ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ್ ನಲ್ಲಿ ಕಣ್ಮನ ಸೆಳೆಯುವ ಪಟ್ಟಣಗೊಂಬೆ ಪ್ರದರ್ಶನ

ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪುರ ಪಟ್ಟಣದ ಮಾಜಿ ಪುರಸಭೆ ಸದಸ್ಯರಾದ ಎಂ ವಿ ಪದ್ಮಾ ರವರು ದಸರಾ ಗೊಂಬೆ ಕೂರಿಸುವ ಮೂಲಕ ಮೈಸೂರು ಭಾಗದಲ್ಲಿದ್ದ ಸಂಪ್ರದಾಯವನ್ನು ಹಾವೇರಿ ಜಿಲ್ಲೆಗೂ ವಿಸ್ತರಿಸಿದ್ದಾರೆ.

ಹೌದು. ಸುಮಾರು 3 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿರುವ ಇವರು ನವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇವರ ಮನೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಕೂರಿಸಿದ್ದು ಪ್ರತಿನಿತ್ಯ ಸಂಜೆ ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ವಿಷ್ಣುವಿನ ದಶಾವತಾರಗಳು, ರಾಮಾಯಣ, ಮಹಾಭಾರತ ಸಂಗೀತೋಪಕರಣಗಳು, ವಿವಿಧ ಹಣ್ಣುಗಳು ತರಕಾರಿಗಳ ಗೊಂಬೆಗಳು ಗಮನ ಸೆಳೆಯುತ್ತವೆ. ಅದರಲ್ಲೂ ಹಲವು ತರದ ಪಕ್ಷಿಗಳ ಗೊಂಬೆಗಳು ಪಕ್ಷಿಲೋಕವನ್ನೇ ಅನಾವರಣಗೊಳಿಸಿವೆ. ಸವದತ್ತಿ ಯಲ್ಲಮ್ಮ,ಯಡೆಯೂರು ಸಿದ್ದಲಿಂಗೇಶ,ಪಂಡಿತ ಪುಟ್ಟರಾಜ ಗವಾಯಿಗಳು ಸೇರಿದಂತೆ ವಿವಿಧ ಮೂರ್ತಿಗಳ ನೋಡುಗರಲ್ಲಿ ಭಕ್ತಿಭಾವ ಹುಟ್ಟಿಸುತ್ತವೆ. ಶಿವ ವಿಷ್ಣು, ವಿಘ್ನೇಶ್ವರ,ಬ್ರಹ್ಮ ಗೌರಿ ಪಾರ್ವತಿ ಕೃಷ್ಣ ಸೇರಿದಂತೆ ವಿವಿಧ ದೇವಾನುದೇವತೆಗಳ ಮೂರ್ತಿಗಳು ಆಕರ್ಷಣೀಯವಾಗಿವೆ.

ಪದ್ಮಾ ಹಿರೇಮಠ ಮೂಲತಃ ತುಮಕೂರಿನವರು. ಅವರು ಮದುವೆಯಾಗಿ ಬಂದಾಗ ತವರು ಮನೆಯವರು ಒಂದು ಗಂಡು ಮತ್ತು ಒಂದು ಹೆಣ್ಣು ಗೊಂಬೆಗಳನ್ನು ಉಡುಗೂರೆಯಾಗಿ ನೀಡಿದ್ದಾರೆ.

ಗೊಂಬೆ ನೋಡಲು ಬರುವ ಮಹಿಳೆಯರು ಗೊಂಬೆಗಳಿಗೆ ಅಕ್ಷತೆ ಹಾಕಿ ಆರತಿ ಮಾಡಿ ಭಕ್ತಿ ಬಾವದಿಂದ ನಮಸ್ಕರಿಸಿ ದೈವಿಭಾವನೆ ಕಾಣುತ್ತಾರೆ.

ಈದಿನ ದುರ್ಗಾಷ್ಟಮಿ ನಿಮಿತ್ಯ ಬಾಲ ಮಕ್ಕಳಿಗೆ ಉಡಿ ತುಂಬವ ಕಾರ್ಯಕ್ರಮ ಬಾಲ ಮುತ್ತೈದೆಯರಿಗೆ ಭಕ್ತಿಯಿಂದ ಉಡಿ ತುಂಬಿ ಮಕ್ಕಳಿಗೆ ನಮಸ್ಕರಿಸಿದರು

Leave a Reply

Your email address will not be published. Required fields are marked *