ANANDAPURA | ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು
ಆನಂದಪುರ : ಇಲ್ಲಿನ ಮಹಂತಿನ ಮಠ ಚಂಪಕ ಸರಸ್ ನಲ್ಲಿ ಈಜಲು ಇಳಿದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ.
ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದರು ಇದರ ಹಿನ್ನೆಲೆ ಚಂಪಕ ಸರಸುವಿಗೆ ಬಂದ ಕುಶಾಲ್ ಮತ್ತು ತಂಡದವರು ಫೋಟೋಶೂಟ್ ಕೂಡ ಮಾಡಿದ್ದಾರೆ.

ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆದರೆ ಕೆಲ ಹೊತ್ತಿನಲ್ಲಿ ನೀರಿನಲ್ಲಿ ಮುಳುಗಿದ ವ್ಯಕ್ತಿ ನಾಪತ್ತೆಯಾಗಿದ್ದು ಆತನ ಸ್ನೇಹಿತರಿಗೆ ಭಯವನ್ನುಂಟುಮಾಡಿದೆ, ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ. 
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 
                         
                         
                         
                         
                         
                         
                         
                         
                         
                        