Headlines

ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ..

ರಿಪ್ಪನ್ ಪೇಟೆ:: ನರೇಂದ್ರ ಮೋದಿ ಆಡಳಿತದಲ್ಲಿ ತೈಲಬೆಲೆ, ಆಹಾರ ಪದಾರ್ಥಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಕಡಿತಗೊಳಿಸದೇ ನರೇಂದ್ರ ಮೋದಿ ಬೆಲೆ ಏರಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಆದ್ದರಿಂದ ಮೋದಿ ದುರಾಡಳಿತವನ್ನು ಖಂಡಿಸಿ ಬೆಲೆ ಏರಿಕೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ರಿಪ್ಪನ್ ಪೇಟೆಯ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರೂ ಹಾಗೂ ರಿಪ್ಪನ್ ಪೇಟೆಯ ಗ್ರಾಮಪಂಚಾಯಿತಿ ಸದಸ್ಯರಾದ ಬಿ.ಆಸೀಪ್
ನಾವು ಚುನಾವಣೆ ರ‍್ಯಾಲಿ ಮಾಡುತ್ತಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ಭರವಸೆಯೂ ಉಳಿದಿಲ್ಲ. ವಿದ್ಯುತ್ ದರ ಸಹ ಏರಿಕೆ ಮಾಡಲು ನಿರ್ಧರಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಸಾಮಾನ್ಯರ ಸಂಕಷ್ಟ ಅರಿವಾಗದ ಸರ್ಕಾರಕ್ಕೆ ಧಿಕ್ಕಾರ’ ಎಂದರು.
 ‘ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಮಧ್ಯಮ, ಬಡ ವರ್ಗದವರಿಗೆ ಸಮಸ್ಯೆ ತಂದೊಡ್ಡಿದೆ. ತೈಲ ಬೆಲೆ ಏರಿಕೆ ಮಾಡುವ ಮೂಲಕ ಕೋವಿಡ್ ಸಂಕಷ್ಟದಲ್ಲಿಯೂ ಬದುಕನ್ನು ಇನ್ನಷ್ಟು ದುಸ್ತರ ಮಾಡಿದೆ. ಕಚ್ಚಾತೈಲದ ಬೆಲೆ ಇಳಿಕೆಯಾದರೂ ಟ್ಯಾಕ್ಸ್ ಹೆಚ್ಚಿಸಿ, ಅದರ ಲಾಭ ಗ್ರಾಹಕರಿಗೆ ಸಿಗದ ಹಾಗೆ ವಂಚಿಸಿದೆ’ ಎಂದು ಆರೋಪಿಸಿದರು.
ಇಷ್ಟೆಲ್ಲ ಬೆಲೆ ಏರಿಕೆಯಾಗಿದ್ದರೂ ಕಡಿವಾಣ ಹಾಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಕೇವಲ ಕಾಟಾಚಾರಕ್ಕಾಗಿ ಆಡಳಿತ ನಡೆಸುತ್ತಿದೆ. ಈ ಬೇಜವಾಬ್ದಾರಿ ಸರ್ಕಾರ ತೊಲಗದೆ ಹೋದರೆ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ತಲುಪುತ್ತದೆ. ಹೀಗಾಗಿ ಕೂಡಲೇ ಬೆಲೆ ಏರಿಕೆಯನ್ನ ಕಡಿತಗೊಳಿಸಬೇಕು, ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯರಾದ ಬಿ.ಪಿ ರಾಮಚಂದ್ರ, ಶ್ವೇತಾ ಆರ್ ಬಂಡಿ ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ವೇದಾವತಿ,ಸಾರಾಭಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ ಹಾಗೂ  ಚಂದ್ರೇಶ್. ಮಧುಸೂದನ್, ಗಣಪತಿ, ಧನಲಕ್ಷ್ಮೀ, ಪ್ರಕಾಶ್ ಪಾಲೇಕಾರ್, ಡಾಕಪ್ಪ,ಉಲ್ಲಾಸ, ರಮೇಶ್,ಇನ್ನಿತರರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *