w
Headlines
Home » RIPPONPETE | ಮನೆ ಬೀಗ ಮುರಿದು ಚಿನ್ನಾಭರಣ ,ನಗದು ಕಳ್ಳತನ

RIPPONPETE | ಮನೆ ಬೀಗ ಮುರಿದು ಚಿನ್ನಾಭರಣ ,ನಗದು ಕಳ್ಳತನ

GridArt 20250615

RIPPONPETE | ಮನೆ ಬೀಗ ಮುರಿದು ಚಿನ್ನಾಭರಣ ,ನಗದು ಕಳ್ಳತನ

ಕೊಠಡಿಯೊಳಗಿನ ಗಾಡ್ರೇಜ್ ಬೀರ್ ಮುರಿದು ಅದರಲ್ಲಿದ್ದ ಸುಮಾರು ಸುಮಾರು 3 ಗ್ರಾಂ ಚಿನ್ನಾಭರಣ,30 ಸಾವಿರ ರೂ ಮೌಲ್ಯದ ವಜ್ರದ ಹರಳು ಹಾಗೂ ಸುಮಾರು 26 ಸಾವಿರಕ್ಕೂ ಅಧಿಕ ನಗದು ಕಳ್ಳತನವಾಗಿರುವ ವಿಚಾರ ತಿಳಿದಿದೆ.

ರಿಪ್ಪನ್‌ಪೇಟೆ : ತೀರ್ಥಹಳ್ಳಿ ರಸ್ತೆಯ ಎಸ್ ಆರ್ ಕನ್ವೆನ್ಷನ್ ಹಾಲ್ ಸಮೀಪದಲ್ಲಿ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ ವೇಳೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ನಡೆದಿದೆ.

ತೀರ್ಥಹಳ್ಳಿ – ರಿಪ್ಪನ್ ಪೇಟೆ ಹೆದ್ದಾರಿಯಲ್ಲಿರುವ ಅಬ್ಬಾಸ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು ಅಬ್ಬಾಸ್ ಕುಟುಂಬದವರು ಶನಿವಾರ ಮಧ್ಯಾಹ್ನ ಸಾಗರದ ಕುಟುಂಬಸ್ಥರ ಮನೆಗೆ ತೆರಳಿದಾಗ ಈ ಘಟನೆ ನಡೆದಿದೆ.

ಶನಿವಾರ ರಾತ್ರಿ ಮನೆಗೆ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದು ಹಾಕಿರುವುದು ಕಂಡುಬಂದಿತ್ತು ತಕ್ಷಣ ಮನೆಯೊಳಗೆ ಹೋಗಿ‌ ನೋಡಿದಾಗ ಕೊಠಡಿಯೊಳಗಿನ ಗಾಡ್ರೇಜ್ ಬೀರ್ ಮುರಿದು ಅದರಲ್ಲಿದ್ದ ಸುಮಾರು ಸುಮಾರು 3 ಗ್ರಾಂ ಚಿನ್ನಾಭರಣ,30 ಸಾವಿರ ರೂ ಮೌಲ್ಯದ ವಜ್ರದ ಹರಳು ಹಾಗೂ ಸುಮಾರು 26 ಸಾವಿರಕ್ಕೂ ಅಧಿಕ ನಗದು ಕಳ್ಳತನವಾಗಿರುವ ವಿಚಾರ ತಿಳಿದಿದೆ.

ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ರಿಪ್ಪನ್‌ಪೇಟೆ ಪೊಲೀಸ್ ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.