Headlines

ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ಕೃಷಿಕ ಸಾವು | ತಂದೆಯ ಸ್ಥಿತಿ ಕಂಡು ಅಪ್ರಾಪ್ತ ಮಗಳು ವಿಷ ಸೇವನೆ

ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ಕೃಷಿಕ ಸಾವು | ತಂದೆಯ ಸ್ಥಿತಿ ಕಂಡು ಅಪ್ರಾಪ್ತ ಮಗಳು ವಿಷ ಸೇವನೆ

ಮಂಗಳವಾರ ರಾತ್ರಿ ಊಟ ಮಾಡುವಾಗ ಸಾಲಗಾರರ ಕಾಟ ತಾಳಲಾಗುತ್ತಿಲ್ಲ ಎಂದು ಜಗಳವಾಡಿದ್ದಾರೆ ಈ ಸಂಧರ್ಭದಲ್ಲಿ ಮೃತ ವ್ಯಕ್ತಿಯ ತಂದೆ ಅವರನ್ನು ಸಮಾಧಾನ ಪಡಿಸಿದ್ದಾರೆ ನಂತರ  ಮನೆಯಿಂದ ಹೊರಗೆ ಹೋಗಿ ವಿಷ ಸೇವನೆ ಮಾಡಿಕೊಂಡು ಬಂದಿದ್ದಾರೆ.

ರಿಪ್ಪನ್ ಪೇಟೆ : ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲ ಮನೆ ನಿವಾಸಿ ಕೃಷಿಕ  ವೆಂಕಟೇಶ್ (49) ಅವರು ಸಾಲ ಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ವಿಷ ಸೇವಿಸಿದ್ದಕ್ಕೆ ಮನನೊಂದ ಅಪ್ರಾಪ್ತ ಮಗಳು ತಾನೂ ವಿಷ ಸೇವಿಸಿ ಅಸ್ವಸ್ಥಗೊಂಡ ಮನಕಲುಕುವ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಊಟ ಮಾಡುವಾಗ ಸಾಲಗಾರರ ಕಾಟ ತಾಳಲಾಗುತ್ತಿಲ್ಲ ಎಂದು ಜಗಳವಾಡಿದ್ದಾರೆ ಈ ಸಂಧರ್ಭದಲ್ಲಿ ಮೃತ ವ್ಯಕ್ತಿಯ ತಂದೆ ಅವರನ್ನು ಸಮಾಧಾನ ಪಡಿಸಿದ್ದಾರೆ ನಂತರ  ಮನೆಯಿಂದ ಹೊರಗೆ ಹೋಗಿ ವಿಷ ಸೇವನೆ ಮಾಡಿಕೊಂಡು ಬಂದಿದ್ದಾರೆ.

ತಂದೆ ವಿಷ ಕುಡಿದ ವಿಷಯ ತಿಳಿಯುತ್ತಲೇ ಮಗಳು ಅದೇ ಬಾಟಲಿಯಲ್ಲಿ ವಿಷ ಕುಡಿದಿದ್ದಾಳೆ ಕೂಡಲೇ ಇಬ್ಬರನ್ನು ಶಿವಮೊಗ್ಗದ  ಮೆಗಾನ್  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ವೆಂಕಟೇಶ್ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಅಪ್ರಾಪ್ತ ಮಗಳು ಚಿಕಿತ್ಸೆಗೆ ಸ್ಪಂದಿಸುತಿದ್ದು ಚೇತರಿಸಿಕೊಂಡಿದ್ದು ಆಸ್ಪತ್ರೆಯಲ್ಲಿದ್ದಾರೆ.

ಈ ಕುರಿತು ಪುತ್ರ ನೀಡಿದ ದೂರಿನ ಅನ್ವಯ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.