Headlines

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ; ಕಂಠಪೂರ್ತಿ ಮದ್ಯ ಕುಡಿಸಿ ಕೊಲೆಗೈದ ಆರೋಪಿಗಳ ಬಂಧನ

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ; ಕಂಠಪೂರ್ತಿ ಮದ್ಯ ಕುಡಿಸಿ ಕೊಲೆಗೈದ ಆರೋಪಿಗಳ ಬಂಧನ

ದಾವಣಗೆರೆ: ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿಸಿದ ಪತ್ನಿ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಇನ್ನಿಬ್ಬರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಎಸ್​ಪಿ ಉಮಾಪ್ರಶಾಂತ್ ಅವರು ಮಾತನಾಡಿದ್ದು, ಮೃತ ಲಿಂಗಪ್ಪ ಅವರ ತಾಯಿ ಯಲ್ಲಮ್ಮ ಎಂಬುವವರು 22 ಜನವರಿ 2024ಕ್ಕೆ ಮಗ ಮನೆಯಿಂದ ಹೋದವನು ಮನೆಗೆ ವಾಪಸ್​ ಬಂದಿಲ್ಲ ಎಂದು ಠಾಣೆಗೆ ದೂರು ನೀಡಿದ್ದರು.

ಅದಾದ ಮೇಲೆ ಆರೋಪಿ ಲಕ್ಷ್ಮಿ (ಲಿಂಗಪ್ಪನ ಹೆಂಡತಿ) ಅವರ ತಾಯಿ ಮಾಲಮ್ಮ ಎಂಬುವವರು 27-1-24 ರಿಂದ ಮಗಳು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು 2024 ಜನವರಿ 31ನೇ ತಾರೀಖು ಪ್ರಕರಣ ದಾಖಲು ಮಾಡಿದ್ದರು ಎಂದಿದ್ದಾರೆ.

ಆರೋಪಿಗಳನ್ನು ಕರೆದುಕೊಂಡು ಬಂದು ವಿಚಾರಸಿದಾಗ ಲಿಂಗಪ್ಪನ ಹೆಂಡತಿ ಲಕ್ಷ್ಮಿಗೆ ಎಂಟು ವರ್ಷವಾದ್ರೂ ಮಕ್ಕಳಾಗಿರುವುದಿಲ್ಲ. ಅಲ್ಲದೇ, ಅವರು ತಿಪ್ಪೇಶ್ ನಾಯ್ಕ ಎಂಬುವವರ ಮನೆಗೆ ಅಡಿಕೆ ಸುಲಿಯುವುದಕ್ಕಾಗಿ ಹೋಗುತ್ತಿರುತ್ತಾರೆ. ಅಲ್ಲಿ ತಿಪ್ಪೇಶ್ ನಾಯ್ಕ ಹಾಗೂ ಲಕ್ಷ್ಮಿಗೆ ಕ್ಲೋಸ್ ಸಂಬಂಧ ಬೆಳೆಯುತ್ತದೆ. ನಂತರ ಗರ್ಭಿಣಿಯಾಗಿದ್ದಾಳೆ. ಅದನ್ನು ತಿಳಿದ ಲಿಂಗಪ್ಪ ಹೆಂಡತಿ ಅಕ್ರಮ ಸಂಬಂಧದಿಂದಾಗಿ ಗರ್ಭಿಣಿಯಾಗಿದ್ದಾಳೆ ಎಂದು ಅವಳ ಹೊಟ್ಟೆಗೆ ಹೊಡೆದಿದ್ದಾನೆ. ಅದಾದ ನಂತರ ಮಗು ಸತ್ತುಹೋಗಿದೆ. ತದನಂತರ ಅವಳು ತಾಯಿ ಮನೆಗೆ ಹೋಗಿದ್ದಾಳೆ ಎಂದು ಎಸ್​​ಪಿ ಘಟನೆಯ ವಿವರ ನೀಡಿದ್ದಾರೆ.