w
Headlines
Home » ಕಡಸೂರು ಗ್ರಾಮದ ಅರಣ್ಯ ಒತ್ತುವರಿ ತೆರವು

ಕಡಸೂರು ಗ್ರಾಮದ ಅರಣ್ಯ ಒತ್ತುವರಿ ತೆರವು

GridArt 20240808 203149015.jpg

ಹೊಸನಗರ: 2021-22ರ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುರುವಾರ ಇಲಾಖೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

ತಾಲೂಕಿನ ಹುಂಚ ಹೋಬಳಿ ಕಡಸೂರು ಗ್ರಾಮದ ಸ.ನಂ.72ರ ಪರಿಭಾವಿತ ಅರಣ್ಯ ಪ್ರದೇಶದಕ್ಕೆ ತೆರಳಿ, ಸ್ಥಳದಲ್ಲಿ ಇಂಗು ಗುಂಡಿ ನಿರ್ಮಿಸಿ, ಕಾಡುಜಾತಿಯ ಗಿಡಗಳನ್ನು ನೆಟ್ಟು, ಸುಮಾರು ಒಂದು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆದಿದ್ದಾರೆ.

ಈ ತೆರವು ಕಾರ್ಯವು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೊಸನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.