ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ

ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ

ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ

ಎಲ್ಲಾ ದಾಖಲೆಗಳು ಪಾರದರ್ಶವಾಗಿರುವುದರಿಂದ ಯಾವುದೇ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ. ಕತಾರ್ ನಿಂದ ಹಣ ವರ್ಗಾವಣೆ ಕುರಿತು ಪ್ರಶ್ನೆ ಕೇಳಿದರು ಅದರ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.

ಸಾಗರ: ಸಾಗರದ ಕೆಳದಿ ರಸ್ತೆಯಲ್ಲಿರುವ ನಗರ  ಸಭಾ ಸದಸ್ಯ ಟಿಪ್​ ಟಾಪ್​ ಬಷೀರ್ ರವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ರೇಡ್​ ನಡೆಸಿದ್ದಾರೆ.

ಒಟ್ಟು 7 ಅಧಿಕಾರಿಗಳು ಸಾಗರದ ಬಷೀರ್​ ಮನೆಯಲ್ಲಿ 18 ಗಂಟೆಗಳ ಕಾಲ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಂತರ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಬಷೀರ್​​ರವರಿಗೆ ನೋಟಿಸ್ ಕೊಟ್ಟು ಬುಧವಾರ ಬರುವಂತೆ  ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಷೀರ್ ಇ ಡಿ ಅಧಿಕಾರಿಗಳು  ಹೋಟೆಲ್ ವ್ಯವಹಾರದ ಬಗ್ಗೆ ಹಾಗೂ ಅದರಲ್ಲಿ  ಪಾಲುದಾರಿಕೆ ಹೊಂದಿದ್ದ ನಾವುಂದ ಇಕ್ಬಾಲ್ ಅವರ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ​

ಈ ಬಗ್ಗೆ ಮಾತನಾಡಿರುವ ಉದ್ಯಮಿ ಬಶೀರ್  ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಲ್ಲಾ ದಾಖಲೆಗಳು ಪಾರದರ್ಶವಾಗಿರುವುದರಿಂದ ಯಾವುದೇ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ. ಕತಾರ್ ನಿಂದ ಹಣ ವರ್ಗಾವಣೆ ಕುರಿತು ಪ್ರಶ್ನೆ ಕೇಳಿದರು ಅದರ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.

Leave a Reply

Your email address will not be published. Required fields are marked *