Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ಶಾಂತಿ ಮತ್ತು ಪ್ರೇಮದಿಂದ ಭಾವೈಕ್ಯದ ಜೀವನ ಸಾಧ್ಯ :

ರಿಪ್ಪನ್ ಪೇಟೆ : ಪ್ರೀತಿ, ಪ್ರೇಮ,ಮತ್ತು ಭಾವೈಕ್ಯದ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಪ್ರೀತಿ-ಪ್ರೇಮ ಮತ್ತು ಶಾಂತಿಯನ್ನು ಹಂಚೋಣ ಆ ಮೂಲಕ ಭಾವೈಕ್ಯತೆ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡಬಹುದೆಂದು  ರೆ. ಫಾ.ಬಿನೋಯ್ ಹೇಳಿದರು.  ಪಟ್ಟಣದ ಗುಡ್ ಶಫರ್ಡ್  ಚರ್ಚಿನಲ್ಲಿ ಶುಕ್ರವಾರ ಗುಡ್ ಫ್ರೈಡೆ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಗತ್ತಿಗೆ ಶಾಂತಿ ಮಂತ್ರವನ್ನು ಪಡಿಸಿದ ಯೇಸು ಕ್ರಿಸ್ತರು  ಪ್ರೀತಿ ಪ್ರೇಮ ಭಾವ್ಯಕ್ಯತೆ ಮತ್ತು ಸಾಮರಸ್ಯದಿಂದ  ಬದುಕಿದಾಗ ಮಾತ್ರ…

Read More

ಜಾನಪದ ಕಲೆಯನ್ನು ಶಾಶ್ವತವಾಗಿ ಉಳಿಸಬೇಕಿದೆ: ಕಾಗೋಡು ತಿಮ್ಮಪ್ಪ

ರಿಪ್ಪನ್‌ಪೇಟೆ: ನಮ್ಮ ಪೂರ್ವಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜಾನಪದ ಕಲೆ, ಸಾಹಿತ್ಯ ಪ್ರಕಾರಗಳು ಸರ್ವಕಾಲಕ್ಕೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ಜವಾಬ್ದಾರಿಯನ್ನು ಇಂದಿನ ಯುವ ಪೀಳಿಗೆ ನಿರ್ವಹಿಸಬೇಕಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಶ್ರೀಶನಿಪರಮೇಶ್ವರ ಯುವಕ ಸಂಘ, ಜಾನಪದ ಕಲಾ ಹಾಗೂ ಸಾಹಿತ್ಯ ವೇದಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪುನಿತ್ ರಾಜ್‌ಕುಮಾರ್ ಸ್ಮರಣಾರ್ಥ ಸೋಮವಾರ ಸಂಜೆ ಆಯೋಜಿಸಲಾಗಿದ್ದ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಶಿಕ್ಷಕ…

Read More

ರಿಪ್ಪನ್ ಪೇಟೆ : ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ :  ಶಿರಸಿ ಹಾಗೂ ಸಾಗರದ ಕಾರ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿ ಗೆ ತೆರಳುವ ಮಾರ್ಗ ಮಧ್ಯದಲ್ಲಿ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ  ಇಂದು ಸಂಜೆ ರಾಜ್ಯ ಗೃಹ ಸಚಿವರಾದ  ಆರಗ ಜ್ಞಾನೇಂದ್ರ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು. ಗೃಹ ಸಚಿವರ ದಿಢೀರ್ ಆಗಮನವಾದಾಗ ನೂರಾರು ಸಂಖ್ಯೆಯಲ್ಲಿ  ಜಮಾವಣೆಗೊಂಡ ಕಾರ್ಯಕರ್ತರನ್ನು ನೋಡಿದ ಗೃಹ ಸಚಿವರು ವಿನಾಯಕ ವೃತ್ತದಲ್ಲಿ  ಕಾರ್ ನಿಲ್ಲಿಸಿ ತಕ್ಷಣ ಕಾರ್ ನಿಂದ ಇಳಿದು ಕಾರ್ಯಕರ್ತರೊಂದಿಗೆ ಸಂಭಾಷಣೆ ನಡೆಸಿದರು. ಈ ಸಂದರ್ಭದಲ್ಲಿ ರಿಪ್ಪನ್ ಪೇಟೆ…

Read More

ಈಶ್ವರಪ್ಪ ರಾಜೀನಾಮೆ ವಿರೋಧಿಸಿ ಅಭಿಮಾನಿಯೊಬ್ಬನಿಂದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ :

ಸಚಿವ ಈಶ್ವರಪ್ಪನವರ ರಾಜೀನಾಮೆ ವಿರೋಧಿಸಿ ಅಭಿಮಾನಿಯೊಬ್ಬ ಸಚಿವರ ಮನೆ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ನಲ್ಲಿ ಇರುವ  ಸಚಿವ ಈಶ್ವರಪ್ಪನವರ ಮನೆ ಮುಂದೆ ಮುರುಗ ಎಂಬ ಅಭಿಮಾನಿ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಇದನ್ನು ಕಂಡ ಸುತ್ತಮುತ್ತಲಿನ ಜನ ತಕ್ಷಣ ತಪ್ಪಿಸಿದ್ದಾರೆ.ನೀರು ಸುರಿದು ರಕ್ಷಿಸಿದ್ದಾರೆ. ಸಚಿವ ಈಶ್ವರಪ್ಪ ಮನೆಯಲ್ಲಿಯೇ ಇದ್ದಾಗಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.

Read More

ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆ ಘೋಷಣೆ : ನಾಳೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಣೆ :

ಪ್ರತಿಭಟನೆಗೆ ಮಣಿದ ಕೆ.ಎಸ್​.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ! ಕಮಿಷನ್ ಆರೋಪಕ್ಕೆ ಬಿಜೆಪಿ ಸರ್ಕಾರದ ಬಿಗ್ ವಿಕೆಟ್​ ಡೌನ್​! ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಸಚಿವ ಕೆ.ಎಸ್​.ಈಶ್ವರಪ್ಪ ಇವತ್ತು ಸಂಜೆ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ಕರೆದು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾಳೆ ದಿನ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನ ನೀಡುತ್ತೇನೆ ಎಂದಿದ್ದಾರೆ. ಈ ಮೂಲಕ ಗುತ್ತಿಗೆ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಮೊದಲ ವಿಕೆಟ್​ ಪತನವಾದಂತಿದೆ. ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಕೇಸ್​ನ ಬೆನ್ನಲ್ಲೆ ಕೆ.ಎಸ್​.ಈಶ್ವರಪ್ಪನವರ…

Read More

ಮೂರು ದಿನ ಮಾಧ್ಯಮಗಳ ಜೊತೆ ಮಾತನಾಡಲ್ಲ ಎಂದ ಸಚಿವ ಈಶ್ವರಪ್ಪ : ಕಾರಣವೇನು ಗೊತ್ತೆ???? ಈ ಸುದ್ದಿ ನೋಡಿ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಲವಾಗಿ ಒತ್ತಾಯಿಸುತ್ತಿದೆ. ಈ ಮಧ್ಯೆ ಮಾಧ್ಯಮಗಳ ಜೊತೆ ಮೂರು ದಿನ ಮಾತನಾಡದಿರಲು ಅವರು ತೀರ್ಮಾನಿಸಿದ್ದಾರೆ.  ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗುವ ವೇಳೆ ಮಾಧ್ಯಮದವರು ಸಚಿವರ ಪ್ರತಿಕ್ರಿಯೆಗೆ ಮುಂದಾದರು.  ಆಗ ಸಚಿವರು ಮಾಧ್ಯಮದವರನ್ನು ಕಂಡು ನಾನು 3 ದಿನ ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು. ಈ ವೇಳೆ…

Read More

ರಿಪ್ಪನ್ ಪೇಟೆ : ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ರಿಪ್ಪನ್ ಪೇಟೆ : ಇಲ್ಲಿನ ವಿನಾಯಕ ವೃತ್ತದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಹಿನ್ನೆಲೆಯಲ್ಲಿ ಸಾವಿಗೆ ಕಾರಣಕರ್ತರಾದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಶೇಕಡ 40 ಪರ್ಸೆಂಟ್ ಕಮಿಷನ್ ದಂದೆಗೆ ಒಬ್ಬ ಅಮಾಯಕ ಗುತ್ತಿಗೆದಾರನನ್ನು ಬಲಿತೆಗೆದುಕೊಂಡ ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಇಂತಹ ಭ್ರಷ್ಟ ಮಂತ್ರಿಯನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಪ್ರತಿಭಟನೆ ನಡೆಯುವ…

Read More

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಹಾಗೂ ರಿಪ್ಪನ್ ಪೇಟೆ ಗ್ರಾಮಾಡಳಿತದಿಂದ ಚಿಕ್ಕಬೀರನ ಕೆರೆಗೆ ಕಾಯಕಲ್ಪ:

ರಿಪ್ಪನ್ ಪೇಟೆ : ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗ್ರಾಮಾಧ್ಯಕ್ಷೆ ಮಂಜುಳಾರವರ ಅಧ್ಯಕ್ಷತೆಯಲ್ಲಿ ಚಿಕ್ಕಬೀರನಕೆರೆ ಕೆರೆ ಹೂಳು ತೆಗೆಯುವ ಬಗ್ಗೆ ಸಾರ್ವಜನಿಕರ ಸಮಾಲೋಚನಾ ಸಭೆ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಸರ್ಕಾರ ಮಾಡದಂತಹ ಅಭಿವೃದ್ದಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಶ್ವಾರ್ಥ ಸೇವೆಯ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಹೆಚ್ಚು ಆದ್ಯತೆ ನೀಡುವುದರೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಅಂತರ್ಜಲ ಹೆಚ್ಚಿಸುವ ಕಾರ್ಯದಲ್ಲಿ ಧರ್ಮಸ್ಥಳ…

Read More

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಸಾಗರ ಪೊಲೀಸರು :

ಸಾಗರ: ಟೌನ್ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಚಂದ್ರ ಬಳೆಗಾರ್  ತಂದೆ ಲೇಟ್, ಅಣ್ಣಪ್ಪ, 28 ವರ್ಷ, ಸೆಂಟಿಂಗ್ ಕೆಲಸ ವಾಸ ಉಳವಿ ಗ್ರಾಮ ಸೊರಬ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಿದಾಗ, ಆರೋಪಿತನು ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ 2 ಮತ್ತು ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗೌತಮಪುರ ಗ್ರಾಮದಲ್ಲಿ 1 ಮನೆಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ, ಆರೋಪಿತನನ್ನು…

Read More

ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ಮಾಡಿದ ನಾಲ್ವರ ಬಂಧನ!!!!!

ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ  ಗೊಠಾಣೆ ಗ್ರಾಮದ  ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ(Sahydari Tiger Reserve) ಬಂಗಾಳ ಮಾನಿಟರ್ ಹಲ್ಲಿಯ (bengal monitor lizard ) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್‌ಗೆ ಪ್ರವೇಶಿಸಿ ಅಪರಾಧ ಎಸಗಿದ್ದಾರೆ.ಅಪರಾಧಿಗಳನ್ನು ಸಂದೀಪ್ ತುಕ್ರಾಮ್, ಪವಾರ್ ಮಂಗೇಶ್, ಜನಾರ್ದನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನಿಲ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ…

Read More