RIPPONPETE | ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತ – ಓರ್ವ ಸ್ಥಳದಲ್ಲಿಯೇ ಸಾವು

ರಿಪ್ಪನ್ ಪೇಟೆ : ಕರು ತಪ್ಪಿಸಲು ಹೋಗಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ಮೂಗೂಡ್ತಿಯಲ್ಲಿ ನಡೆದಿದೆ.
ಮೂಗೂಡ್ತಿ ನಿವಾಸಿ ಅರುಣ್(38) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಮೂಗೂಡ್ತಿ ಅರಣ್ಯ ಇಲಾಖೆಯ ಕಛೇರಿ ಮುಂಭಾಗದಲ್ಲಿ ಎದುರಿಗೆ ಬಂದ ಕರುವನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಈ ಅಪಘಾತದಲ್ಲಿ ಕರುವು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಮೂಗೂಡ್ತಿ ಗ್ರಾಮದ ರುದ್ರಪ್ಪಗೌಡ ರವರ ಪುತ್ರನಾದ ಅರುಣ್ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.


