Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Accident | ಜನನಿಬಿಡ ಪ್ರದೇಶದಲ್ಲಿ ಬಸ್ ಟೈರ್ ಬ್ಲಾಸ್ಟ್ | ಕೆಳಕ್ಕೆ ಬಿದ್ದ ಬಾಲಕಿ

ಜನನಿಬಿಡ ಪ್ರದೇಶದಲ್ಲಿ ಸಿಟಿ ಬಸ್ ಟೈರ್ ಬ್ಲಾಸ್ಟ್ | ಕೆಳಕ್ಕೆ ಬಿದ್ದ ಬಾಲಕಿ | ಜನರಲ್ಲಿ ಆತಂಕ ಶಿವಮೊಗ್ಗ: ನಗರದ ನೆಹರೂ ರಸ್ತೆಯಲ್ಲಿ ಸಿಟಿ ಬಸ್ ಟೈರ್ ಸ್ಪೋಟಗೊಂಡ ಪರಿಣಾಮ ಬಸ್ ಒಳಗಿದ್ದ ಬಾಲಕಿ ಕೆಳಕ್ಕೆ ಬಿದ್ದ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ನೆಹರೂ ರಸ್ತೆಯಲ್ಲಿ ವೀರಭದ್ರೇಶ್ವರ ಸಿಟಿ ಬಸ್ ಟೈರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಬಸ್ ತೂತ ಬಿದ್ದಿದ್ದು ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ. ಚಾಲಕನ ಹಿಂಬದಿಯ ಸೀಟಿನಲ್ಲಿ ಬಾಲಕಿ ಕುಳಿತಿದ್ದಳು. ಟೈರ್ ಬ್ಲಾಸ್ಟ್ ಆದ…

Read More

Pocso | ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ – ಸೋದರ ಮಾವನ ವಿರುದ್ದ ಫೋಕ್ಸೋ ದೂರು ದಾಖಲು

Pocso | ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ – ಸೋದರ ಮಾವನ ವಿರುದ್ದ ಫೋಕ್ಸೋ ದೂರು ದಾಖಲು  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರವಾಗಿ ಬಲಾತ್ಕಾರ ನಡೆಸಿರುವ ಬಗ್ಗೆ ಆಕೆಯ ಸೋದರ ಮಾವನ ವಿರುದ್ಧವೇ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಕಾರ್ಮಿಕರನ್ನು ಒದಗಿಸುವ ಸುನೀಲ್ ಎಂಬುವನಿಂದ ನಿರಂತರ ಬಲಾತ್ಕಾರವಾಗಿರುವ ಬಗ್ಗೆ ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿರುವ ಆರೋಪದಲ್ಲಿ…

Read More

ದೇಶದ ಹಿತದೃಷ್ಟಿಯಿಂದ ಮೋದಿಗೆ ಮತ ನೀಡಬೇಕು – ಬಿ ವೈ ರಾಘವೇಂದ್ರ

ರಿಪ್ಪನ್‌ಪೇಟೆ : ಪ್ರಸಕ್ತ ಕಾಲದಲ್ಲಿ ದೇಶದಲ್ಲಿ ಮೋದಿಯಿಂದ ಅಭಿವೃದ್ದಿಯ ಪರ್ವ ನಡೆಯುತಿದ್ದು ಮತದಾರರು ದೇಶದ ಹಿತದೃಷ್ಠಿಯಿಂದ ಆತ್ಮಾವಲೋಕನ ಮಾಡಿಕೊಂಡು ಮೋದಿಗೆ ಮತ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು. ಪಟ್ಟಣದ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಮತದಾರರ ಆಶೀರ್ವಾದದಿಂದ ಮೂರು ಬಾರಿ ಸಂಸತ್ ಸದಸ್ಯನಾಗಿ ಆಯ್ಕೆ ಆಗಿದ್ದು ಜನಮೆಚ್ಚುವ ಆಭಿವೃದ್ದಿ ಕೆಲಸಗಳಿಗಾಗಿ ಸರ್ಕಾರದ ಹಿರಿಯರಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇನೆ. ಕ್ಷೇತ್ರದಾದ್ಯಂತ ಸಾಕಷ್ಟು ಜನಪರವಾದಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆನುದಾನವನ್ನು…

Read More

ನವೋದಯ ವಿದ್ಯಾಲಯದ 6, 9ನೇ ತರಗತಿ ಫಲಿತಾಂಶ ಪ್ರಕಟ : ಈ ರೀತಿ ಚೆಕ್ ಮಾಡಿಕೊಳ್ಳಿ

ನವೋದಯ ವಿದ್ಯಾಲಯದ 6, 9ನೇ ತರಗತಿ ಫಲಿತಾಂಶ ಪ್ರಕಟ : ಈ ರೀತಿ ಚೆಕ್ ಮಾಡಿಕೊಳ್ಳಿ ನವೋದಯ ವಿದ್ಯಾಲಯ ಸಮಿತಿ, ಎನ್ ವಿಎಸ್ 6 ಮತ್ತು 9 ನೇ ತರಗತಿಗಳಿಗೆ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ, JNVST 2024 ಫಲಿತಾಂಶವನ್ನು navodaya.gov.in ರಂದು ಬಿಡುಗಡೆ ಮಾಡಿದೆ.  ಎನ್ವಿಎಸ್ ಪ್ರವೇಶ ಪರೀಕ್ಷೆಯನ್ನು 6 ನೇ ತರಗತಿಗೆ ನವೆಂಬರ್ 4, 2023 (ಹಂತ 1) ಮತ್ತು ಜನವರಿ 20, 2024 (ಹಂತ 2) ರಂದು ಎರಡು ಹಂತಗಳಲ್ಲಿ ನಡೆಸಲಾಯಿತು. 9…

Read More

ವೃದ್ದೆಯನ್ನು ಹತೈಗೈದು ಹುಂಚದ ಮುತ್ತಿನ ಕೆರೆಯಲ್ಲಿ ಬಿಸಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು – ಬಾಳೂರಿನಲ್ಲಿಯೇ ನಡೆದಿತ್ತು ಹತೈ | Crime News

ವೃದ್ದೆಯನ್ನು ಹತೈಗೈದು ಹುಂಚದ ಮುತ್ತಿನ ಕೆರೆಯಲ್ಲಿ ಬಿಸಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು – ಬಾಳೂರಿನಲ್ಲಿಯೇ ನಡೆದಿತ್ತು ಹತೈ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮಹಿಳೆಯೊಬ್ಬರನ್ನು ಹತೈಗೈದು ಬಿಸಾಡಿದ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಳಲೂರು ಗ್ರಾಮದ ಜಯಮ್ಮ(62) ಎಂಬುವವರನ್ನು ಕೋಡೂರು ನಿವಾಸಿ ಮಯೂರ (24) ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದಾರೆ.ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಡೆದಿದ್ದೇನು ..?? ದಿನಾಂಕ:18/03/2024 ರಂದು ಶಿವಮೊಗ್ಗ…

Read More

ಮಕ್ಕಳಾಗಿಲ್ಲವೆಂದು ಪತಿಯಿಂದ ಕಿರುಕುಳ – ಮನನೊಂದು ನೇಣಿಗೆ ಶರಣಾದ ಮಹಿಳೆ | shivamogga

ಮಕ್ಕಳಾಗಿಲ್ಲವೆಂದು ಪತಿಯಿಂದ ಕಿರುಕುಳ – ಮನನೊಂದು ನೇಣಿಗೆ ಶರಣಾದ ಮಹಿಳೆ | shivamogga   ಶಿವಮೊಗ್ಗ : ಮಕ್ಕಳಾಗಿಲ್ಲ ಎಂಬ ಕಿರುಕುಳಕ್ಕೆ ಮನನೊಂದು ಮಹಿಳೆ ನೇಣಿಗೆ ಶರಣಾದ ಘಟನೆ ನಗರದ ಗಾಡಿಕೊಪ್ಪದ ಮನೆಯೊಂದರಲ್ಲಿ ನಡೆದಿದೆ. ಅಶ್ವಿನಿ (31) ಮೃತ ಮಹಿಳೆ. ಇವರು ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಹಿನ್ನಲೆ ಪತಿ ಅಭಿಷೇಕ್ ಹಾಗೂ ಮನೆಯವರಿಂದ ಕಿರುಕುಳ ಆರೋಪ ಕೇಳಿಬಂದಿದೆ. ಇದರಿಂದ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ…

Read More

ನಟ, ರಂಗಕರ್ಮಿ, ಸಮಾಜ ಸೇವಕ ಯೇಸುಪ್ರಕಾಶ್ (ಹೆಗ್ಗೋಡು ಪ್ರಕಾಶ್) ಇನ್ನಿಲ್ಲ !!! | Yesu Prakash

ನಟ, ರಂಗಕರ್ಮಿ, ಸಮಾಜ ಸೇವಕ ಯೇಸುಪ್ರಕಾಶ್ (ಹೆಗ್ಗೋಡು ಪ್ರಕಾಶ್) ಇನ್ನಿಲ್ಲ ! ಹೊಸನಗರ : ಸಿನಿಮಾ ರಂಗದಲ್ಲಿ ತಮ್ಮದೇ ಚಾಪು ಮೂಡಿಸಿ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ, ರಂಗಕರ್ಮಿ, ಸಮಾಜ ಸೇವಕರಾಗಿ ತಮ್ಮ ಸೇವೆ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದ, ಸಾರ ಸಂಸ್ಥೆಯ ಸಹಯೋಗದಲ್ಲಿ 20ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ಕಲ್ಲುಕೊಪ್ಪ ನಿವಾಸಿ ಯೇಸುಪ್ರಕಾಶ್ (58) ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ…

Read More

Konandur | ನಮ್ಮ ಅಭಿವೃದ್ಧಿ ಕಾರ್ಯಗಳು ಮತದಾರರ ಮನಮುಟ್ಟಿವೆ – ಬಿ ವೈ ರಾಘವೇಂದ್ರ

Konandur | ನಮ್ಮ ಅಭಿವೃದ್ಧಿ ಕಾರ್ಯಗಳು ಮತದಾರರ ಮನಮುಟ್ಟಿವೆ – ಬಿ ವೈ ರಾಘವೇಂದ್ರ ರಿಪ್ಪನ್‌ಪೇಟೆ : ಮುಂಬರುವ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಾಗಿದ್ದು ನಾನು ಮಾಡಿದ ಕಾರ್ಯಗಳು ಮತದಾರರ ಮನಮುಟ್ಟಿವೆ ಎಲ್ಲಾ ಸಮುದಾಯದವರು ಮತದಾರರು ನನಗೆ ಮತ್ತು ಕೇಂದ್ರದ ಮೋದಿಜಿಯವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಸಂಸದ ಶಿವಮೊಗ್ಗ ಲೋಕಸಭಾ ಬಿಜೆಪಿ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ಸಮೀಪದ ಕೋಣಂದೂರಿನ ಶ್ರೀಶಿವಲಿಂಗೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ ಶಿವಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಕೋಣಂದೂರು ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ…

Read More

Anandapura | ಗೌತಮಪುರ ಮಾರಿಕಾಂಬಾ ಜಾತ್ರೆಯಲ್ಲಿ ಬಂದೋಬಸ್ತ್ ನಲ್ಲಿದ್ದ ಪೊಲೀಸರ ಮೇಲೆ ಯುವಕರಿಂದ ಹಲ್ಲೆ..!! ವೀಡಿಯೋ ವೈರಲ್

Anandapura | ಗೌತಮಪುರ ಮಾರಿಕಾಂಬಾ ಜಾತ್ರೆಯಲ್ಲಿ ಬಂದೋಬಸ್ತ್ ನಲ್ಲಿದ್ದ ಪೊಲೀಸರ ಮೇಲೆ ಯುವಕರಿಂದ ಹಲ್ಲೆ..!! ವೀಡಿಯೋ ವೈರಲ್ ಇತ್ತೀಚೆಗೆ ಜನಸಾಮಾನ್ಯರನ್ನು ರಕ್ಷಣೆ ಮಾಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಸದ್ಯ ಪೊಲೀಸರ ಮೇಲೆಯೇ ಕೆಲವು ಪುಂಡರು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ(sagara) ತಾಲೂಕಿನ ಆನಂದಪುರದ(Anandapura) ಗೌತಮಪುರ ಮಾರಿಕಾಂಬಾ ಜಾತ್ರೆಯಲ್ಲಿ ನಡೆದಿದೆ. ಜಾತ್ರೆಯಲ್ಲಿ ಅಂಗಡಿ ಮುಂಗಟ್ಟು ಬಳಿ ಗಲಾಟೆ ಮಾಡುತ್ತಿರುವುದನ್ನು ತಡೆಯಲು ಹೋದ ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಕಿರಣ್ ಎಂಬುವವರ…

Read More

ಸ್ನೇಹಿತನ ಚೇಷ್ಟೆಗೆ ದುರಂತ ಅಂತ್ಯ ಕಂಡ ಡೆಲಿವರಿ ಬಾಯ್ – ತಮಾಷೆ ಮಾಡೋ‌ ಮುನ್ನ ಹುಷಾರ್ | Viral News

ಸ್ನೇಹಿತನ ಚೇಷ್ಟೆಗೆ ದುರಂತ ಅಂತ್ಯ ಕಂಡ ಡೆಲಿವರಿ ಬಾಯ್ – ತಮಾಷೆ ಮಾಡೋ‌ ಮುನ್ನ ಹುಷಾರ್ | Viral News ಬಲೂನ್ ಗೆ ಗಾಳಿ ತುಂಬಿದರೆ ಹೇಗೆ ಊದಿಕೊಳ್ಳುತ್ತೆ ನೋಡಿದ್ದೀರಲ್ವಾ? ಅದೇ ರೀತಿ ಮನುಷ್ಯರಿಗೆ ಗಾಳಿ ತುಂಬಿದ್ರೆ ಹೇಗೆ ಕಾಣ್ತೀವಿ.? ಕಾರ್ಟೂನ್‌ ಚಿತ್ರಗಳ ನೆನಪಾಗುತ್ತೆ. ಅಲ್ವಾ..? ಆದರೆ ಇಲ್ಲೊಬ್ಬ ಸ್ನೇಹಿತನೊಂದಿಗೆ ತಮಾಷೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೈಕ್‌ ಸರ್ವೀಸ್‌ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದವನು ಅರೆಸ್ಟ್‌ ಆಗುವಂತ ಕೆಲಸ ಏನಪ್ಪ ಮಾಡಿದ್ದು ಅನ್ನೋದನ್ನು ನೋಡೋದಾದರೆ, ಈ ಫೋಟೋದಲ್ಲಿ…

Read More