Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

RIPPONPETE | ಕಗಚಿ ಬಳಿ ಕಾಡಾನೆ ದಾಳಿ: ತೋಟ–ಗದ್ದೆ ನಾಶ, ಗ್ರಾಮಸ್ಥರಲ್ಲಿ ಆತಂಕ | Elephant attack

ಕಗಚಿ ಬಳಿ ಕಾಡಾನೆ ದಾಳಿ: ತೋಟ–ಗದ್ದೆ ನಾಶ, ಗ್ರಾಮಸ್ಥರಲ್ಲಿ ಆತಂಕ ರಿಪ್ಪನ್ ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗಚಿ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಪಡಿಸಿದ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ. ಕಗಚಿ ಗ್ರಾಮದ ನಿವಾಸಿ ಡಾಕಪ್ಪ ಬಿನ್ ಪುಟ್ಟಪ್ಪ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ ಹಾಗೂ ಬಾಳೆಗಿಡಗಳನ್ನು ಮುರಿದು ಸಂಪೂರ್ಣವಾಗಿ ಹಾನಿಗೊಳಿಸಿದೆ. ಅಲ್ಲದೆ ತೋಟದ ಅಕ್ಕಪಕ್ಕದಲ್ಲಿರುವ ಗದ್ದೆಗಳಿಗೂ ಗಂಭೀರ ಹಾನಿ ಉಂಟಾಗಿದೆ. ಗುರುವಾರ ರಾತ್ರಿ ತಳಲೆ…

Read More

ರಾಜ್ಯದ ಎಲ್ಲಾ ಬಿ-ಖಾತಾಗಳಿಗೆ ಎ-ಖಾತಾ ನೀಡಲು ಸಂಪುಟ ಸಭೆ ತೀರ್ಮಾನ

Karnataka Cabinet has decided to provide A-Khata to all B-Khata properties across the state, benefiting nearly 10 lakh property owners. ರಾಜ್ಯದ ಎಲ್ಲಾ ಬಿ-ಖಾತಾಗಳಿಗೆ ಎ-ಖಾತಾ ನೀಡಲು ಸಂಪುಟ ಸಭೆ ತೀರ್ಮಾನ ಬೆಂಗಳೂರು: ರಾಜ್ಯದ ಎಲ್ಲಾ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ನೀಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ…

Read More

ಮರಕ್ಕೆ ಬೈಕ್ ಡಿಕ್ಕಿ: ಕೋಣಂದೂರಿನ ಆಸ್ಪತ್ರೆ ಸಿಬ್ಬಂದಿ ಸ್ಥಳದಲ್ಲೇ ಸಾವು

A 58-year-old hospital staff from Konandur died on the spot after his bike lost control and hit a tree near Thirale Bailu on Thirthahalli–Koppa main road. ಮರಕ್ಕೆ ಬೈಕ್ ಡಿಕ್ಕಿ: ಕೋಣಂದೂರಿನ ವ್ಯಕ್ತಿ ಸ್ಥಳದಲ್ಲೇ ಸಾವು ತೀರ್ಥಹಳ್ಳಿ: ತಾಲೂಕಿನ ಕೊಪ್ಪ ಮುಖ್ಯರಸ್ತೆಯ ತಿರಳೆಬೈಲು ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ರಸ್ತೆ…

Read More

ಡ್ಯೂಟಿ ನೀಡದೇ ಕಿರುಕುಳ ಆರೋಪ: ಕೆಎಸ್‌ಆರ್‌ಟಿಸಿ ಬಸ್ ಚಾಲಕ ನೇಣಿಗೆ ಶರಣು

A KSRTC bus driver, Nagappa (54), from Tyagarti village in Sagara taluk, Shivamogga district, died after attempting suicide, allegedly due to harassment and denial of duty by the depot manager. ಡ್ಯೂಟಿ ನೀಡದೇ ಕಿರುಕುಳ ಆರೋಪ: ಕೆಎಸ್‌ಆರ್‌ಟಿಸಿ ಬಸ್ ಚಾಲಕ ನೇಣಿಗೆ ಶರಣು ಸಾಗರ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಾಗಪ್ಪ (54) ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ…

Read More

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್ | Space Technology

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್ | Space Technology Special Article | Space Technology | Digital India | ISRO achievement “ISRO ಹಾರಿಸಿದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹದಿಂದ ಟವರ್ ಮತ್ತು ಕೇಬಲ್ ಅಗತ್ಯವಿಲ್ಲದೆ ಕುಗ್ರಾಮಗಳು ಹಾಗೂ ದೂರದ ಪ್ರದೇಶಗಳಿಗೂ ನೇರವಾಗಿ ಮೊಬೈಲ್ ನೆಟ್‌ವರ್ಕ್ ಸಿಗಲಿದೆ. ಭಾರತದಲ್ಲಿ ಡೈರೆಕ್ಟ್ ಟು ಮೊಬೈಲ್ ಸಂವಹನ ಯುಗಕ್ಕೆ ಚಾಲನೆ” ಭೂಮಿಯ ಮೇಲೆ ಮೊಬೈಲ್ ಟವರ್ ನಿರ್ಮಾಣ ಸಾಧ್ಯವಿಲ್ಲದ ಪ್ರದೇಶಗಳಿಗೂ, ಕೇಬಲ್…

Read More

ಹಾಸ್ಟೆಲ್‌ನಲ್ಲಿ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – ಡೆತ್ ನೋಟ್ ಪತ್ತೆ

ಹಾಸ್ಟೆಲ್‌ನಲ್ಲಿ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – ಡೆತ್ ನೋಟ್ ಪತ್ತೆ A medical student pursuing MD Radiology died by suicide in the SIMS hostel . Police found a death note and investigation is underway. ಶಿವಮೊಗ್ಗ, ಜನವರಿ 8: ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ (ಸಿಮ್ಸ್) ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 7ರಂದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ…

Read More

ಚಲಿಸುತ್ತಿದ್ದ ಖಾಸಗಿ ಬಸ್ ಟಯರ್ ಬ್ಲಾಸ್ಟ್: ಬೈಕ್ ಸವಾರನ ತಲೆಗೆ ಕಬ್ಬಿಣದ ತುಂಡು ಬಿದ್ದು ಸಾವು

ಚಲಿಸುತ್ತಿದ್ದ ಖಾಸಗಿ ಬಸ್ ಟಯರ್ ಬ್ಲಾಸ್ಟ್: ಬೈಕ್ ಸವಾರನ ತಲೆಗೆ ಕಬ್ಬಿಣದ ತುಂಡು ಬಿದ್ದು ಸಾವು A tragic road accident occurred at HK Junction when a private bus tyre burst, causing an iron piece to hit a bike rider on the head, resulting in his death. ಭದ್ರಾವತಿ | ಅಪಘಾತ ಸುದ್ದಿ:ಚಲಿಸುತ್ತಿದ್ದ ಖಾಸಗಿ ಬಸ್‌ನ ಟಯರ್ ಬ್ಲಾಸ್ಟ್ ಆದ ಪರಿಣಾಮ, ಬಸ್ ಪಕ್ಕದಲ್ಲೇ ಸಾಗುತ್ತಿದ್ದ…

Read More

ಪೊಲೀಸ್ ಠಾಣೆಯೊಳಗೇ ನೇಣಿಗೆ ಶರಣಾದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್

ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಮೊಹಮದ್ ಝಕ್ರಿಯ ಅವರು ಠಾಣೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ. ಪೊಲೀಸ್ ಠಾಣೆಯೊಳಗೇ ನೇಣಿಗೆ ಶರಣಾದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಶಿವಮೊಗ್ಗ | ಜನವರಿ 8..  ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಠಾಣೆಯೊಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ…

Read More

ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಖಾಸಗಿ ಫೋಟೋ ಪೋಸ್ಟ್ – ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ, ದೂರು ದಾಖಲು

ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯ ಖಾಸಗಿ ಫೋಟೋ ಪೋಸ್ಟ್ – ಡಿಲೀಟ್ ಮಾಡಲು ಹಣಕ್ಕೆ ಬೇಡಿಕೆ, ದೂರು ದಾಖಲು In a shocking cybercrime incident in Shivamogga, a man posted a woman’s private photos on Instagram and demanded money to delete them. A case has been registered at CEN Police Station. ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಅವುಗಳನ್ನು ಅಳಿಸಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ…

Read More

ಹಸಿ ಅಡಿಕೆ ಕಳ್ಳತನ – ಅಡಿಕೆ ಸುಲಿಯುವ ಶೆಡ್‌ನಲ್ಲಿದ್ದ 9 ಚೀಲ ಅಡಿಕೆ ಲೂಟಿ

ಹಸಿ ಅಡಿಕೆ ಕಳ್ಳತನ – ಅಡಿಕೆ ಸುಲಿಯುವ ಶೆಡ್‌ನಲ್ಲಿದ್ದ 9 ಚೀಲ ಅಡಿಕೆ ಲೂಟಿ ಹಾಡಹಗಲೇ ಹಸಿ ಅಡಿಕೆ ಕಳ್ಳತನ ಪ್ರಕರಣ ನಡೆದಿದೆ. ಅಡಿಕೆ ಸುಲಿಯುವ ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದ 25 ಚೀಲಗಳ ಪೈಕಿ ₹1.20 ಲಕ್ಷ ಮೌಲ್ಯದ 9 ಚೀಲ ಸುಲಿದ ಹಸಿ ಅಡಿಕೆಯನ್ನು ಕಳ್ಳರು ಲೂಟಿ ಮಾಡಿದ್ದಾರೆ ಎಂದು ಬೈರೆಗೌಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ…

Read More