ವೃದ್ಧೆಯ ಸರ ಅಪಹರಣ ಪ್ರಕರಣ – ಇಬ್ಬರು ಸರಗಳ್ಳರ ಬಂಧನ
ಶಿವಮೊಗ್ಗ: ಜೂನ್ 20ರಂದು ಬೆಳಗಿನ ಜಾವ ವೃದ್ಧೆಯೊಬ್ಬರ ಕೊರಳಿನಿಂದ 38 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಚಿಪ್ಸ್ ವ್ಯಾಪಾರಿ ಸಾಗರ್ ಮತ್ತು ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಮಾರಶೆಟ್ಟಿಹಳ್ಳಿ ರಾಕೇಶ್ ಬಂಧಿತ ಆರೋಪಿಗಳು.
ಎನ್.ಆರ್.ಪುರ ಪಟ್ಟಣದ ಕುರುಕುಬಳ್ಳಿ ಬಳಿ 64 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಾಕ್ ಮಾಡುತ್ತಿದ್ದರು . ಆವೇಳೆ ಇಬ್ಬರು ಕಳ್ಳರು ವೃದ್ಧೆಯ ಕೊರಳಿನಲ್ಲಿದ್ಧ 38 ಗ್ರಾಂ ತೂಕದ ಬಂಗಾರದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕಳ್ಳರನ್ನು ಬಂಧಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರಿಗೆ ಕಳ್ಳರು ವಿವಿದೆಡೆ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಪೊಲೀಸರು ಬಂಧಿತರಿಂದ ಭದ್ರಾವತಿಯಲ್ಲಿ ಕಳವು ಮಾಡಲಾಗಿದ್ದ ಒಂದು ಮೋಟರ್ ಸೈಕಲ್ ಹಾಗೂ ವಿವಿಧೆಡೆ ಕಳವು ಮಾಡಲಾಗಿದ್ದ ಒಟ್ಟು 7.50 ಲಕ್ಷ ರೂಪಾಯಿ ಮೌಲ್ಯದ 69 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.