ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ

ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ

ಹೊಸನಗರ : ತಾಲ್ಲೂಕಿನ  ನಗರ ವಲಯಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿ ಕಾಲು ತಲೆ ಮಾಂಸವನ್ನು ಬಿಡಿಸಿ ಕಾರಿನಲ್ಲಿ ಅಕ್ರಮ ಸಾಗಾಣಿಕೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅರೋಪಿಗಳು ನಾಪತ್ತೆಯಗಿದ್ದು  ಅರೋಪಿಗಳ ಪತ್ತೆ ಹಚ್ಚುವಲ್ಲಿ ನಗರ ವಲಯ ಅರಣ್ಯದಿಕಾರಿಗಳ ತಂಡ ಯಶ್ವಸಿಯಾಗಿದೆ.

ಆರೋಪಿಗಳಾದ ಮಹ ಮ್ಮದ್ ಆಶ್ರಫ್ ಮುಂಡಳ್ಳಿ ವಾಸಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಎ೨) ಯಾಸೀನ್, ಹಣಬರಕೇರಿ, ಶಿರೂರು ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ ಎ೩) ವಾಸೀಮ್ ಅಕ್ರಂ ಮದ್ದೋಡಿ ರೋಡ್, ಜೋಗೂ ಕ್ರಾಸ್, ಶಿರೂರು ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ, ರವರನ್ನು ಬಂಧಿಸಿದ್ದು ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿ ಕೊಂಡಿದ್ದು ಶೋಧಕಾರ್ಯ ನಡೆದಿರುತ್ತದೆ,

ಮೋಹನ್ ಕುಮಾರ್ ಡಿ, ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಗರ ವಿಭಾಗ ಸಾಗರ ರವರ ಮಾರ್ಗದರ್ಶನದಲ್ಲಿ ಮೋಹನ್ ಕುಮಾರ್ ಕೆ.ಬಿ, ಸಹಾಯಕ ಅರಣ್ಯ ಸಂರಕ್ಷಣಾದಿಕಾರಿಗಳು, ಹೊಸನಗರ ಉಪವಿಭಾಗರವರ  ಮಾರ್ಗ ದರ್ಶನದಲ್ಲಿ ಅರೋಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಒಪ್ಪಿಸಲಾಗಿದೆ ಎಂದು ನಗರ ವಲಯ ಅರಣ್ಯಧಿಕಾರಿ ಸಂತೋಷ ಮಲ್ಲನಗೌಡ್ರ ತಿಳಿಸಿದರು.

ದಿನಾಂಕ:೦೮.೦೧.೨೦೨೫ ರಂದು ಸುಮಾರು ೩ ಗಂಟೆ ಬೆಳಗಿನ ಜಾವ ಸಂಪೆಕಟ್ಟೆ ಶಾಖೆಯ ಹೊಸೂರು ಗ್ರಾಮದ ಸರ್ವೆ ನಂ-೪ ರ ಮತ್ತಿಕ್ಕೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಒಂದು ಹೆಣ್ಣು ಕಾಡುಕೋಣ ಅಂದಾಜು ವಯಸ್ಸು ೪ರಿಂದ ೫ ವರ್ಷ ನ್ನು ಬೇಟೆಯಾಡಿ ಕಾಲು ತಲೆ ಮಾಂಸವನ್ನು ಬಿಡಿಸಿ ಕಾರಿನಲ್ಲಿ ಸಾಗಾಣಿಕೆ ಮಾಡಿರುವ ಬಗ್ಗೆ ದಾಖಲಾದ ವನ್ಯಜೀವಿ ಪ್ರಕರಣ ದಾಖಲಾದ ಸಂಬಧ ಆರೋಪಿಗಳು ನಾಪತ್ತೆಯಾಗಿದ್ದು,
ನಗರ ವಲಯದ ವಲಯ ಅರಣ್ಯಾಧಿಕಾರಿ ಸಂತೋಷ ಮಲ್ಲನಗೌಡ್ರ ಹಾಗೂ ಹೊಸನಗರ ವಲಯ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಗಳು ಕಾರ್ಯಚರಣೆ ನೆಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂದರ್ಭದಲ್ಲಿ ಆರೋಪಿಗಳ ಪತ್ತೆಗಾಗಿನಗರ ವಲಯದ ಉಪವಲಯ ಅರಣ್ಯಾಧಿಕಾರಿಗಳಾದ ಸತೀಶ ನರೇಂದ್ರ ಕುಮಾರ್ ಟಿ.ಪಿ, ಅಮೃತ್ ಸುಂಕದ್, ರಾಘ ವೇಂದ್ರ ತೆಗ್ಗಿನ್, ರಾಜೇಂದ್ರ ಜಿ.ಡಿ, ಗಸ್ತು ಅರಣ್ಯ ಪಾಲಕರಾದ ಮನೋಜ್ ಕುಮಾರ್ ಕನೇರಿ, ಯೋಗ ರಾಜ್ ಜೆ, ಎ.ವಿ ಮನೋಜ್, ಸುಬ್ಬಣ್ಣ, ಸತೀಶ್ ಬಿ, ದಿವಕರ್ ಬಿ.ಎಸ್, ಅರಣ್ಯ ವೀಕ್ಷಕ ಸಂಗಪ್ಪ ವಾಹನ ಚಾಲಕ ರಾಮು ಗಾಣಿಗ ಹಾಗೂ ಹೊಸನಗರ ವಲಯ ಸಿಬ್ಬಂದಿ ಯವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *