POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಒಂದೇ ಕುಟುಂಬದ ಮೇಲೆ ಎರೆಡೆರಡು ಬಾರಿ ಹೆಜ್ಜೇನು ದಾಳಿ – ಏಳು ಮಂದಿಗೆ ಗಾಯ , ಓರ್ವನ ಸ್ಥಿತಿ ಗಂಭೀರ

Screenshot 20241027 174724 Chrome.jpg

ಒಂದೇ ಕುಟುಂಬದ ಮೇಲೆ ಎರೆಡೆರಡು ಬಾರಿ ಹೆಜ್ಜೇನು ದಾಳಿ – ಏಳು ಮಂದಿಗೆ ಗಾಯ , ಓರ್ವನ ಸ್ಥಿತಿ ಗಂಭೀರ

ಹೊಸನಗರ : ಒಂದೇ ಕುಟುಂಬದ ಮೇಲೆ ಎರಡೆರಡು ಬಾರಿ ಹೆಜ್ಜೇನು ದಾಳಿಯಾಗಿ 7 ಮಂದಿ ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಶನಿವಾರ ನಡೆದಿದೆ.

ಶನಿವಾರ ಬೆಳಗ್ಗೆ ಚಿಕ್ಕಪೇಟೆ ಸೇತುವೆ ಬಳಿಯ ಬಾಷಾ ಎಂಬುವವರ ಮನೆ ಸಮೀಪ ಬಾಷಾ, ಅವರ ಪತ್ನಿ ಆಸ್ಮಾ, ಇಬ್ಬರು ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಿ ನಾಲ್ವರಿಗೆ ಚಿಕಿತ್ಸೆ ನೀಡಲಾಯಿತು.

ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಹೆಜ್ಜೇನು ಮತ್ತೆ ದಾಳಿ ನಡೆಸಿದೆ. ಬೆಳಗ್ಗೆ ದಾಳಿಗೆ ಒಳಗಾಗಿದ್ದ ಬಾಷಾ ಪುತ್ರ ಆರೀಫ್ ಮೇಲೆ, ಪಕ್ಕದ ಮನೆ ಯಾಸಿನ್ ಮೇಲೆ ಮತ್ತೆ ಹೆಜ್ಜೇನು ದಾಳಿ ನಡೆಸಿದೆ. ಈ ವೇಳೆ ಹಾಸಿಗೆ ದುರಸ್ತಿಗಾಗಿ ಬಂದಿದ್ದ ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ (68) ಮತ್ತು ಅವರ ಪುತ್ರ ಬಾಬಾ ಸಾಬ್ ಎಂಬುವವರ ಮೇಲೆ ಕೂಡ ಹೆಜ್ಜೇನು ದಾಳಿ ನಡೆಸಿದೆ.

ವೃದ್ಧ ಹುಸೇನ್ ಸಾಬ್ ಮೇಲೆ ತೀವ್ರ ದಾಳಿಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಭಾರೀ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಸ್ಥಳೀಯರ ಸಹಕಾರದಿಂದ ಅವರ ದೇಹದಿಂದ 500ಕ್ಕೂ ಹೆಚ್ಚು ಮುಳ್ಳು ಹೊರತೆಗೆಯಲಾಗಿದೆ. ಬಳಿಕ ಹೊಸನಗರ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.