w
Headlines
Home » Hosanagara | ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿ ವಶಕ್ಕೆ

Hosanagara | ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿ ವಶಕ್ಕೆ

Hosanagara | ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿ ವಶಕ್ಕೆ

ಹೊಸನಗರ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫ಼ಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪಿಎಸ್‌ಐ ಶಿವಾನಂದ್ ಕೆ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದ್ದಾರೆ.

ಸೋಮವಾರ ರಾತ್ರಿ ಖಚಿತ ಮಾಹಿತಿಯ ಹಿನ್ನಲೆಯಲ್ಲಿ  ಪಟ್ಟಣದ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಮರಳು ತುಂಬಿಕೊಂಡು ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದುಮ್ಮ ವಿಶ್ವನಾಥ್ , ದುಮ್ಮ ಮಹೇಶ್ ,ವಿಜೇಂದ್ರ ಹರಿದ್ರಾವತಿ ,ವಿಜೇತ ಹಾಗೂ  ಮಂಜುನಾಥ್ ಸಾಗರ ಎಂಬುವವರಿಗೆ ಸೇರಿದ  ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳದ ಅವಿನಾಶ್ , ಗಂಗಪ್ಪ ,ಗೋಪಾಲಕೃಷ್ಣ ಹಾಗೂ ಸುನೀಲ್ ಇದ್ದರು

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.