ಬಿ ವೈ ವಿಜಯೇಂದ್ರ ಕಾರಿಗೆ ಲಾರಿಗೆ ಡಿಕ್ಕಿ – ನಡೆದಿದ್ದೇನು.!!?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ನಿನ್ನೆ ರಾತ್ರಿ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ (ಶುಕ್ರವಾರ) ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಡ್ರೈವರ್ ವಿರುದ್ಧ ಕೇಸ್ ಮಾಡಿದ್ದಾರೆ. ಇನ್ನು, ಪಕ್ಷದ ಕಡೆಯಿಂದ ವಿಜಯೇಂದ್ರ ಅವರಿಗೆ ನೀಡಲಾದ ಅಧಿಕೃತ ಕಾರು ಇದಾಗಿತ್ತು ಎಂದು ತಿಳಿದುಬಂದಿದೆ.
ವಿಜಯೇಂದ್ರ ಅವರು ತಮ್ಮ ಪರ್ಸನಲ್ ಕಾರಿನಲ್ಲಿ ಇದ್ದರು. ಪಕ್ಷ ನೀಡಿದ್ದ ಕಾರಿನಲ್ಲಿ ವಿಜಯೇಂದ್ರ ಅವರ ಫೋಟೋಗ್ರಾಫರ್ ಮತ್ತು ಪಿಎ ಸಂಚರಿಸುತ್ತಿದ್ದರು. ಚಿಕ್ಕಮಗಳೂರಿನಿಂದ ಶಿಖಾರಿಪುರ ತೆರಳುವ ವೇಳೆ ಆಯಕ್ಸಿಡೆಂಟ್ ಆಗಿದೆ.
ಬೀರೂರು ಮೂಲದ ಹರೀಶ್ ಎಂಬುವರಿಗೆ ಸೇರಿದ ಲಾರಿ ಮರದ ಪೀಸ್ ತುಂಬಿಕೊಂಡು ಚಿಕ್ಕಮಗಳೂರು ನಗರದಿಂದ ಮುಂಬಯಿಗೆ ತೆರಳುತ್ತಿತ್ತು. ಸದ್ಯ ಪೊಲೀಸರು ಕಾರು ಸೇರಿದಂತೆ ಲಾರಿಯನ್ನು ಸಹ ಗ್ರಾಮಾಂತರ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.
ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಅವರು ಅಪಘಾತದಿಂದ ಆಗಿದ್ದಾರೆ. ಅಂತೆಯೇ ಅಪಘಾತಕ್ಕೀಡಾದ ವಿಜಯೇಂದ್ರಗೆ ಸೇರಿದ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊರ ಜಿಲ್ಲೆಗಳಿಗೆ ತೆರಳುವಾಗ ವಿಜಯೇಂದ್ರ ಅವರು ಇದೇ ಕಾರನ್ನು ಬಳಸುತ್ತಿದ್ದರು. ಆದರೆ, ಅದೃಷ್ಟವಶಾತ್ ಇಂದು ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.