ಹೊಸನಗರ ತಾಲೂಕು ಮಟ್ಟದ ಕೆ.ಡಿ.ಪಿ ಸಮಿತಿಯ ಸದಸ್ಯರಾಗಿ 6 ಮಂದಿ ನಾಮ ನಿರ್ದೇಶನ
ಹೊಸನಗರ : ಕರ್ನಾಟಕ ಸರ್ಕಾರದ ಹೊಸನಗರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಯ ಸದಸ್ಯರಾಗಿ 6 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ.
ಕೆಡಿಪಿ ಸದಸ್ಯರನ್ನಾಗಿ ಸುಮಾ ಸುಬ್ರಹ್ಮಣ್ಯ, ಆಸೀಫ಼್ ಭಾಷಾ ರಿಪ್ಪನ್ಪೇಟೆ, ಚಂದ್ರೇಶ್ ರಿಪ್ಪನ್ಪೇಟೆ ,ಮಂಜಪ್ಪ ಆಲಗೇರಿಮಂಡ್ರಿ , ಸಿ ಆರ್ ನಾಗೇಂದ್ರ ನಿಟ್ಟೂರು ,ಗುರುರಾಜ್ ಕಡಸೂರು ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಕೆಡಿಪಿ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ನೂತನ ಸದಸ್ಯರುಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ , ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ , ಜಿಪಂ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್ , ಬಿ ಪಿ ರಾಮಚಂದ್ರ , ರಿಪ್ಪನ್ಪೇಟೆ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು ಶುಭಾಶಯ ಕೋರಿದ್ದಾರೆ.