Headlines

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ – ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ

ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ – ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ

ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತಿದ್ದು ಯಾವುದೇ ರೀತಿಯಲ್ಲಿಯೂ ತೊಂದರೆಯಾಗುತ್ತಿಲ್ಲ ಬಿಜೆಪಿ ಪಕ್ಷದ ಮುಖಂಡರು ಶಾಸಕ ಬೇಳೂರು ಗೋಪಾಲಕೃಷ್ಣ ರವರ ಕಾರ್ಯ ವೈಖರಿಯನ್ನು ಸಹಿಸದೇ ಆಸ್ಪತ್ರೆಯ ಬಗ್ಗೆ ನಿರಾಧಾರ ಆರೋಪ ಮಾಡುತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಹೇಳಿದರು.

ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದವರು ಪಟ್ಟಣದ ಆಸ್ಪತ್ರೆಯಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲದೇ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೇ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪ್ರತಿಭಟನೆ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ವಿರೋದ  ಪಕ್ಷದವರು ದುರುದ್ದೇಶದಿಂದ ತಪ್ಪಾಗಿ ಹೇಳಿಕೆ ನೀಡಿ ಶಾಸಕರ ಕಾರ್ಯ ವೈಖರಿಯನ್ನು ಸಹಿಸದೇ ಈ ರೀತಿಯ  ಪ್ರತಿಭಟನೆ ನಡೆಸಿದ್ದಾರೆ ಎಂದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸಾಕಷ್ಟು ಭಾರಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ , ಇದಕ್ಕೆ ಅವರಿಂದ ಸಹಮತವು ವ್ಯಕ್ತವಾಗಿದ್ದೂ ಮುಂದಿನ ಬಾರಿ ಘೋಷಣೆಯಾಗುವ ಸಮುದಾಯ ಆಸ್ಪತ್ರೆಯ ಪಟ್ಟಿಯಲ್ಲಿ ಪಟ್ಟಣಕ್ಕೆ ಮೊದಲ ಆದ್ಯತೆ ಎಂಬ ಭರವಸೆಯೂ ನೀಡಿದ್ದಾರೆ, ಅಸ್ಪತ್ರೆಯ ಅರೋಗ್ಯ ಸಮಿತಿಯ ಸದಸ್ಯರು ಅಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದ್ದು ಈಗಾಗಲೇ ಪ್ರೀಜ್ ಮತ್ತುಜನರೇಟರ್ ಹಾಗೂ ವಾಸಿಂಗ್ ಮಿಷನ್ ಹೀಗೆ ಹತ್ತು ಹಲವು ಮೂಲಭೂತ ಸೌಲಭ್ಯಗಳನ್ನು ಅಸ್ಪತ್ರೆಗೆ ಒದಗಿಸಲಾಗಿದೆ ಎಂದರು.

ಹೊಸನಗರ ತಾಲೂಕ್ ಕೆಡಿಪಿ ಸದಸ್ಯ ಆಸೀಫ಼್ ಭಾಷಾ ಮಾತನಾಡಿ ಬಿಜೆಪಿ ಪಕ್ಷದ ಮುಖಂಡರಿಗೆ ಅಸ್ಪತ್ರೆಯ ಬಗ್ಗೆ ಮಾತನಾಡಲು ನೈತಿಕತೆಯೆ ಇಲ್ಲ ,ಈ ಹಿಂದೆ ಐದು ವರ್ಷಗಳ ಕಾಲ ಅಧಿಕಾರ ಮಾಡಿದ ಶಾಸಕ ಹರತಾಳು ಹಾಲಪ್ಪನವರು ಅಸ್ಪತ್ರೆಗೆ ಒಮ್ಮೆಯೂ ಭೇಟಿ ನೀಡದೆ ಆಸ್ಪತ್ರೆಯ ಸ್ಥಿತಿ ಹದಗೆಟ್ಟಿ ಹೋಗಿತ್ತು , ಆಸ್ಪತ್ರೆಯ ಒಳ ಹೋಗಲು ಹೆಲ್ಮೇಟ್ ಧರಿಸಿ ಹೀಗುವ ಪರಿಸ್ಥಿತಿ ಉಂಟಾಗಿತ್ತು ಈ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಾವುಗಳು ಪ್ರತಿಭಟನೆಯನ್ನು ನಡೆಸಿದ್ದೇವು ಆದರೂ ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಶಾಸಕರು ತಲೆಕೆಡಿಸಿಕೊಂಡಿರಲಿಲ್ಲ ನಮ್ಮ ಶಾಸಕರು ಆಯ್ಕೆಯಾಗಿ ಕೇವಲ ಒಂದು ತಿಂಗಳೊಳಗೆ ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ಮೇಲ್ಚಾವಣಿ ಹಾಕಿಸಿದ್ದಾರೆ , ಇನ್ನೂ ಕಳೆದ ಬಾರಿ ರಿಪ್ಪನ್ ಪೇಟೆಗೆ ಭಾಗಕ್ಕೆ ಅತಿ ಅಗತ್ಯವಿದ್ದ ಸಮುದಾಯ ಆಸ್ಪತ್ರೆಯನ್ನು ಆರಗ ಜ್ಞಾನೇಂದ್ರ ಕೋಣಂದೂರು ಗ್ರಾಮಕ್ಕೆ ಸ್ಥಳಾಂತರ ಮಾಡಿದಾಗ ಈಗ ಪ್ರತಿಭಟನೆ ಮಾಡಿದವರು ಚಕಾರವೆತ್ತಲಿಲ್ಲ ಈಗ ಶಾಸಕರ ಉತ್ತಮ ಕಾರ್ಯ ವೈಖರಿಯನ್ನು ಸಹಿಸದೇ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದರು‌.

ಪತ್ರಿಕಾ ಗೋಷ್ಠಿಯಲ್ಲಿ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಅಧ್ಯಕ್ಷ ಗಣಪತಿ ಗವಟೂರು,ಕೆಡಿಪಿ ಸದಸ್ಯ ಎನ್.ಚಂದ್ರೇಶ್,ಗ್ರಾಪಂ ಸದಸ್ಯ ಡಿ.ಈ.ಮಧುಸೂದನ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್,ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶ್ರೀಧರ್ ಚಿಗುರು , ಪ್ರಕಾಶ ಪಾಲೇಕರ್, ಸಾರಾಬಿ, ನವೀನ ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.