January 11, 2026

PUC ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ರಿಪ್ಪನ್‌ಪೇಟೆಯಲ್ಲಿ ಸನ್ಮಾನ

GridArt_20250717_211330082

PUC ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ರಿಪ್ಪನ್‌ಪೇಟೆಯಲ್ಲಿ ಸನ್ಮಾನ

ರಿಪ್ಪನ್‌ಪೇಟೆ – ಹೊಸನಗರ ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಶೈಕ್ಷಣಿಕ ಸಾಧನೆ ಮಾಡಿರುವ ಶುಭಾ ಆರ್. ರಾವ್ ಎಂಬ ವಿದ್ಯಾರ್ಥಿನಿಯನ್ನು ರಿಪ್ಪನ್‌ಪೇಟೆಯಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಪಟ್ಟಣದ ಶ್ರೀರಾಮ ಮಂದಿರದಲ್ಲಿ ಬ್ರಾಹ್ಮಣ ಸಮಾಜ ಆಯೋಜಿಸಿತ್ತು. ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಎಚ್.ಪಿ. ಸುರೇಶ್ ಅವರು ಮಾತನಾಡಿ ಸಾಧನೆಯ ಹಿಂದಿರುವ ಶ್ರಮವನ್ನು ಸಮಾಜವು ಗುರುತಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿ ಮತ್ತು ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಿದರೆ ಯಾವುದೇ ಹಿನ್ನಲೆ ಅಡ್ಡಿಯಾಗದು. ಪೋಷಕರು ಮಕ್ಕಳ ಆಸಕ್ತಿಗೆ ತಕ್ಕಂತೆ ಬೆಂಬಲ ನೀಡಬೇಕು, ಅದೇ ಅವರು ಮುಂದುವರೆಯುವ ಮಾರ್ಗ” ಎಂದು ಹೇಳಿದರು.

ಅವರು ತಂತ್ರಜ್ಞಾನದ ನಿಯಮಿತ ಬಳಕೆ, ಮಾರ್ಗದರ್ಶನದ ಮಹತ್ವ ಹಾಗೂ ಪೋಷಕರ ಪ್ರೋತ್ಸಾಹವನ್ನು ವಿದ್ಯಾರ್ಥಿಗಳ ಯಶಸ್ಸಿಗೆ ಪ್ರಮುಖ ಅಂಶಗಳಾಗಿದೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಂಟಿ ಕಾರ್ಯದರ್ಶಿ ಪದ್ಮ ಸುರೇಶ್ ಮಾತನಾಡಿ,ಶುಭಾ ರಾವ್ ಅವರ ಸಾಧನೆಯ ಹಿಂದಿರುವ ಪರಿಶ್ರಮ ಹಾಗೂ ಓದಿನ ಮೇಲೆ ತೀವ್ರ ಆಸಕ್ತಿ ನಮಗೆ ಸ್ಪಷ್ಟವಾಗಿದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು, ಮುಂದಿನ ಪೀಳಿಗೆಯವರಿಗೆ ಪ್ರೇರಣೆಯಾದಂತೆ” ಎಂದು ಹೇಳಿದರು.

ಸನ್ಮಾನಿತರ ಪೋಷಕರಾದ ಅಶ್ವತ್ ಎಸ್. ಮತ್ತು ಶೋಭಾ ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬ್ರಾಹ್ಮಣ ಸಮಾಜದ ಪದಾಧಿಕಾರಿಗಳಾದ ಅಮಿತಾ ಬಲ್ಲಾಳ್ (ಕಾರ್ಯದರ್ಶಿ), ಪುರಾಣಿಕ್ ಮತ್ತು ವಾಸುದೇವ ಮಂಗಳೂರ್ಕರ್ (ಉಪಾಧ್ಯಕ್ಷರು), ಶಿವಾನಂದ (ಖಜಾಂಚಿ), ಸವಿತಾ ರಾಧಾಕೃಷ್ಣ ಮತ್ತು ಸೌಮ್ಯ ಅರುಣ್ ಕುಮಾರ್ (ಸಹ ಕಾರ್ಯದರ್ಶಿಗಳು) ಹಾಗೂ ಸಮಾಜದ ಹಲವು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಮಾರಂಭವು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಮುಂದಿನ ಪೀಳಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖ ವೇದಿಕೆಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಮಾಜದ ಪಾತ್ರವನ್ನು ಎತ್ತಿ ತೋರಿಸಿತು.

About The Author