ಅಡಿಕೆ ಕಳ್ಳತನ ಮಾಡುತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು | ಮಾಲು ಸಹಿತ ವಾಹನ ವಶಕ್ಕೆ | Crime news

ಅಡಿಕೆ ಕಳ್ಳತನ ಮಾಡುತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು | ಮಾಲು ಸಹಿತ ವಾಹನ ವಶಕ್ಕೆ | Crime news

ಮಲೆನಾಡು ಭಾಗದಲ್ಲಿ ಅಡಿಕೆ ಕಳ್ಳತನವೆಸಗುತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.


ತೀರ್ಥಹಳ್ಳಿ ತಾಲ್ಲೂಕಿನ ಕಲ್ಕೊಪ್ಪ ಕರಕುಚ್ಚಿ ಗ್ರಾಮದ ದೇವಾದಾಸ್ ಎಂಬುವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನವಾಗಿದ್ದು ಅಡಿಕೆ ಕಳ್ಳತನ ಮಾಡಿದ್ದ ನಾಲ್ವರನ್ನು ವಾಹನ ಹಾಗೂ ಮಾಲು ಸಮೇತ ಮಾಳೂರು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಾಳೂರು ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದವರ ಪ್ರಕರಣವನ್ನು ಬೆನ್ನು ಹತ್ತಿದ  ಪೊಲೀಸರ ತಂಡ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದು ಕಳ್ಳರಿಂದ ಅಂದಾಜು 80 ಸಾವಿರ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ 3 ಲಕ್ಷ ರೂ ವೆಚ್ಚದ ಬೊಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಶಿಕಾರಿಪುರ ಮೂಲದ ಹನುಮಂತ,  ಅಭಿಷೇಕ್ ಹಾಗೂ ತುಕಾರಾಜ್ ಎಂಬುವರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯೂ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ಮಾಳೂರು ಸಿಪಿಐ ಶ್ರೀಧರ್ ರವರ ಮಾರ್ಗದರ್ಶನದಲ್ಲಿ  ನಡೆದಿದೆ.

Leave a Reply

Your email address will not be published. Required fields are marked *