Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Ripponpete | ಅರಸಾಳುವಿನಲ್ಲಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಅರಸಾಳು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದ ಅರಣ್ಯ ಇಲಾಖೆ ಕಛೇರಿಯ ಮುಂಭಾಗದ ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸಾಳು ಅರಣ್ಯ ಇಲಾಖೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ 7.45 ರ ಬೆಂಗಳೂರು – ತಾಳಗುಪ್ಪ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯ ಮಾಹಿತಿ ಇನ್ನೂ ತಿಳಿದುಬಂದಿರುವುದಿಲ್ಲ. ಘಟನೆಯಲ್ಲಿ ವ್ಯಕ್ತಿಯ ರುಂಡ ಮುಂಡ ಬೇರ್ಪಟ್ಟಿದ್ದು ರೈಲಿಗೆ ತಲೆ ಇಟ್ಟು…

Read More

ತಂಗಿಯೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಚೂರಿ ಇರಿದ ಅಣ್ಣ | Crime News

ತಂಗಿಯೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಚೂರಿ ಇರಿದ ಅಣ್ಣ | Crime News ತಂಗಿಯನ್ನು ಪ್ರೀತಿಸುತಿದ್ದ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ. ಶಿರಾಳಕೊಪ್ಪ ನಿವಾಸಿಗಳಾದ ಯುವಕ ಯುವತಿ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು.ಈ ಸಂಬಂಧ ನಿಶ್ಚಿತಾರ್ಥವೂ ನಡೆದಿತ್ತು ಆದರೆ ಯುವತಿಯ ಸಹೋದರನಿಗೆ ಆಕೆ ಪ್ರೀತಿಸಿದ ಯುವಕನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಈ ಕಾರಣಕ್ಕೆ ಹಲವು ಬಾರಿ ವಿರೋದಿಸಿದ್ದನು. ಇದೇ ಕಾರಣಕ್ಕೆ ಗುರುವಾರ ರಾತ್ರಿ ಯುವಕನಿಗೆ ಯುವತಿಯ ಸಹೋದರನೇ ಚಾಕು…

Read More

ಗೋಸಾಗಾಟ ಮಾಡುತಿದ್ದವರ ಮೇಲೆ ಹಲ್ಲೆ – 25 ಜನರ ಮೇಲೆ ಕೊಲೆಯತ್ನ ಕೇಸ್ ದಾಖಲು

ಗೋಸಾಗಾಟ ಮಾಡುತಿದ್ದವರ ಮೇಲೆ ಹಲ್ಲೆ – 25 ಜನರ ಮೇಲೆ ಕೊಲೆಯತ್ನ ಕೇಸ್ ದಾಖಲು ತೀರ್ಥಹಳ್ಳಿ:  ಪಟ್ಟಣದಲ್ಲಿ ಬುಧವಾರ ಸಂಜೆ ಅಕ್ರಮವಾಗಿ ಗೋ ಸಾಗಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ನಡೆದ ನೈತಿಕ ಪೊಲೀಸ್ ಗಿರಿಯಂತಹ ಘಟನೆಯೊಂದರ ಸಂಬಂಧ ಸುಮಾರು 25 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಪಟ್ಟಣದ ಸಮೀಪದ ಕುರುವಳ್ಳಿಯ ಪುತ್ತಿಗೆ ಮಠದ ರಸ್ತೆಯಲ್ಲಿ ಅಶೋಕ ಲೈಲಾಂಡ್‌ ಗಾಡಿಯೊಂದನ್ನ ಅಡ್ಡಗಟ್ಟಿ ಅದರಲ್ಲಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಆರೋಪದ ಅಡಿಯಲ್ಲಿ…

Read More

Ripponpete | ವಿವಿಧಡೆಯಲ್ಲಿ ಶಿವನಾಮ ಸ್ಮರಣೆ

ವಿವಿಧಡೆಯಲ್ಲಿ ಶಿವನಾಮ ಸ್ಮರಣೆ  ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಗುಳಿಗುಳಿ ಶಂಕರೇಶ್ವರ ದೇವಸ್ಥಾನ, ಬೈರಾಪುರ ಉದ್ಭವ ಕಂತೆ ಸಿದ್ದೇಶ್ವರ ದೇವಸ್ಥಾನ ಮತ್ತು ಕೋಡೂರು ಶಂಕರೇಶ್ವರ ದೇವಸ್ಥಾನ,ಬರುವೆ ಕಲಾನಾಥ ರಾಮೇಶ್ವರ ದೇವಸ್ಥಾನ,ಹುಂಚದ ಕಮಟೇಶ್ವರ ದೇವಸ್ಥಾನ,ಹಾಲುಗುಡ್ಡೆಯ ಹಾಲರಾಮೇಶ್ವರ ದೇವಸ್ಥಾನ ಗವಟೂರು ರಾಮೇಶ್ವರದೇವಸ್ಥಾನ,ಕುಕ್ಕಳಲೇ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಇಂದು ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಮುಂಜಾನೆಯಿಂದಲೇ ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ತೆರಳಿ ಶಿವ ನಾಮ ಸ್ಮರಣೆಯನ್ನು  ಜಪಿಸಿದರು. ದೇವಸ್ಥಾನಗಳಲ್ಲಿ ಭಕ್ತರ ಸಮೂಹ ಸರತಿ ಸಾಲಿನಲ್ಲಿ…

Read More

Ripponpete | ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ

ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಧರ್ಮಸಮಾರಂಭ ರಿಪ್ಪನ್‌ಪೇಟೆ ;- ಧಾರ್ಮಿಕ ಆಚರಣೆ ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತವೆಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಮ.ನಿ.ಪ್ರ.ಆಬಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು. ಸಮೀಪದ ಕಾರಗೋಡು ಗ್ರಾಮದಲ್ಲಿ ಕಲಾನಾಥೇಶ್ವರ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮದ ಧರ್ಮಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಜೀವನದಲ್ಲಿ ಸಾಧನೆಯ ಗುರಿ ತಲುಪಲು ಗುರುವಿನ ಕಾರುಣ್ಯ ಅಗತ್ಯ. ಮಹಾ ಶಿವರಾತ್ರಿಯ ದಿನದೊಂದು ಭವವಂತನ ನಾಮಸ್ಮರಣೆ ಪುಣ್ಯದ ಕೆಲಸವನ್ನು ಮಾಡುವುದರಿಂದ ಪುಣ್ಯ…

Read More

ಮೈ ಮೇಲೆ ‘ದೆವ್ವ’ ಬರುತ್ತೆಂದು ಹೆದರಿ ‘ನೇಣಿಗೆ’ ಕೊರಳೊಡ್ಡಿದ ಯುವಕ | Crime News

ಮೈ ಮೇಲೆ ‘ದೆವ್ವ’ ಬರುತ್ತೆಂದು ಹೆದರಿ ‘ನೇಣಿಗೆ’ ಕೊರಳೊಡ್ಡಿದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಹಲವು ಬಲವಾದ ಕಾರಣಗಳಿರುತ್ತವೆ. ಅಲ್ಲದೆ ಮಾನಸಿಕವಾಗಿಯೂ ಹಲವರು ಖಿನ್ನತೆಗೆ ಒಳಗಾಗಿರುತ್ತಾರೆ. ಆದರೆ ಮೈಸೂರಿನಲ್ಲಿ ಯುವಕನೊಬ್ಬ ಮೈಮೇಲೆ ದೆವ್ವ ಬರುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಹೆದರಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು ಘಟನೆಯು ಮೈಸೂರಿನ ಮೈ ಮೇಲೆ ದೆವ್ವ ಬರುತ್ತೆ ಎಂದು ಹೆದರಿ ಯುವಕ ಆತ್ಮಹತ್ಯೆ ಖನ್ನತೆಗೆ ಒಳಗಾಗಿ ಋಷಭೇಂದ್ರ (21) ಎನ್ನುವ ಯುವಕ ಮೈಸೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು…

Read More

ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ ಶಾಕ್ | Traffic fine

ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ ಶಾಕ್ ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ 8200 ರೂ. ದಂಡ ವಿಧಿಸಲಾಗಿದೆ. ಶಿವಮೊಗ್ಗ ನಗರದ ವಿವಿಧ ಸರ್ಕಲ್ ಗಳಲ್ಲಿ ಡಿಸ್ಕವರಿ ಬೈಕ್ ನ್ನು Altration ಮಾಡಿಕೊಂಡು ಮತ್ತು ಬೀಟ್/ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಉಂಟಾಗುವ ರೀತಿಯಲ್ಲಿ ತನ್ನ ವಾಹನವನ್ನು ಚಲಾಯಿಸುತ್ತಿದ್ದಾನೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೂರ್ವ ಸಂಚಾರ ಪೊಲಸ್ ಠಾಣೆಯ ಪಿಎಸ್‌ಐ ನವೀನಕುಮಾರ್ ಮಠಪತಿ ಮತ್ತು ಸಿಬ್ಬಂದಿಗಳಾದ ಸಂತೋಷ ಕೆ,ಹೆಚ್…

Read More

ದೇವ್ರೇ.. ನಮ್ಮತ್ತೆ ಬೇಗ ಸಾಯಬೇಕು, ₹50 ನೋಟಲ್ಲಿ ಬರೆದು ಹರಕೆ ಕಟ್ಟಿಕೊಂಡ ಸೊಸೆ- ಭಾರೀ ವೈರಲ್‌

ದೇವ್ರೇ.. ನಮ್ಮತ್ತೆ ಬೇಗ ಸಾಯಬೇಕು, ₹50 ನೋಟಲ್ಲಿ ಬರೆದು ಹರಕೆ ಕಟ್ಟಿಕೊಂಡ ಸೊಸೆ- ಭಾರೀ ವೈರಲ್‌ ಸಾಮಾನ್ಯವಾಗಿ ಪ್ರಸಿದ್ಧ ದೇಗುಲಗಳಲ್ಲಿ ಆಗಾಗ ಹುಂಡಿ ಎಣಿಕೆ ಕಾರ್ಯ ನಡೆಯುತ್ತಲೇ ಇರುತ್ತದೆ. ಇನ್ನು ಹುಂಡಿ ಎಣಿಕೆ ವೇಳೆ ಹಣದ ಜೊತೆಗೆ ವಿಚಿತ್ರ ಹರಕೆಯ ಪತ್ರಗಳನ್ನು ಭಕ್ತರು ಹಾಕಿರುವುದು ಕಂಡುಬರುತ್ತದೆ. ಇನ್ನು ಇಂತಹ ಪತ್ರಗಳು ಸಾಮಾಜಿಕ ಜಾಲತಣಗಳಲ್ಲಿ ಭಾರೀ ಸದ್ದು ಮಾಡುತ್ತವೆ. ಹಾಗೆಯೇ ಇಂತಹದ್ದೆ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರದಲ್ಲಿ ನಡೆದಿದೆ.ಪ್ರಸಿದ್ಧ ದೇವಾಲಯಗಳ ಹುಂಡಿ ಎಣಿಕೆ…

Read More

ರೈಲಿಗೆ ತಲೆ ಕೊಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ | Crime News

ರೈಲಿಗೆ ತಲೆ ಕೊಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಸಾಗರದ ಸೊರಬ ಗೇಟ್ ಸಮೀಪದಲ್ಲಿ ನಡೆದಿದೆ. ಭೂಮಿಕಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಭೂಮಿಕಾ ಸಿರಿವಂತೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಾಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.  ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Read More

Ripponpete | ಪಿಎಸ್‌ಐ ನಿಂಗರಾಜ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನಾ

Ripponpete | ಪಿಎಸ್‌ಐ ನಿಂಗರಾಜ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನಾ ರಿಪ್ಪನ್‌ಪೇಟೆ : ಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಇಲ್ಲಿನ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿರುವ ಪಿ.ಎಸ್.ಐ ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ಪಥಸಂಚಲ ನಡೆಸುವ ಮೂಲಕ ಗ್ರಾಮದ ಪರಿಚಯವನ್ನು ಮಾಡಿಕೊಂಡರು. ಇಂದು ಬೆಳಗ್ಗೆ ಠಾಣೆಯಿಂದ ಹೊರಟು ವಿನಾಯಕ ವೃತ್ತದ ಮಾರ್ಗದ ಮೂಲಕ ತೀರ್ಥಹಳ್ಳಿ-ಹೊಸನಗರ-ಸಾಗರ-ಶಿವಮೊಗ್ಗ ನಾಲ್ಕು ರಸ್ತೆಯಲ್ಲಿ  ಕಾಲ್ನಡಿಗೆಯ ಮೂಲಕ ಪಥಸಂಚಲನೆ ನಡೆಸಿ  ವಾಹನಗಳ ದಟ್ಟಣೆ ಮತ್ತು ಶಾಲಾ ಕಾಲೇಜ್ ರಸ್ತೆಯಲ್ಲಿ ವಾಹನಗಳ ಸಂಚಾರ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಕುರಿತು…

Read More