾರ ರಾತ್ರಿ ಕೆಇಬಿ ಎದುರು ತಿರುವಿನಲ್ಲಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಟ್ಯಾಂಕ್ ಬೈಲ್ ಲೋಕಪ್ಪ ಗೌಡ ಹಾಗೂ ಇನ್ನಿಬ್ಬರು ಗಾಯಗೊಂಡಿರುವುದಾಗಿ…
ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ – ಆರೋಪಿಯ ಬಂಧನ|arrested
ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ – ಆರೋಪಿಯ ಬಂಧನ ಹೊಸನಗರ : ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ ಹಣ ಪಡೆದು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿ ಜೈಭೀಮ್ ಪಡಕೋಣೆ ಬಂಧಿತ ಆರೋಪಿಯಾಗಿದ್ದಾನೆ. ಘಟನೆಯ ಹಿನ್ನಲೆ : ಮ್ಯಾಟ್ರಿಮೊನಿಯಲ್ಲಿ ಹೊಸನಗರ ಮೂಲದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು ಕೆಇಬಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲಕ್ಷಾಂತರ ರೂ ಹಣವನ್ನು ಪಡೆದು ವಂಚಿಸಿದ್ದಾನೆ.ಈ…
ಬಾವಿಯಲ್ಲಿ ಕೆಲಸ ಮಾಡುತ್ತಿರುವಾಗ ಬೋಡ್ರಸ್ ಕಲ್ಲು ತಲೆ ಮೇಲೆ ಬಿದ್ದು ವ್ಯಕ್ತಿ ಸಾವು|crime news
ಸಾಗರ : ಬಾವಿಯೊಳಗೆ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಬೋಡ್ರಸ್ ಕಲ್ಲು ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದ 9 ನೇ ತಿರುವಿನಲ್ಲಿ ಘಟನೆ ನಡೆದಿದೆ. ರಾಮನಗರದ ಮೋಹನ (58) ಸಾವು ಕಂಡ ದುರ್ದೈವಿ. ಅರಳಿಕಟ್ಟೆ ಬಳಿಯ ಮನೆಯ ಬಾವಿಯಲ್ಲಿ ಅವರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಮೇಲಿನಿಂದ ಆಕಸ್ಮಿಕವಾಗಿ ತಲೆ ಮೇಲೆ ಕಲ್ಲು ಬಿದ್ದಿದ್ದು, ಬಾವಿಯಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಹೊಸನಗರ : ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ – ಬೈಕ್ ಸಹಿತ ಆರೋಪಿಗಳು ವಶಕ್ಕೆ|arrested
ಹೊಸನಗರ : ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ – ಬೈಕ್ ಸಹಿತ ಆರೋಪಿಗಳು ವಶಕ್ಕೆ ಹೊಸನಗರ : ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ನಗದು ಹಣದ ಜೊತೆಗೆ ಬೈಕ್‌ಗಳ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತಾಲೂಕಿನ ಸೊನಲೆ ಹಾಗೂ ಆಲಗೇರಿಮಂಡ್ರಿ ಗ್ರಾಮದಲ್ಲಿ ಹೊಸನಗರ ಪಿಎಸ್‌ಐ ಶಿವಾನಂದ ಕೆ ನೇತ್ರತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ 1 : ಹೊಸನಗರ ತಾಲ್ಲೂಕು ಸೊನಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…