ಮುಂದುವರೆದ ವರುಣನ ಆರ್ಭಟ : ಮಾವಿನಸರ ,ಕೆದಲುಗುಡ್ಡೆಯಲ್ಲಿ ಮನೆ ಹಾನಿ, ಚಿಕ್ಕಜೇನಿಯಲ್ಲಿ ಮನೆ ಮೇಲೆ ಉರುಳಿದ ಮರ – ಶಾಸಕರ ಪರವಾಗಿ ಆರ್ಥಿಕ ನೆರವು | Rain
ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಭಾರಿ ಮಳೆಗೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಮನೆ ಹಾನಿಯಾಗಿರುವ ಘಟನೆ ನಡೆದಿದೆ. ವಿಷಯ ತಿಳಿಯುತಿದ್ದಂತೆ ಶಾಸಕರ ಸೂಚನೆಯ ಮೇರೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ತೆರಳಿ ಸಂತ್ರಸ್ಥರಿಗೆ ಧೈರ್ಯ ತುಂಬಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡುತಿದ್ದಾರೆ.
ಘಟನೆ 1:
ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಕ್ಕಲಳೆ(ಮಾವಿನಸರ) ಗ್ರಾಮದ ಸಾವಿತ್ರಮ್ಮ ರವರ ಮನೆ ಬಾರಿ ಮಳೆ ಯಿಂದಾಗಿ ಗೋಡೆ ಕುಸಿತವಾಗಿತ್ತು.
ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಸಾವಿತ್ರಮ್ಮ ಕುಟುಂಬದವರಿಗೆ ಸಾಂತ್ವನ ಹೇಳಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡೀ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಪ್ರವೀಣ್ ಎಸ್ ಪಿ, ಕಂದಾಯ ಇಲಾಕೆಯ ಅಂಬಿಕಾ ಮುಖಂಡರಾದ ಗಣಪತಿ.ಹೆಚ್.ಎಸ್, ಚಿಂತು, ರಾಘವೇಂದ್ರ , ಚೇತನ್ ದಾಸ್ ಹೊಸಮನೆ, ಇನ್ನಿತರರಿದ್ದರು
ಘಟನೆ 2 :
ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೆದಲುಗುಡ್ಡೆ ಗ್ರಾಮದ ಯಶಸ್ವಿನಿ ಎಂಬುವವರ ಮನೆ ಭಾರಿ ಮಳೆಗೆ ಕುಸಿದು ಹಾನಿಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಯಶಸ್ವಿನಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಗಣಪತಿ , ದಿವಾಕರ್ ಹಾಗೂ ಇನ್ನಿತರರಿದ್ದರು.
ಘಟನೆ 3 :
ರಿಪ್ಪನ್‌ಪೇಟೆ ಪಟ್ಟಣದ ಶಿವಮಂದಿರ ಮುಂಭಾಗದಲ್ಲಿ ಭಾರಿ ಮಳೆಗೆ ಗುರುವಾರ ರತ್ನಮ್ಮ ಎಂಬುವವರ ಮನೆ ಕುಸಿತವಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ರತ್ನಮ್ಮ ನವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ,ಗ್ರಾಪಂ ಸದಸ್ಯ ಗಣಪತಿ ಗವಟೂರು ಹಾಗೂ ರಾಘು , ಚೇತನ್ ದಾಸ್ ಇದ್ದರು.
ಘಟನೆ 4 :
ಚಿಕ್ಕಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ರಾಘವೇಂದ್ರ ಭಂಡಾರಿ ಬಿನ್ ರಾಮಕೃಷ್ಣ ಭಂಡಾರಿ ಅವರ ಮನೆ ಮೇಲೆ ಬಾರಿ ಮಳೆಗೆ ಬೃಹತ್ ಮರ ಬಿದ್ದು ಮನೆ ಹಾನಿಯಾಗಿತ್ತು.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ರಾಘವೇಂದ್ರ ಭಂಡಾರಿ ಕುಟುಂಬದವರಿಗೆ ಸಾಂತ್ವನ ಹೇಳಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು. ಕೂಡಲೇ ಜೆಸಿಬಿ ಮೂಲಕ ಮನೆ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಾದ ಶಶಿ ಗಾರ್ಡ್, ಚಿಕ್ಕಜೀನಿ ಗ್ರಾಮ ಪಂಚಾಯತ್ ಸದಸ್ಯರಾದ ವೀರಭದ್ರಪ್ಪ ಗೌಡ್ರು ಹೊಸಹಳ್ಳಿ, ಯೋಗೇಂದ್ರ ಭಂಡಾರಿ,MPM ವಾಚರ್ ಚಂದ್ರಪ್ಪ , ಯಲ್ಲಪ್ಪ, ಚೇತನ್ ದಾಸ್ ಹೊಸಮನೆ ಇನ್ನಿತರ ಉಪಸ್ಥಿತರಿದ್ದರು.