January 11, 2026

ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ snake kiran rescue python

GridArt_20240807_000031175.jpg

ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ(Thirthahalli) ಪಟ್ಟಣದ ಕುರುಬರ ಪಾಳ್ಯದಲ್ಲಿ ನಡೆದಿದೆ.

ತೀರ್ಥಹಳ್ಳಿಯ ಕುರುಬರ ಪಾಳ್ಯದ ಬಳಿ ಸುಹಾಸ್ ಎಂಬುವರ ಮನೆಯ ಗೋವುಗಳ ಸಾಕುವ ಹುಲ್ಲಿನ ಅಡಿಯಲ್ಲಿ ಏಳೂವರೆ ಅಡಿ ಉದ್ದದ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು, ಉರಗ ತಜ್ಞ ಕಿರಣ್(snake kiran) ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ

ಮೇವನ್ನು ತರಲು ಹೋದಾಗ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು ಬಯದಿಂದ ಯಾವ ಹಾವೆಂದು ತಿಳಿದುಕೊಳ್ಳಲು ಉರಗ ತಜ್ಞ ಕಿರಣ್ ಕರೆ ಮಾಡಿ ಕರೆಸಿದ್ದರು, ಗ್ರಾಮಸ್ಥರ ಸಹಾಯದಿಂದ ಅರ್ಧ ಗಂಟೆ ಆ ಜಾಗದಲ್ಲಿ ಹುಡುಕಿ , ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬವನ್ನು ಹಾವನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಹಾವಿನ ತೂಕ ಸುಮಾರು 07 ಕೆಜಿ 705 ಗ್ರಾಂ ಇದ್ದು , ವಯಸ್ಸು 08ರಿಂದ 10 ವರ್ಷ ವಯಸ್ಸಾಗಿತ್ತು ಎಂದು ತಿಳಿಸಿದ್ದಾರೆ

About The Author

Leave a Reply

Your email address will not be published. Required fields are marked *