ಶಿವಮೊಗ್ಗ ಜೈಲಿಗೆ ದರ್ಶನ್ ಗ್ಯಾಂಗ್ ನ ಇಬ್ಬರು ಆರೋಪಿಗಳು | ಸೆಂಟ್ರಲ್ ಜೈಲ್ ಮೇಲೆ ಎಸ್ಪಿ ರೈಡ್

ಶಿವಮೊಗ್ಗ ಜೈಲಿಗೆ ದರ್ಶನ್ ಗ್ಯಾಂಗ್ ನ ಇಬ್ಬರು ಆರೋಪಿಗಳು | ಸೆಂಟ್ರಲ್ ಜೈಲ್ ಮೇಲೆ ಎಸ್ಪಿ ರೈಡ್

ಶಿವಮೊಗ್ಗ : ಕೇಂದ್ರ ಕಾರಾಗೃಹಕ್ಕೆ ಇಂದು ದರ್ಶನ್‌ ಗ್ಯಾಂಗ್‌ ನ ಇಬ್ಬರು ಸದಸ್ಯರನ್ನ ಶಿಫ್ಟ್‌ ಮಾಡಲಾಗುತ್ತಿದೆ. ಶಿವಮೊಗ್ಗ ಪೊಲೀಸ್‌ ಈ ಕಾರಣಕ್ಕಾಗಿ ಬೆಳ್ಳಂ ಬೆಳಗ್ಗೆ ಸೋಗಾನೆಯಲ್ಲಿರುವ ಸೆಂಟ್ರಲ್‌ ಜೈಲ್‌ ಮೇಲೆ ದಾಳಿ ಮಾಡಿದೆ.

ಶಿವಮೊಗ್ಗದ ಸೊಗಾನೇಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ  ಶಿವಮೊಗ್ಗ ಎಸ್‌.ಪಿ ಮಿಥುನ್‌ ಕುಮಾರ್‌ ನೇತೃತ್ವದ ಟೀಂ ದಾಳಿ ನಡೆಸಿದೆ.ಎಸ್‌.ಪಿ ಮಿಥುನ್‌ ಕುಮಾರ್‌ ಮತ್ತು ಟೀಂನಲ್ಲಿ  ಹಲವು  ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ. 

ಪೊಲೀಸರು ಜೈಲಿನ ಪ್ರತಿ ಬ್ಯಾರಕ್‌ಗಳನ್ನ ತಪಾಸಣೆ ನಡೆಸಿದ್ದಾರೆ. ಅಲ್ಲದೆ ನಿಷೇಧಿತ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಾವುದೇ ನಿಷೇದಿತ ವಸ್ತುಗಳು ಸಿಕ್ಕಿರುವುದಿಲ್ಲ. ಇನ್ನೂ ರೇಣುಕಾಸ್ವಾಮಿ‌ಕೊಲೆ ಆರೋಪಿಗಳಿಬ್ಬರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ ಆಗುವ ಮುನ್ನವೇ ನಡೆದಿರುವ ಈ ದಾಳಿ ಮಹತ್ವದ ಪಡೆದುಕೊಂಡಿದೆ.

About The Author

Leave a comment