RIPPONPETE | ದಕ್ಷ , ಜನಸ್ನೇಹಿ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಆತ್ಮೀಯ ಬೀಳ್ಕೊಡುಗೆ
ರಿಪ್ಪನ್ ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ದಕ್ಷತೆ ಹಾಗೂ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡ ಇಬ್ಬರು ಅಧಿಕಾರಿಗಳಿಗೆ ಸಾರ್ವಜನಿಕರಿಂದ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಗ್ರಾಮ ಪಂಚಾಯತ್ ಸಭಾಂಗದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಜನಸ್ನೇಹಿ ಪಿಎಸ್ಐಯಾಗಿ ಕರ್ತವ್ಯ ನಿರ್ವಹಿಸಿ ಪ್ತಸ್ತುತ ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪ್ರವೀಣ್ಎಸ್.ಪಿ ಮತ್ತು ಅರಣ್ಯಇಲಾಖೆಯ ರಿಪ್ಪನ್ಪೇಟೆ ವಲಯದಲ್ಲಿ ಡಿಆರ್ಎಫ್ಓ ಆಗಿ ಕರ್ತವ್ಯ ನಿರ್ವಹಿಸಿ ನಗರ ವಲಯದ ನಿಟ್ಟೂರು ಗೆ ವರ್ಗಾವಣೆಯಾಗಿರುವ ಅಕ್ಷಯಕುಮಾರ್ ಆವರಿಗೆ ಸಾರ್ವಜನಿಕರು ಆತ್ಮೀಯವಾಗಿ ಬೀಳ್ಕೊಡಿಗೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಮಾತನಾಡಿ ಸನ್ನಡತೆಯ, ಸರಳ ಸ್ವಭಾವದ, ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಅಧಿಕಾರಿಯಾಗಿರುವ ಪ್ರವೀಣ್ ಎಸ್ ಪಿ ಅವರು ಪಟ್ಟಣದಲ್ಲಿ ಅಧಿಕಾರ ವಹಿಸಿಕೊಳ್ಳುತಿದ್ದಂತೆಯೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳತ್ತ ಗಮಹರಿಸುವ ಮೂಲಕ ಪಟ್ಟಣದ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಿದ್ದರು ಇನ್ನೂ ಡಿಆರ್ ಎಫ಼್ ಓ ಅಕ್ಷಯ್ ಕುಮಾರ್ ಅರಣ್ಯ ಇಲಾಖೆಯಲ್ಲಿ ಬಡವರಿಗೆ ಅನುಕೂಲವಾಗುವಂತಹ ಕಾರ್ಯ ನಿರ್ವಹಿಸಿದ್ದರು ಇವರಿಬ್ಬರಿಗೆ ನಮ್ಮೂರಿನ ಪರವಾಗಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡುತಿದ್ದೇವೆ ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರಿಯಾಗಿ ಮತ್ತೊಮ್ಮೆ ನಮ್ಮೂರಿಗೆ ಸೇವೆ ನೀಡುವಂತಹ ಅವಕಾಶ ಲಭಿಸಲಿ ಎಂದರು.
ಕೆಡಿಪಿ ಸದಸ್ಯ ಆಸೀಫ಼್ ಭಾಷಾ ಮಾತನಾಡಿ ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ನಡೆಯುವ ಗಣಪತಿ ಹಬ್ಬ , ಬಕ್ರೀದ್ , ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಪ್ರವೀಣ್ ರವರ ಚಾಕಚಕ್ಯತೆಯಿಂದ ಸರಾಗವಾಗಿ ನಡೆಸಿದ್ದಾರೆ.ಇನ್ನೂ ಹೃದಯ ಸಂಬಂಧಿತ ಖಾಯಿಲೆಗಳಿಂದ ಬಳಲುತಿದ್ದ ಬಡ ಮಗುವಿನ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅನೇಕ ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಇನ್ನೂ ಅರಣ್ಯ ಇಲಾಖೆಯ ಅಕ್ಷಯ್ ಕುಮಾರ್ ಇಲಾಖೆಯ ಕಠಿಣ ಕಾನೂನಿನ ನಡುವೆಯೂ ಬಡವರ ಪರವಾಗಿ ಹಲವಾರು ಜನಪರ ಕಾರ್ಯಕ್ರಮ ನಡೆಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ತ ಮ ನರಸಿಂಹ ಮಾತನಾಡಿ ಪಟ್ಟಣದ ರಾಜಕೀಯ ಹಾಗೂ ಧಾರ್ಮಿಕ ಸಮತೋಲನ, ಅಕ್ರಮ ಚಟುವಟಿಕೆಗಳ ಮೇಲೆ ಕಡಿವಾಣ, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವ ಮೂಲಕ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ ಕೀರ್ತಿ ಪ್ರವೀಣ್ ರವರಿಗೆ ಸಲ್ಲಬೇಕು ಎಂದರು.
ಸಾರ್ವಜನಿಕರಿಂದ ಆತ್ಮೀಯ ಬೀಳ್ಕೊಡಿಗೆ ಸ್ವೀಕರಿಸಿ ನಂತರ ಮಾತನಾಡಿದ ಪಿಎಸ್ಐ ಪ್ರವೀಣ್ ಎಸ್ ಪಿ ಕರ್ತವ್ಯದ ಅವಧಿಯಲ್ಲಿ ಕಾನೂನು ಬಿಟ್ಟುಯಾವುದೇ ಕಾರ್ಯ ಮಾಡಲು ಸಾಧ್ಯವಿಲ್ಲ ಆದರೆ ಕಾನೂನಿನಡಿಯಲ್ಲಿ ಮಾನವೀಯತೆಯಿಂದ ಬರುವ ದೂರುಗಳಿಗೆ ಪ್ರತಿಕ್ರಿಯಿಸಿ ಅವರಿಗೆ ಪರಿಹಾರ ಕಲ್ಪಿಸಿದಾಗ ಮಾತ್ರ ವೃತ್ತಿ ಗೌರವ ಹೆಚ್ಚಾಗಲು ಸಾಧ್ಯ ಎಂಬುದಕ್ಕೆ ಈ ಭಾಗದ ಜನ ನನ್ನ ಮೇಲಿಟ್ಟಿರುವ ಅಭಿಮಾನ ಸಾಕ್ಷಿಯಾಗಿದೆ. ಇನ್ನೂ ಬಿಡುವಿಲ್ಲದ ಕರ್ತವ್ಯದ ನಡುವೆ ಕೆಲವು ಸಾಮಾಜಿಕ ಕಾರ್ಯಗಳು ಮನಸ್ಸಿಗೆ ಖುಷಿ ನೀಡುತ್ತದೆ ಎಲ್ಲದಕ್ಕೂ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಇನ್ನೂ ರಿಪ್ಪನ್ಪೇಟೆಯಲ್ಲಿ ನಾಗರೀಕರು ನಮ್ಮ ಸೇವಾವಧಿಯಲ್ಲಿ ಮಾಡಿರುವ ಕಾರ್ಯವನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಿರುವುದು ನನಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜನಹಿತ ಕಾರ್ಯ ಮಾಡಲು ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಡಿ.ಆರ್.ಎಫ್.ಓ.ಆಕ್ಷಯಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ ಅರಣ್ಯ ಇಲಾಖೆಯ ವೃತ್ತಿ ಅಲಗಿನ ಕತ್ತಿಯ ಮೇಲೆ ಇದ್ದಂತೆ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಹೌದು ಅನಿಸಿಕೊಳ್ಳುವುದು ಕಷ್ಟ ನನ್ನ ಕಾರ್ಯಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡುವ ಮೂಲಕ ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡೆದು ಉಪಕಾರ ಮಾಡಿರುವುದೇ ನನಗೆ ಇಷ್ಟು ಗೌರವ ದೊರೆಯಲು ಕಾರಣವಾಯಿತು ಎಂದರು.
ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಧನಲಕ್ಷ್ಮಿ ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಡಿ.ಈ,ಮಧುಸೂಧನ್, ಗಣಪತಿ ಗವಟೂರು, ಜಿ.ಡಿ.ಮಲ್ಲಿಕಾರ್ಜುನ, ದೀಪಾಸುದೀರ್, ನಿರೂಪ್ ಕುಮಾರ್,ಅನುಪಮ ರಾಕೇಶ್, ವೇದಾವತಿ, ಸಾರಾಭಿ, ಮಂಜುಳ ಕೇತಾರ್ಜಿರಾವ್, ವನಮಾಲ,ದಾನಮ್ಮ, ಪ್ರಕಾಶಪಾಲೇಕರ್,ಪಿಡಿಓ ನಾಗರಾಜ್, ಕಾರ್ಯದರ್ಶಿ ಮಧುಶ್ರೀ, ಮುಖಂಡರಾದ ಆರ್.ಎನ್.ಮಂಜುನಾಥ್,ಚಿಗುರು ಶ್ರೀಧರ್, ಆರ್.ರಾಘವೇಂದ್ರ, ರವೀಂದ್ರ ಕೆರೆಹಳ್ಳಿ, ನರಸಿಂಹ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ವರ್ಗಾವಣೆಗೊಂಡ ಪಿಎಸ್ಐ ಮತ್ತು ಡಿ.ಆರ್.ಎಫ್ ಕಾರ್ಯವನ್ನು ಪ್ರಶಂಸಿಸಿದರು.